ಲುಟನ್‌ನಿಂದ ಸ್ಕಾಟ್ಲೆಂಡ್‌ಗೆ ಹೋಗುತ್ತಿದ್ದ ಈಸಿಜೆಟ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಬಾಂಬ್ ಬೆದರಿಕೆ ಹಾಕಿ 'ಅಲ್ಲಾಹು ಅಕ್ಬರ್' ಎಂದು ಕೂಗಿದ ಘಟನೆ ಆತಂಕ ಸೃಷ್ಟಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರನ್ನು ನೆಲಕ್ಕೆ ಬೀಳಿಸಿ ನಿಯಂತ್ರಿಸುವ ದೃಶ್ಯವಿದೆ.
ವೈರಲ್ ವಿಡಿಯೋ: ಭಾನುವಾರ (ಜುಲೈ.27) ಭಾನುವಾರ (ಜುಲೈ 27, 2025) ಇಂಗ್ಲೆಂಡ್‌ನ ಲುಟನ್‌ನಿಂದ ಸ್ಕಾಟ್ಲೆಂಡ್‌ಗೆ ಹೋಗುತ್ತಿದ್ದ ಈಸಿಜೆಟ್ ವಿಮಾನವು ಆತಂಕ ಸೃಷ್ಟಿಸಿತು. ಆಗ ಒಬ್ಬ ಪ್ರಯಾಣಿಕ ಇದ್ದಕ್ಕಿದ್ದಂತೆ ತನ್ನ ಸೀಟಿನಿಂದ ಎದ್ದು ತನ್ನ ಬಳಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದನು. ಪ್ರಯಾಣಿಕನು ತನ್ನ ಬಳಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ ನಂತರ ಸ್ಕಾಟ್ಲೆಂಡ್‌ಗೆ ಹೋಗುತ್ತಿದ್ದ ವಿಮಾನವು ತನ್ನ ಮಾರ್ಗವನ್ನು ಬದಲಾಯಿಸಬೇಕಾಯಿತು. ಪೈಲಟ್ ವಿಮಾನವನ್ನು ಸ್ಕಾಟ್ಲೆಂಡ್ ಬದಲಿಗೆ ಬೇರೆ ದಿಕ್ಕಿಗೆ ತಿರುಗಿಸಿದನು.
ಅಲ್ಲಾಹು ಅಕ್ಬರ್ ಎಂದು ಕೂಗಲು ಆರಂಭಿಸಿದ:
ಘಟನೆ ಇಷ್ಟಕ್ಕೆ ಸೀಮಿತವಾಗಿರಲಿಲ್ಲ. ಬಾಂಬ್ ಬೆದರಿಕೆಯ ನಂತರ, ಆ ಪ್ರಯಾಣಿಕ ತನ್ನ ಆಸನದಿಂದ ಎದ್ದು ಅಲ್ಲಾಹು ಅಕ್ಬರ್ ಎಂದು ಕೂಗಲು ಪ್ರಾರಂಭಿಸಿದನು. ಇದಲ್ಲದೆ, 'ಅಮೆರಿಕಕ್ಕೆ ಸಾವು' 'ಟ್ರಂಪ್‌ಗೆ ಸಾವು' ಎಂದು ಜೋರಾಗಿ ಘೋಷಣೆ ಕೂಗಲಾರಂಭಿಸಿದ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಪ್ರಯಾಣಿಕನನ್ನು ಇತರ ಪ್ರಯಾಣಿಕರು ಹಿಡಿದು ವಿಮಾನದಲ್ಲೇ ನೆಲಕ್ಕೆ ಬಿಳಿಸಿ ನಿಯಂತ್ರಿಸುವ ದೃಶ್ಯ ಕಂಡುಬಂದಿದೆ. ಆದರೂ, ಆತ 'ಅಲ್ಲಾಹು ಅಕ್ಬರ್' ಎಂದು ಕೂಗುವುದನ್ನು ಮುಂದುವರೆಸಿದನು.
ಆತಂಕಕ್ಕೊಳಗಾದ ಪ್ರಯಾಣಿಕರು:
ವಿಡಿಯೋದಲ್ಲಿ, ಈ ಗದ್ದಲದಿಂದ ಆಘಾತಕ್ಕೊಳಗಾದ ಮತ್ತು ಭಯಭೀತರಾದ ಪ್ರಯಾಣಿಕರನ್ನು ಕಾಣಬಹುದು, ವಿಶೇಷವಾಗಿ ಕೆಲವು ಮಹಿಳೆಯರು ತೀವ್ರ ಆತಂಕದಲ್ಲಿರುವುದು ಗೋಚರಿಸುತ್ತದೆ. ವಿಮಾನದ ಸಿಬ್ಬಂದಿ ಭಯಗೊಂಡ ಪ್ರಯಾಣಿಕರನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದು, ಎಲ್ಲವೂ ಸರಿಯಾಗುತ್ತದೆ ಎಂದು ಭರವಸೆ ನೀಡುತ್ತಿದ್ದಾರೆ. ಆದರೆ, ಈ ವಿಡಿಯೋ ನೈಜತೆ ಬಗ್ಗೆ ಇನ್ನೂ ಅಧಿಕೃತವಾಗಿ ದೃಢೀಕರಿಸಲ್ಪಟ್ಟಿಲ್ಲ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
