ಮುಂಬೈನಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವ ಯುವಕನೊಬ್ಬ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾನೆ. ತನ್ನ ವೃತ್ತಿಯಲ್ಲಿ ಸ್ವಾತಂತ್ರ್ಯ ಮತ್ತು ಸಂತೋಷವಿರುವುದರಿಂದ ಸರ್ಕಾರಿ ಕೆಲಸ ಸಿಕ್ಕರೂ ಬೇಡ ಎಂದು ಈತ ಹೇಳಿರುವ ವಿಡಿಯೋ ವೈರಲ್ ಆಗಿದೆ.

ಈಗಿನ ಕಾಲದಲ್ಲಿ ಸರ್ಕಾರಿ ಕೆಲಸ ಸಿಗಬೇಕೆಂದರೆ ಸಾಕಷ್ಟು ಪರಿಶ್ರಮದ ಜೊತೆಗೆ ಅದೃಷ್ಟ ಬೇಕು. ಏಕೆಂದರೆ ಇಂದು ದೇಶದ ಪ್ರತಿಯೊಬ್ಬರೂ ಸರ್ಕಾರಿ ನೌಕರಿ ಬಯಸುತ್ತಿರುವುದರಿಂದ ತೀವ್ರ ಪೈಪೋಟಿ ಏರ್ಪಟ್ಟಿದೆ. ಹೀಗಿರುವಾಗ ಇಲ್ಲೊಬ್ಬ ಕ್ಷೌರಿಕ ಸರ್ಕಾರಿ ಕೆಲಸಕ್ಕಿಂತ ನಾನು ಮಾಡುವ ಕ್ಷೌರಿಕ ಕೆಲಸ ಉತ್ತಮ. ಲಕ್ಷ ರೂಪಾಯಿ ಸಂಬಳ ಕೊಡ್ತಿನಂದ್ರೂ ಸರ್ಕಾರಿ ಕೆಲಸ ಬೇಡ ಎಂದಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸರ್ಕಾರಿ ಕೆಲಸಕ್ಕಿಂತ ನಾನು ಮಾಡುವ ಕ್ಷೌರಿಕ ವೃತ್ತಿಯೇ ಬೆಸ್ಟ್

ನನ್ನ ಕ್ಷೌರಿಕ ವೃತ್ತಿಯಲ್ಲಿ ಸಂತೋಷ ಇದೆ, ಫ್ರೀಡಂ ಇದೆ, ಲಾಭವೂ ಇದೆ ಎಂದಿರುವ ಯುವಕ, ನನಗೆ ಸರ್ಕಾರಿ ನೌಕರಿಯೇ ಬೇಡವೇ ಬೇಡ ಎಂದಿರುವ ಉತ್ತರ ಪ್ರದೇಶದ ಅಜಂಗಢನ ಈ ಯುವಕನ ವಿಡಿಯೋ ಸಕತ್ ವೈರಲ್ ಆಗಿದೆ.

ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಪಾದನೆ

ಮುಂಬೈನಲ್ಲಿ ಕ್ಷೌರಿಕ ವೃತ್ತಿ ಮಾಡಿಕೊಂಡಿರುವ ಯುವಕ ಹರ್ಷ್ ಗುಪ್ತ ಮಧುಸೂದನ್ ಅವರು ತಮ್ಮ ವೃತ್ತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ವಿಡಿಯೋದಲ್ಲಿ ಅವನು ತಿಂಗಳಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ಗಳಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಅದು ವಾರದಲ್ಲಿ ಆರು ದಿನ ಕೆಲಸ ಮಾಡಿ, ಎಲ್ಲ ಪ್ರಯಾಣದ ಖರ್ಚುಗಳನ್ನು ಕಳೆದ ಬಳಿಕವೂ ತಿಂಗಳಿಗೆ ಸುಮಾರು 1 ಲಕ್ಷ ರೂಪಾಯಿ ಉಳಿಯುತ್ತದಂತೆ.

ಒಂದು ವೇಳೆ ಸರಕಾರಿ ಕೆಲಸ ಸಿಕ್ಕಿದ್ರೆ ಏನು ಮಾಡ್ತೀರಾ?

ಬೆಳಗ್ಗೆ ಮನೆ ಬಿಡುವ ಯುವಕ ಮತ್ತೆ ಮನೆ ಸೇರುವುದು ಸಂಜೆ 6ರ ಮೇಲೆಯೇ. ಹೀಗೆ ದುಡಿಯುವ ಯುವಕನಿಗೆ ಸರ್ಕಾರಿ ನೌಕರಿಗೆ ಆಸೆ ಪಡುತ್ತಾನೆಯೇ? ನೆವರ್. ಅವನು ಹೇಳುವಾಗ ನನಗೆ ಸರ್ಕಾರಿ ನೌಕರಿಯ ಆಸಕ್ತಿ ಇಲ್ಲ. ಮುಂಬೈನಲ್ಲಿ ಕೆಲಸ ಉದ್ಯೋಗವಾಶಗಳಿಗೆ ಕೊರತೆಯಿಲ್ಲ. ಕಷ್ಟಪಟ್ಟು ದುಡಿಯಬೇಕು ಅಷ್ಟೇ. ಸರ್ಕಾರಿ ಕೆಲಸ ಸಿಕ್ಕರೂ ಸ್ವೀಕರಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಕ್ಷೌರಿಕ ಮಧುಸೂದನ್ ಹಿನ್ನೆಲೆ

ಕ್ಷೌರಿಕನ ಊರು, ಕುಟುಂಬದ ಬಗ್ಗೆಯೂ ಮಧುಸೂದನ್ ಮಾಹಿತಿ ಮಾತನಾಡಿದ್ದಾರೆ. ಈ ಹಿಂದೆ ಗ್ರಾಮದಿಂದ ಲಖನೌಗೆ ಪ್ರಯಾಣಿಸಲು ಏಳರಿಂದ ಎಂಟು ಗಂಟೆಗಳು ಬೇಕಾಗುತ್ತಿತ್ತು ಆದರೀಗ ಹೋಗಿರಲು ಅರ್ಧ ಗಂಟೆ ಸಾಕಾಗುತ್ತೆ ಎಂದು ಸಾರಿಗೆ ಸಂಪರ್ಕದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಮಗನನ್ನು ಖಾಸಗಿ ಪ್ರಿ-ಸ್ಕೂಲ್‌ನಲ್ಲಿ ಓದಿಸುತ್ತಿದ್ದಾರೆ. ಪತ್ನಿ ಕೆಲಸ ಮಾಡುತ್ತಿದ್ದರು. ಆದರೀಗ ಮಗುವಾಗಿರುವುದರಿಂದ ಮನೆಯಲ್ಲೇ ಇರುತಾರೆ ಕುಟುಂಬದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.