ಹಾಪುರದಲ್ಲಿ ಪತಿ ಗೆಳತಿಯೊಂದಿಗೆ ರೆಸ್ಟೋರೆಂಟ್‌ನಲ್ಲಿದ್ದಾಗ ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ. ಪತಿ ಪರಾರಿಯಾದರೆ, ಗೆಳತಿಯನ್ನು ನಡುಬೀದಿಯಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Hapur wife Wife attacks husband's girlfriend: ಉತ್ತರ ಪ್ರದೇಶದ ಹಾಪುರದ ಪಿಲ್ಖುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಒಬ್ಬ ಮಹಿಳೆ ತನ್ನ ಪತಿಯನ್ನು ಅವನ ಗೆಳತಿಯೊಂದಿಗೆ ರೆಸ್ಟೋರೆಂಟ್‌ನಲ್ಲಿ ಚೆಲ್ಲಾಟವಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದು, ಗೆಳತಿಯನ್ನು ನಡುಬೀದಿಯಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲೇನಿದೆ?:
ವಿವಾಹಿತ ವ್ಯಕ್ತಿಯೊಬ್ಬ ತನ್ನ ಗೆಳತಿಯೊಂದಿಗೆ ಹಾಪುರದ ರೆಸ್ಟೋರೆಂಟ್‌ವೊಂದರಲ್ಲಿ ಕಾಫಿ ಕುಡಿಯುತ್ತಿದ್ದಾನೆ. ಗೆಳತಿಯೊಂದಿಗೆ ಹೋಟೆಲ್ ಗೆ ಹೋಗಿರುವ ವಿಷಯ ಹೆಂಡತಿಗೆ ಗೊತ್ತಾಗಿ, ಆಕೆ ಕುಟುಂಬದೊಂದಿಗೆ ರೆಸ್ಟೋರೆಂಟ್‌ಗೆ ಧಾವಿಸಿದ್ದಾಳೆ. ಪತ್ನಿ ರೆಸ್ಟೊರೆಂಟ್ ಒಳಗೆ ನುಗ್ಗುವುದು ಕಂಡು ಗಂಡನಿಗೆ ಕೈಕಾಲು ನಡುಕ ಶುರುವಾಗಿದೆ. ಮುಂದಾಗಲಿರುವ ಅನಾಹುತ ತಿಳಿದ ಗಂಡ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾನೆ.
ಹೆಂಡತಿ ಕೋಪಕ್ಕೆ ಗಂಡ ಎಸ್ಕೇಪ್, ಗೆಳತಿಗೆ ಗೂಸಾ:
ತನ್ನ ಹೆಂಡತಿಯನ್ನು ಕಂಡು ಗಾಬರಿಗೊಂಡ ಪತಿ, ಅನಾಹುತದಿಂದ ತಪ್ಪಿಸಿಕೊಳ್ಳಲು ರೆಸ್ಟೋರೆಂಟ್‌ನಿಂದ ಓಡಿಹೋಗಿದ್ದಾನೆ. ಆದರೆ, ಅದಾಗಲೇ ಕೋಪದಿಂದ ಕೆರಳಿದ್ದ ಹೆಂಡತಿ ತನ್ನ ಗಂಡನ ಗೆಳತಿಯನ್ನು ಹಿಡಿದು, ರೆಸ್ಟೋರೆಂಟ್‌ನ ಹೊರಗೆ ಎಳೆದು ತಂದು ಹಿಗ್ಗಾಮುಗ್ಗಾ ಜಾಡಿಸಿದ್ದಾಳೆ.
ಎಚ್ಚರಿಕೆ ನೀಡಿದ್ದರೂ ಚೆಲ್ಲಾಟ ಮುಂದುವರಿಸಿದ್ದ ಗೆಳತಿ:
ಕಳೆದ ಎರಡು ತಿಂಗಳಿಂದ ತನ್ನ ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಿದ್ದ ಈ ಮಹಿಳೆ, ಗೆಳತಿಯನ್ನು ಎಚ್ಚರಿಸಿದರೂ ಆಕೆ ತನ್ನ ಪತಿಯಿಂದ ದೂರವಿರಲಿಲ್ಲ ಎಂದು ಆರೋಪಿಸಿದ್ದಾಳೆ. ಇದರಿಂದ ಕೆರಳಿದ ಆಕೆ, ಗೆಳತಿಗೆ ಪಾಠ ಕಲಿಸಲು ಈ ಕೃತ್ಯಕ್ಕೆ ಮುಂದಾಗಿದ್ದಾಳೆ.
ನಡುಬೀದಿಯಲ್ಲಿ ಹೈಡ್ರಾಮಾ:
ರೆಸ್ಟೋರೆಂಟ್ ಮುಂದೆ ನಡೆದ ಈ ಹೈ ವೋಲ್ಟೇಜ್ ಡ್ರಾಮಾವನ್ನು ನೋಡಲು ಜನರು ಜಮಾಯಿಸಿದರು. ಕುಟುಂಬಸ್ಥರು ಗೆಳತಿಗೆ ಎಚ್ಚರಿಕೆ ನೀಡಿ, ನಂತರ ಆಕೆಯನ್ನು ಬಿಟ್ಟಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ,
