ಚಳಿಗಾಲದಲ್ಲಿ ಮನೆಯಲ್ಲಿ ಬೆಚ್ಚಗಿರಲು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಬೀದಿ ನಾಯಿಗಳ ಪಾಡು ಕೇಳೋರಿಲ್ಲ. ಕೊರೆಯುವ ಚಳಿಯಲ್ಲಿ ಮುಡುಗಿ ಮಲಗುವ ಅವುಗಳಿಗೆ ಹುಡುಗಿಯೊಬ್ಬಳು ಸಹಾಯ ಮಾಡಿದ್ದಾಳೆ.
ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ಕೊರೆಯುವ ಚಳಿ (Cold) ಜಾಸ್ತಿಯಾಗ್ತಿದೆ. ಜನರು ಬೆಳಿಗ್ಗೆ 8 ಆದ್ರೂ ಹಾಸಿಗೆಯಿಂದ ಏಳ್ತಿಲ್ಲ. ಚಳಿಯಲ್ಲಿ ಮನೆಯಿಂದ ಹೊರಗೆ ಬೀಳೋದೇ ಕಷ್ಟವಾಗಿದೆ. ಚಳಿ ಬರೀ ಮನುಷ್ಯರನ್ನಲ್ಲ ಪ್ರಾಣಿಗಳನ್ನೂ ಕಾಡುತ್ತದೆ. ಚಳಿಯಲ್ಲಿ ಬೀದಿ ಬದಿಯಲ್ಲಿ ನಡುಗುತ್ತಾ ಅದೆಷ್ಟೋ ನಾಯಿಗಳು ಮಲಗಿರೋದನ್ನು ನೀವು ಕಾಣ್ಬಹುದು. ಇದನ್ನು ನೋಡಿ ಮಹಿಳೆಯೊಬ್ಬಳ ಮನಸ್ಸು ಕರಗಿದೆ. ಬೀದಿ ನಾಯಿಗಳನ್ನು ಚಳಿಯಿಂದ ರಕ್ಷಿಸುವ ನಿರ್ಧಾರಕ್ಕೆ ಹುಡುಗಿ ಬಂದಿದ್ದಾಳೆ.
ಬೀದಿ ನಾಯಿಗಳಿಗೆ ಟೀ ಶರ್ಟ್ (T-shirt) ಹಾಕಿದ ಹುಡುಗಿ
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹುಡುಗಿಬೀದಿ ನಾಯಿಗಳಿಗೆ ಟೀ ಶರ್ಟ್ ಹಾಕ್ತಿರೋದನ್ನು ನೀವು ಕಾಣ್ಬಹುದು. ನೂರಕ್ಕಿಂತಲೂ ಹೆಚ್ಚು ಟೀ ಶರ್ಟ್ ಹುಡುಗಿ ಬಳಿ ಇದೆ. ಒಂದೊಂದೇ ಟೀ ಶರ್ಟ್ ತೆಗೆದು ಹುಡುಗಿ, ನಾಯಿಗೆ ಹಾಕ್ತಿದ್ದಾಳೆ. ಸಾಮಾನ್ಯವಾಗಿ ಅಪರಿಚಿತರನ್ನು ನೋಡ್ತಿದ್ದಂತೆ ನಾಯಿಗಳು ಬೊಗಳುತ್ವೆ ಇಲ್ಲ ಕಚ್ಚಲು ಬರುತ್ವೆ. ಆದ್ರೆ ಈ ನಾಯಿಗಳು ಹಾಗೆ ಮಾಡಲಿಲ್ಲ. ಹುಡುಗಿ ಹತ್ತಿರ ಬರ್ತಿದ್ದಂತೆ ಬಾಲ ಅಲ್ಲಾಡಿಸಿಕೊಂಡು ಅವಳ ಬಳಿ ಬಂದಿವೆ. ಸುಮ್ಮನೇ ನಿಂತು ಟೀ ಶರ್ಟ್ ಗಳನ್ನು ಹಾಕಿಸಿಕೊಂಡಿವೆ.
ಕೋಟಿ ಕೋಟಿ ಬ್ಯುಸಿನೆಸ್ ಮಾಡ್ತಿದ್ದವ ಈಗ ರ್ಯಾಪಿಡೋ ಡ್ರೈವರ್, ಈತನ
Xನ @Nargis_Bano78 ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇನ್ಸ್ಟಾಗ್ರಾಮ್ ನಲ್ಲೂ ಇದು ವೈರಲ್ ಆಗಿದೆ. ಮಾನವೀಯತೆ ಎಂದರೆ ತನಗಾಗಿ ಅಲ್ಲ, ಇತರರ ಸಂತೋಷಕ್ಕಾಗಿ ಬದುಕುವುದು. ನೂರಾರು ಬೀದಿ ನಾಯಿಗಳನ್ನು ಬೆಂಬಲಿಸುತ್ತಿರುವ ಜಾಗೃತಿ ಶರ್ಮಾ, ನಾಯಿಗಳನ್ನು ಚಳಿಯಿಂದ ರಕ್ಷಿಸುವ ಕೆಲಸ ಮಾಡಿದ್ದಾರೆ. ಜಾಗೃತಿ ಶರ್ಮಾ ಚಳಿಯ ವಾತಾವರಣದಲ್ಲಿ ನಾಯಿಗಳಿಗೆ ಟಿ-ಶರ್ಟ್ಗಳನ್ನು ಹಾಕುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಶೀರ್ಷಿಕೆ ಹಾಕಿದ್ದಾರೆ.
ಈ 46 ಸೆಕೆಂಡುಗಳ ವೀಡಿಯೊವನ್ನು 52,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ನೂರಾರು ಜನರು ಇದನ್ನು ಲೈಕ್ ಮಾಡಿದ್ದಾರೆ. ವಿಡಿಯೋಕ್ಕೆ ನಾನಾ ಪ್ರತಿಕ್ರಿಯೆ ಬಂದಿದೆ. ಮಾನವೀಯತೆ ಅತ್ಯಗತ್ಯ. ಮಾನವೀಯತೆ ಎಂದರೆ ಇತರರಿಗೆ ಸಹಾಯ ಮಾಡುವುದು ಎಂದು ಬರೆದಿದ್ದಾರೆ. ಇತರರ ಸಂತೋಷದಲ್ಲಿ ಬಹಳ ಕಡಿಮೆ ಜನರು ಸಂತೋಷವನ್ನು ಕಂಡುಕೊಳ್ಳುತ್ತಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಜಾಗೃತಿ ಕೆಲಸವನ್ನು ಬಹುತೇಕರು ಮೆಚ್ಚಿಕೊಂಡಿದ್ದಾರೆ. ಮತ್ತೆ ಕೆಲವರು ಇದ್ರ ಬಗ್ಗೆ ತಮ್ಮ ಅಭಿಪ್ರಾಯ ಮುಂದಿಟ್ಟಿದ್ದಾರೆ. ನಾಯಿಗಳಿಗೆ ಬಟ್ಟೆ ಅಗತ್ಯವಿಲ್ಲ, ಅವು ಚಳಿಯಲ್ಲಿ ತಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಬೇಕು ಎಂಬುದನ್ನು ತಿಳಿದಿರುತ್ವೆ ಎಂದಿದ್ದಾರೆ.
Viral Video: ಬೈಕ್ ಸೀಟ್‌ನಲ್ಲಿ 57 ಲಕ್ಷ ಹವಾಲಾ ಹಣ ಸಾಗಿಸ್ತಿದ್ದ ಸ್ಮಗ್ಲರ್, ದಾಳಿ ಮಾಡಿದ ಪೊಲೀಸ್!
ನಾಯಿಗಳಿಗೆ ನಿಜವಾಗ್ಲೂ ಚಳಿ ಆಗುತ್ತಾ?
ಚಳಿಗಾಲದಲ್ಲಿ ನಾಯಿಗಳಿಗೆ ಚಳಿ ಆಗೋದಿಲ್ಲ ಎಂಬುದು ತಪ್ಪು ಕಲ್ಪನೆ. ಚಳಿಗಾಲದಲ್ಲಿ ನಾಯಿಗಳಿಗೂ ಚಳಿಯಾಗುತ್ತದೆ. ಆದ್ರೆ ಚಳಿಯ ಪ್ರಮಾನ ನಾಯಿ ತಳಿಗೆ ಸಂಬಂಧಿಸಿದೆ. ಕೆಲವು ಜನಪ್ರಿಯ ತಳಿಗಳು ಅತ್ಯಂತ ಕಠಿಣ ಹವಾಮಾನದಲ್ಲಿಯೂ ಹಗಲು ರಾತ್ರಿ ಕೆಲಸ ಮಾಡುತ್ತವೆ. ಇನ್ನು ಕೆಲವು ಬೆಚ್ಚಗಿನ ಹವಾಮಾನದಿಂದ ಬಂದಿವೆ ಮತ್ತು ಚಳಿಗಾಲದ ಚಳಿಯನ್ನು ಎದುರಿಸಲು ಅಗತ್ಯವಿರುವ ಹವಾಮಾನ ನಿರೋಧಕ ಕೋಟ್ಗಳನ್ನು ಹೊಂದಿರುವುದಿಲ್ಲ. ಅವುಗಳಿಗೆ ಚಳಿಗಾಲದಲ್ಲಿ ಹೆಚ್ಚು ಚಳಿಯಾಗುತ್ತದೆ. ಸಣ್ಣ ನಾಯಿಗಳು, ನಾಯಿಮರಿಗಳು ಮತ್ತು ವಯಸ್ಸಾದ ನಾಯಿಗಳು ಶೀತಕ್ಕೆ ಹೆಚ್ಚು ಒಳಗಾಗುತ್ತವೆ. ನಾಯಿಮರಿಗಳು ಮತ್ತುವಯಸ್ಸಾದ ನಾಯಿಗಳು ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಹೆಚ್ಚು ಕಷ್ಟಪಡುತ್ತವೆ. ನಾಯಿ ನಡುಗುತ್ತಿದ್ದರೆ, ಸಣ್ಣಗೆ ಕೂಗುತ್ತಿದ್ದರೆ, ಅಳ್ತಿದ್ದರೆ, ಬೆಚ್ಚಗಿನ ಜಾಗವನ್ನು ಹುಡುಕುತ್ತಿದ್ದರೆ, ಹೊರಗೆ ಹೋಗಲು ಹಿಂಜರಿಯುತ್ತಿದ್ದರೆ,ಆಲಸ್ಯ ಮಾಡ್ತಿದ್ದರೆ ಅವುಗಳಿಗೆ ಚಳಿಯಾಗ್ತಿದೆ ಎಂದರ್ಥ.


