ಟೀಚರ್ ಕೈಯಿಂದ ತಪ್ಪಿಸಿಕೊಂಡು ನನಗೆ ಶಾಲೆ ಬೇಡ ಎಂದು ಓಡಲು ಆರಂಭಿಸಿದ ಮುದ್ದು ಬಾಲಕನ ಟೀಚರ್ ಬೆನ್ನಟ್ಟಿದ ಘಟನೆ ನಡೆದಿದೆ. ಏನು ಕೊಟ್ಟರೂ ಸಮಾಧಾನವಾಗದ ಈ ಬಾಲಕನ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.
ಅರುಣಾಚಲ ಪ್ರದೇಶ (ಜೂ.30) ಮಕ್ಕಳು ಶಾಲೆಗೆ ತೆರಳಲು ಹಿಂದೇಟು ಹಾಕುವುದು, ಮಕ್ಕಳನ್ನು ಕಿವಿ ಹಿಡಿದು ಶಾಲೆಗೆ ಬಿಟ್ಟು ಬರುವುದು ಹೊಸದೇನಲ್ಲ. ಇದೀಗ ತಾಯಿ ಪುಟ್ಟ ಬಾಲಕನ ಶಾಲೆಗೆ ಬಿಟ್ಟು ಬಂದಿದ್ದಾರೆ. ಆದರೆ ತಾಯಿ ಹಿಂದೆ ಬಾಲಕನು ಶಾಲೆಯಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ ಘಟನೆ ವರದಿಯಾಗಿದೆ. ಪುಟ್ಟ ಬಾಲಕ, ಟೀಚರ್ ಕೈಯಿಂದ ತಪ್ಪಿಸಿಕೊಂಡು ಶಾಲೆಯ ಗೇಟ್‌ನಿಂದ ಹೊರಹೋಗಲು ಓಡುತ್ತಿರುವ ಈ ದೃಶ್ಯ ಭಾರಿ ಸದ್ದು ಮಾಡುತ್ತಿದೆ. ಈ ಬಾಲಕನ ಹಿಂದೆ ಓಡಿದ ಟೀಚರ್, ಬಾಲಕನ ಸಮಾಧಾನಪಡಿಸಲು ಚಿಪ್ಸ್ ಸೇರಿದಂತೆ ಇತರ ಕೆಲ ವಸ್ತುಗಳನ್ನು ನೀಡಿದ್ದಾರೆ. ಆದರೆ ಬಾಲಕ ಮಾತ್ರ ತನೆಗೆ ಶಾಲೆ ಬೇಡ ಎಂದು ಹಠ ಹಿಡಿದ ಘಟನೆ ನಡೆದಿದೆ.
ಬ್ಯಾಗ್ ಹಿಡಿ ಮನೆಗೆ ನಡಿ
ಅರುಣಾಚಲ ಪ್ರದೇಶದ ಮುದ್ದು ಬಾಲಕನ ಸುಂದರ ಡ್ರೆಸ್ ತೊಡಿಸಿದ ತಾಯಿ ಶಾಲೆಗೆ ಬಿಟ್ಟಿದ್ದಾರೆ. ಆದರೆ ಈ ಬಾಲಕನಿಗೆ ಶಾಲೆ ಸುತಾರಾಂ ಇಷ್ಟವಿಲ್ಲ. ಎಲ್ಲಾ ಮಕ್ಕಳು ಬೆಳಗಿನ ಪ್ರಾರ್ಥನೆಗೆ ಸಾಲಾಗಿ ನಿಂತರೆ, ಈ ಮುದ್ದು ಬಾಲಕ ಬ್ಯಾಗ್ ಹಿಡಿದು ಶಾಲೆ ಆವರಣದಿಂದ ಓಟಕ್ಕಿತ್ತಿದ್ದಾನೆ. ಅಳುತ್ತಾ, ತನಗೆ ಶಾಲೆ ಬೇಡ ಎಂದು ಓಡುತ್ತಿರುವ ದೃಶ್ಯವನ್ನು ಟೀಚರ್ ಸೆರೆ ಹಿಡಿದ್ದಾರೆ. ಸೋನಂ ಜಂಗ್ಮು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಪ್ರತಿ ಶಾಲಾ ಟೀಚರ್ ಸವಾಲಿನ ಕೆಲಸ ಎಂದು ಬರೆದುಕೊಂಡಿದ್ದಾರೆ.
ಟೀಚರ್ ಕಣ್ತಪ್ಪಿಸಿ ಓಡಿದ ಬಾಲಕ
ಮಗು ಬ್ಯಾಗ್ ಕೈಯಲ್ಲಿ ಹಿಡಿದು ವೇಗವಾಗಿ ಓಡಿದ್ದಾನೆ. ಒಂದು ಕ್ಷಣ ಟೀಚರ್ ಕೂಡ ಬಾಲಕನ ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಟೀಚರ್ ನಿಲ್ಲಲು ಹೇಳುತ್ತಿದ್ದಂತೆ ಈತನ ಓಟ ಜೋರಾಗಿದೆ. ಹೀಗಾಗಿ ಟೀಚರ್ ಕೂಡ ಬಾಲಕನ ಹಿಂದೆ ಓಡಿದ್ದಾರೆ. ಪುಟ್ಟ ಹೆಜ್ಜೆಗಳನ್ನು ಅತೀ ವೇಗದಲ್ಲಿ ಇಡುತ್ತಾ ಸಾಗಿದ ಈತ, ಶಾಲಾ ವಠಾರದ ಗೇಟ್ ಬಳಿ ತಲುಪಿದ್ದಾನೆ. ಆದರೆ ಯಾವಾಗ ಟೀಚರ್ ತನ್ನ ಹಿಡಿದೇ ಬಿಡುತ್ತಾರೆ ಎಂದು ಅರಿವಾಯಿತು, ಮತ್ತಷ್ಟು ಅಳಲು ಶುರು ಮಾಡಿದ್ದಾನೆ.
ಬಾಲಕನ ಮನ ಒಲಿಸುವ ಪ್ರಯತ್ನ ವಿಫಲ
ಬಾಲಕನ ಕೈ ಹಿಡಿದು ಕರೆ ತರಲು ಟೀಚರ್ ಪ್ರಯತ್ನ ಮಾಡಿದ್ದಾರೆ. ಆದರೆ ಈ ಬಾಲಕನ ಕೋಪ, ಆಕ್ರೋಶ, ಅಳು ಎಲ್ಲವೂ ಒಮ್ಮೆಲೆ ಬಂದಿದೆ. ಬಾಲಕನ ಸಮಾಧಾನ ಪಡಿಸಿ ಮತ್ತೆ ಶಾಲೆಗೆ ಕರೆದೊಯ್ಯಲು ಟೀಚರ್ ಹಲವು ಪ್ರಯತ್ನ ಮಾಡಿದ್ದಾರೆ. ಆದರೆ ಏನೇ ಮಾಡಿದರೂ ಬಾಲಕನ ಮನಸ್ಸು ಬದಲಾಗುತ್ತಿಲ್ಲ. ಇದರ ನಡುವೆ ಬಾಲಕನಿ ಚಿಪ್ಸ್ ನೀಡಿದ್ದಾರೆ. ಆರಂಭದಲ್ಲಿ ಚಿಪ್ಸ್ ಪ್ಯಾಕೆಟ್ ಪಡೆಯಲು ಈತ ನಿರಾಕರಿಸಿದ್ದಾನೆ. ಚಿಪ್ಸ್ ಪ್ಯಾಕೆಟ್ ಬಳಿಕ ಏನೇ ನೀಡಿದರೂ ಈ ಬಾಲಕ ಮಾತ್ರ ತನಗೆ ಶಾಲೆ ಬೇಡ ಎಂದು ಮಣ್ಣಿನಲ್ಲೇ ಬಿದ್ದು ಹೊರಳಾಡಲು ಆರಂಭಿಸಿದ್ದಾನೆ.
ಟೀಚರ್ ಪರಿ ಪರಿಯಾಗಿ ಶಾಲೆಗೆ ಮರಳಲು ಕೇಳಿಕೊಂಡರು ಈ ಬಾಲಕ ಮಾತ್ರ ಮರಳು ಮನಸ್ಸೇ ಮಾಡುತ್ತಿಲ್ಲ. ಶಾಲೆ ಯಾಕೆ ಬೇಡ ಎಂದರೂ ತನಗೆ ಬೇಡ ಎಂದು ಹೇಳಿ ಅಳಲು ಶುರು ಮಾಡಿದ್ದಾನೆ. ಬಾಲಕನ ಮನ ಒಲಿಸಿ ಮತ್ತೆ ಶಾಲಗೆ ಕರೆ ತರಲು ಹಲವು ಪ್ರಯತ್ನ ಮಾಡಲಾಗಿದೆ.
ಹಲವರು ತಮ್ಮ ಮಕ್ಕಳ ಅನುಭವ ಕಮೆಂಟ್
ಈ ವಿಡಿಯೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಹಲವರು ತಮ್ಮ ಬಾಲ್ಯ, ತಮ್ಮ ಮಕ್ಕಳ ಶಾಲಾ ಅನುಭವ ಹೇಳಿಕೊಂಡಿದ್ದಾರೆ. ಇದೇ ವೇಳೆ ನರ್ಸರಿ ಟೀಚರ್ ಪ್ರತಿಕ್ರಿಯಿಸಿದ್ದಾರೆ. ನರ್ಸರಿ ಆರಂಭಗೊಂಡ ಆರಂಭಿಕ 2 ತಿಂಗಳು ಪ್ರತಿ ಶಾಲೆಯಲ್ಲೂ ಇದೇ ಪರಿಸ್ಥಿತಿ. ಒಮ್ಮೆ ಮಕ್ಕಳು ಶಾಲಾ ವಾತಾವರಣಕ್ಕೆ ಹೊಂದಿಕೊಂಡರೆ ಮತ್ತೆ ಸಮಸ್ಯೆ ಇಲ್ಲ. ಏನಾದರು ಮುದ್ದು ಮಕ್ಕಳು, ಅಮ್ಮಂದಿರ ಮಡಿಲಿನಿಂದ ಶಾಲೆಗೆ ಆಗಮಿಸಿದಾಗ ಇವು ಸಾಮಾನ್ಯ ಎಂದು ನರ್ಸರಿ ಟೀಚರ್ ಪ್ರತಿಕ್ರಿಯಿಸಿದ್ದಾರೆ.
