ಭಾರತೀಯ ಗ್ರಾಹಕರೊಂದಿಗೆ ವ್ಯಾಪಾರ ಮಾಡುವುದು ಕಷ್ಟ ಮತ್ತು ಅವರು ಯಾವಾಗಲೂ ಡಿಸ್ಕೌಂಟ್ ಕೇಳುತ್ತಾರೆ ಎಂದು ಚೀನಿ ವ್ಯಾಪಾರಿಯೊಬ್ಬ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಆದರೆ, ತನ್ನ ಮೊದಲ ವಿದೇಶಿ ಆರ್ಡರ್ ನೀಡಿದ್ದು ಭಾರತೀಯನೇ ಎಂದು ಆತ ಒಪ್ಪಿಕೊಂಡಿದ್ದಾನೆ. ಈ ವಿಡಿಯೋಗೆ ಭಾರತೀಯರ ಪ್ರತಿಕ್ರಿಯೆ ಏನಿದೆ?

ಒಂದೇ ರೀತಿ ಕಾಣುವ ಚೀನಾದವರ ಜೊತೆ ವ್ಯಾಪಾರ ಮಾಡೋದು ಭಾರತೀಯರಿಗೆ ಕಷ್ಟವಾಗಿರುವಾಗ ಇಲ್ಲೊಬ್ಬ ಚೀನಿ ವ್ಯಾಪಾರಿಯೊಬ್ಬ 'ಭಾರತದ ವ್ಯಾಪಾರಿಗಳ ಜೊತೆಗೆ ಬ್ಯುಸಿನೆಸ್ ಮಾಡೋದಂದ್ರೆ ಬಹಳ ಕಷ್ಟ ಮಾರ್ರೆ' ಅಂತ ಹೇಳಿಕೊಂಡೆರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚೀನಿ ವ್ಯಕ್ತಿಯ ಆ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ ಅಷ್ಟಕ್ಕೂ ಆ ವ್ಯಕ್ತಿ ಯಾಕೆ ಹಾಗೆ ಹೇಳಿದ? ಇಲ್ಲಿದೆ ಪೂರ್ಣ ವಿವರ.

ಭಾರತೀಯರು ಎಲ್ಲದರಲ್ಲೂ ಸಿಕ್ಕಾಪಟ್ಟೆ ಡಿಸ್ಕೌಂಟ್ ಕೇಳ್ತಾರೆ

ಗ್ಲೋಬಲ್ ಸೋರ್ಸಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರೋ ಆ ವ್ಯಕ್ತಿ ಹೆಸು ಜೇ ಚೆನ್(jay Chen. ತನ್ನ Instagram ಖಾತೆಯಲ್ಲಿ ಭಾರತೀಯರ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಭಾರತೀಯ ಗ್ರಾಹಕರೊಂದಿಗೆ ವ್ಯಾಪಾರ ಮಾಡೋದು ಕಷ್ಟ. ಅವರು ಎಲ್ಲದರಲ್ಲೂ ಸಿಕ್ಕಾಪಟ್ಟೆ ಡಿಸ್ಕೌಂಟ್ ಕೇಳ್ತಾರೆ. ಪ್ರಪಂಚದ ಬೇರೆ ಬೇರೆ ಕಡೆ ಇರೋ ಭಾರತೀಯರನ್ನ ವಂಚಕರು ಅಂತಾನೇ ನೋಡ್ತಾರೆ ಅಂತ ಜೇ ಚೆನ್ ತನ್ನ ವಿಡಿಯೋದಲ್ಲಿ ಭಾರತೀಯರ ವಿರುದ್ಧ ನಾಲಗೆ ಹರಿಬಿಟ್ಟಿದ್ದಾನೆ.

ಭಾರತೀಯ ಕ್ಲೈಂಟ್‌ನಿಂದ ನನ್ನ ಬ್ಯುಸಿನೆಸ್ ಬೆಳೆಯೋಕೆ ಸಾಧ್ಯವಾಯ್ತು!

ಭಾರತೀಯರು, ಚೀನಾ ವಸ್ತುಗಳ ಬೆಲೆ ತುಂಬಾ ಜಾಸ್ತಿ ಅಂತಾ ಕ್ಲೈಂಟ್ ಯಾವಾಗಲೂ ಕಂಪ್ಲೆಂಟ್ ಮಾಡ್ತಾರೆ. ಅಷ್ಟೇ ಅಲ್ಲ ಹೆಚ್ಚಿನ ಸಲ ಅವರ ಫ್ರೀ ಸ್ಯಾಂಪಲ್ಸ್ ಮಾತ್ರ ಕೇಳ್ತಾರೆ ಎಂದು ಆರೋಪಿಸಿದ್ದಾನೆ. ಆದರೆ ಇದೆಲ್ಲದರ ಜೊತೆಗೆ ತನಗೆ ಮೊದಲ ವಿದೇಶಿ ಆರ್ಡರ್ ಕೊಟ್ಟಿದ್ದು ಒಬ್ಬ ಭಾರತೀಯ ಕ್ಲೈಂಟ್. ಆ ಆರ್ಡರ್ ತನ್ನ ಬ್ಯುಸಿನೆಸ್ ಬೆಳೆಯೋಕೆ ತುಂಬಾ ಸಹಾಯ ಮಾಡ್ತು ಅಂತಾನೂ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

View post on Instagram
 

ಭಾರತೀಯ ಗ್ರಾಹಕರು ಬುದ್ಧಿವಂತರು, ನೆಟಿಜನ್ ತಿರುಗೇಟು

ಚೆನ್ ಹಂಚಿಕೊಂಡಿರೋ ಈ ವಿಡಿಯೋಗೆ ನೆಟಿಜನ್ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಭಾರತದ ಮಾರ್ಕೆಟ್‌ನಲ್ಲಿರೋ ತೀವ್ರ ಪೈಪೋಟಿಯೇ ಈ ರೀತಿ ಬೆಲೆ ಕಡಿಮೆ ಬೆಲೆಗೆ ಡಿಮ್ಯಾಂಡ್ ಮಾಡೋಕೆ ಕಾರಣ ಎಂದು ಒಬ್ಬ ಹೇಳಿದ್ದಾನೆ. ಇದಕ್ಕೆ ಇನ್ನೊಬ್ಬ, ಭಾರತೀಯ ಗ್ರಾಹಕರು ತುಂಬಾ ಬುದ್ಧಿವಂತರು ಎಂದು ಹೇಳಿದ್ದಾರೆ. ಇನ್ನೊಬ್ಬರು, 'ಚೀನಾ ವ್ಯಾಪಾರಿಗಳು ಮೊದಲು ಒಳ್ಳೆ ಸ್ಯಾಂಪಲ್ ಕೊಡ್ತಾರೆ. ಆಮೇಲೆ ಕಳಪೆ ಗುಣಮಟ್ಟದ ವಸ್ತುಗಳನ್ನ ಕಳಿಸುತ್ತಾರೆ. ಹೀಗಾಗಿಯೇ ನೇರವಾಗಿ ಫ್ಯಾಕ್ಟರಿಗೆ ಭೇಟಿ ಕೊಟ್ಟು ಅಥವಾ ಸ್ಯಾಂಪಲ್ಸ್ ಅನ್ನು ತುಂಬಾ ದಿನಗಳ ಕಾಲ ಬಳಸಿ ನೋಡಿದ ಬಳಿಕವೇ ತಾವು ಪ್ರಾಡಕ್ಟ್ ಕ್ವಾಲಿಟಿನ್ನ ನಂಬುವುದಾಗಿ ಹಲವರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.