ತುರ್ತು ಪರಿಸ್ಥಿತಿಯಲ್ಲಿ ಗಾಬರಿ, ಭಯ ಆಗೋದು ಸಹಜ. ಏನು ಮಾಡ್ಬೇಕು ಗೊತ್ತಾಗ್ದೆ ವಿನಃ ಟೆನ್ಷನ್ ಮೈಮೇಲೆ ಎಳೆದುಕೊಂಡು ದೇಹ, ಮನಸ್ಸು ಎರಡನ್ನೂ ಸುಸ್ತು ಮಾಡಿಕೊಳ್ತೇವೆ. ಲಿಫ್ಟ್ ನಲ್ಲಿ ಸಿಕ್ಕಿಬಿದ್ದಾಗ ಜನರು ಉಸಿರಾಟದ ಸಮಸ್ಯೆ ಎದುರಿಸ್ತಾರೆ. ಅದಕ್ಕೆ ಕಾರಣ ಅವರ ಭಯ. ಇಂಥ ಸ್ಥಿತಿಯನ್ನೂ ಕೂಲ್ ಆಗಿ ಎದುರಿಸದ ಹುಡುಗಿಯರು ಈಗ ಸುದ್ದಿಯಲ್ಲಿದ್ದಾರೆ.
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ವೆಸ್ಟ್ನ ಗ್ಯಾಲಕ್ಸಿ ವೇಗಾ ಅಪಾರ್ಟ್ಮೆಂಟ್ನಲ್ಲಿ ನಡೆದ ಒಂದು ಘಟನೆ ಇದೀಗ ಚರ್ಚೆಯಲ್ಲಿದೆ. ನಾಲ್ವರು ಬಾಲಕಿಯರು ಲಿಫ್ಟ್ನಲ್ಲಿ ಸುಮಾರು 30 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು. ಈ ಟೈಂನಲ್ಲಿ ಗಾಬರಿಯಾಗಿ, ಆತಂಕದಲ್ಲಿ ಕಿರುಚಾಡುವ ಬದಲು ಬಾಲಕಿಯರು ಮಾಡಿದ ಕೆಲ್ಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಹನುಮಾನ ಚಾಲೀಸಾ ಓದಿದ ಹುಡುಗಿಯರು
ಘಟನೆ ಜುಲೈ 13ರ ರಾತ್ರಿ ನಡೆದಿದೆ. ವೆಸ್ಟ್ ಗ್ಯಾಲಕ್ಸಿ ವೆಗಾ ಅಪಾರ್ಟ್‌ಮೆಂಟ್ ಲಿಫ್ಟ್ ಏಕಾಏಕಿ ಮಧ್ಯದಲ್ಲೇ ನಿಂತುಹೋಗಿತ್ತು. ವಿದ್ಯುತ್ ವ್ಯತ್ಯಯ ಉಂಟಾದ ಕಾರಣ ಲಿಫ್ಟ್ ಕಾರ್ಯನಿರ್ವಹಿಸಲಿಲ್ಲ. ಅಲ್ಲದೆ ತುರ್ತು ಪರಿಸ್ಥಿತಿಯಲ್ಲಿ ಸುರಕ್ಷಿತವಾಗಿ ಹೊರತೆಗೆಯಲು ಇರುವ ಆಟೋಮ್ಯಾಟಿಕ್ ರೆಸ್ಕ್ಯೂ ಡಿವೈಸ್ ಕೂಡ ಮೊದಲ 10 ನಿಮಿಷಗಳ ಕಾಲ ಕೆಲಸ ಮಾಡಲಿಲ್ಲ.
Viral Video: ಅತ್ತೆ ಮನೆಗೆ ಬರ್ತಿದ್ದಂತೆ ಸರ್ಪ್ರೈಸ್ ವೆಲ್ ಕಂ ನೀಡಿದ ಸೊಸೆ,
ಇಂತಹ ಪರಿಸ್ಥಿತಿಯಲ್ಲಿ ಯಾರಿಗಾದರೂ ಭಯವಾಗುವುದು ಸಹಜ. ಆದರೆ ಈ ನಾಲ್ವರು ಬಾಲಕಿಯರು ಗಾಬರಿಗೊಳಗಾಗಲಿಲ್ಲ. ಅವರು ಪರಸ್ಪರ ಧೈರ್ಯ ತುಂಬಿಕೊಂಡು, ಶಾಂತವಾಗಿರಲು ಹನುಮಾನ್ ಚಾಲೀಸಾವನ್ನು ಪಠಿಸಲು ಆರಂಭಿಸಿದರು. ಅವರ ಪ್ರಾರ್ಥನೆ ಮತ್ತು ಆತ್ಮವಿಶ್ವಾಸದಿಂದ ಆತಂಕ ಕಡಿಮೆಯಾಯ್ತು. ಅವರು ಪರಿಸ್ಥಿತಿಯನ್ನು ಸಮಾಧಾನದಿಂದ ಎದುರಿಸಲು ಸಹಾಯವಾಯ್ತು. ಲಿಫ್ಟ್ನೊಳಗಿದ್ದ ಬಾಲಕಿಯರಲ್ಲೊಬ್ಬಳು ಇದ್ರ ವಿಡಿಯೋ ಮಾಡಿಕೊಂಡಿದ್ದಾಳೆ. ವಿಡಿಯೋದಲ್ಲಿ ಅವರು ನೆಲದ ಮೇಲೆ ಕುಳಿತು ಕೈಮುಗಿದು ಹನುಮಾನ್ ಚಾಲೀಸಾ ಪಠಿಸುತ್ತಿರುವ ದೃಶ್ಯ ಕಾಣಿಸುತ್ತದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಸಾವಿರಾರು ಜನರು ಬಾಲಕಿಯರ ಧೈರ್ಯ ಮತ್ತು ಮನಸ್ಥೈರ್ಯವನ್ನು ಮೆಚ್ಚಿದ್ದಾರೆ.
30 ನಿಮಿಷದ ನಂತ್ರ ರಕ್ಷಣೆ
ಸುಮಾರು 30 ನಿಮಿಷಗಳ ನಂತರ ರಕ್ಷಣಾ ಸಿಬ್ಬಂದಿ ಲಿಫ್ಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ನಾಲ್ವರೂ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ. ಈ ಘಟನೆ, ಎಮರ್ಜನ್ಸಿಯಲ್ಲಿ ಗಾಬರಿಗೊಳ್ಳುವುದಕ್ಕಿಂತ ಶಾಂತವಾಗಿ ಯೋಚಿಸುವುದು ಅತ್ಯಂತ ಮುಖ್ಯ. ಸಹಾಯ ಬರುವವರೆಗೆ ಮನಸ್ಸನ್ನು ಸ್ಥಿರವಾಗಿಟ್ಟುಕೊಂಡರೆ ಅನೇಕ ಅಪಾಯಗಳನ್ನು ತಪ್ಪಿಸಬಹುದು. ಧೈರ್ಯ, ಪರಸ್ಪರ ಸಹಕಾರ ಮತ್ತು ಆತ್ಮವಿಶ್ವಾಸ ಯಾವುದೇ ಸಂಕಷ್ಟವನ್ನೂ ಎದುರಿಸಲು ದೊಡ್ಡ ಶಕ್ತಿಯಾಗಿವೆ ಎಂಬುದನ್ನು ವಿವರಿಸುತ್ತದೆ.


