India Jobs: ವರ್ಷಕ್ಕೆ 15 ಲಕ್ಷ ರೂಪಾಯಿ ಪ್ಯಾಕೇಜ್‌ನ MNC ಉದ್ಯೋಗ ಸಿಕ್ಕರೂ ಮಗನನ್ನು ಕೆಲಸಕ್ಕೆ ಕಳುಹಿಸದ ತಂದೆ, ಸರ್ಕಾರಿ ನೌಕರಿಗೆ ತಯಾರಿ ಮಾಡು ಎಂದು ಒತ್ತಾಯಿಸಿದ್ದಾರೆ. ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಒಬ್ಬ ಯುವಕನಿಗೆ ವರ್ಷಕ್ಕೆ 15 ಲಕ್ಷ ರೂಪಾಯಿ ಸಂಬಳದ ಕೆಲಸ ಸಿಕ್ಕಿದೆ. ಆದರೆ, ಆತನ ತಂದೆ ಆ ಕೆಲಸಕ್ಕೆ ಕಳುಹಿಸದೆ, ಸರ್ಕಾರಿ ನೌಕರಿಯೇ ಹೆಚ್ಚು ಸುರಕ್ಷಿತ, ಅದನ್ನೇ ಮಾಡು ಅಂತ ಒತ್ತಾಯಿಸುತ್ತಿದ್ದಾರೆ. ಈ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವರ್ಷಕ್ಕೆ 15 ಲಕ್ಷ ರೂಪಾಯಿ ಪ್ಯಾಕೇಜ್‌ನ ಕೆಲಸ ಸಿಕ್ಕರೂ, ಅದನ್ನೆಲ್ಲಾ ಬಿಟ್ಟು ಸರ್ಕಾರಿ ನೌಕರಿಗೆ ತಯಾರಿ ಮಾಡು ಅಂತ ಮಗನಿಗೆ ಒತ್ತಾಯ ಮಾಡಿದ ಅಪ್ಪನೊಬ್ಬರ ಕಥೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಅಂಕಿತ್ ಕೇಡಿಯಾ ಎಂಬ ಬಳಕೆದಾರರು X (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಂಡ ಪೋಸ್ಟ್‌ನಿಂದ ಈ ಚರ್ಚೆ ಶುರುವಾಗಿದೆ. ಅಂಕಿತ್ ತಮ್ಮ ಸಂಬಂಧಿಕರ ಮನೆಗೆ ಹೋದಾಗ ಈ ಘಟನೆ ನಡೆದಿದೆ ಎಂದು ಹೇಳಿಕೊಂಡಿದ್ದಾರೆ. ಅವರ ಸಂಬಂಧಿಕರ ಮಗನಿಗೆ ಒಂದು ಮಲ್ಟಿನ್ಯಾಷನಲ್ ಕಂಪನಿಯಲ್ಲಿ (MNC) 15 ಲಕ್ಷ ರೂಪಾಯಿ ಪ್ಯಾಕೇಜ್‌ನ ಕೆಲಸ ಸಿಕ್ಕಿತ್ತು. ಆದರೆ, ಮಗನ ಈ ಸಾಧನೆಯನ್ನು ಸಂಭ್ರಮಿಸುವ ಬದಲು, ಆ ತಂದೆ ಸರ್ಕಾರಿ ಕೆಲಸಕ್ಕೆ ಓದುವುದನ್ನು ಮುಂದುವರಿಸು ಅಂತ ಹೇಳಿದ್ದಾರೆ.
ಆ ತಂದೆಯ ಪ್ರಕಾರ, ಸರ್ಕಾರಿ ನೌಕರಿಯೊಂದೇ 'ನಿಜವಾದ' ಕೆಲಸವಂತೆ. ಅಡೋಬ್, ಮೈಕ್ರೋಸಾಫ್ಟ್‌ನಂತಹ ದೊಡ್ಡ ಕಂಪನಿಗಳಲ್ಲಿ ಇತ್ತೀಚೆಗೆ ನಡೆದ ಉದ್ಯೋಗ ಕಡಿತದ (layoffs) ಸುದ್ದಿಗಳನ್ನು ಕೇಳಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಖಾಸಗಿ ವಲಯದಲ್ಲಿ ದೀರ್ಘಕಾಲದ ಭದ್ರತೆ ಇಲ್ಲ, ಎಷ್ಟೇ ದೊಡ್ಡ ಸಂಬಳ ಸಿಕ್ಕರೂ ಖಾಸಗಿ ಕೆಲಸ ಅಸ್ಥಿರ ಅಂತ ಅವರು ಬಲವಾಗಿ ನಂಬಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
ತಂದೆಯ ಆತಂಕ ಸಹಜ
ಜನ ಬಗೆಬಗೆಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂದಿನ ಅನಿಶ್ಚಿತ ಕಾಲದಲ್ಲಿ ಸರ್ಕಾರಿ ನೌಕರಿಗಳು ನೀಡುವ ಭದ್ರತೆಯನ್ನು ಬೇರೆ ಯಾವುದೂ ನೀಡಲು ಸಾಧ್ಯವಿಲ್ಲ ಎಂದು ಒಂದು ವರ್ಗ ವಾದಿಸುತ್ತಿದೆ. ಉದ್ಯೋಗ ಕಡಿತದ ಬಗ್ಗೆ ತಂದೆಯ ಆತಂಕ ಸಹಜ ಎಂದು ಇವರು ಹೇಳುತ್ತಾರೆ. ಅದೇ ಸಮಯದಲ್ಲಿ, ಮಗನ ಆಸಕ್ತಿಗಳನ್ನು ಪರಿಗಣಿಸದೆ ತಮ್ಮ ಅಭಿಪ್ರಾಯವನ್ನು ಹೇರುವುದು ಸರಿಯಲ್ಲ ಎಂದು ಹಲವರು ಟೀಕಿಸಿದ್ದಾರೆ. ಮಕ್ಕಳ ಮೇಲೆ ಈ ರೀತಿ ಒತ್ತಡ ಹೇರುವುದು ಅವರ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುವವರೂ ಇದ್ದಾರೆ.


