ಜೆಡಿಎಸ್ ಪ್ರಧಾನ ಕಾರ್ಯದರ್ಶಿ, ಜನಪ್ರಿಯ ನಿರೂಪಕಿ ಜಾಹ್ನವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯೊಬ್ಬನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬೆಂಗಳೂರು ಸಿಟಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಅಷ್ಟಕ್ಕೂ ಅವರಿಗೆ ಆಗಿದ್ದೇನು? ವಿವರ ಸ್ಟೋರಿಯಲ್ಲಿದೆ.
ಬೆಂಗಳೂರು: ಜೆಡಿಎಸ್ ಪ್ರಧಾನ ಕಾರ್ಯದರ್ಶಿ, ಜನಪ್ರಿಯ ನಿರೂಪಕಿ ಜಾಹ್ನವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಮಾಡಿ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿ, ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಜಹ್ನವಿ ಪೋಸ್ಟ್ನಲ್ಲಿ ಏನಿದೆ?
ಜಾಹ್ನವಿ ಅವರು ತಮ್ಮ ಪೋಸ್ಟ್ನಲ್ಲಿ ವ್ಯಕ್ತಿಯೊಬ್ಬ ತಮ್ಮೊಂದಿಗೆ ಚಾಟ್ ಮಾಡಲು ಪ್ರಯತ್ನಿಸಿದ್ದಾನೆ ಎನ್ನಲಾಗುತ್ತಿರುವ ಸ್ಕ್ರಿನ್ ಶಾಟ್ ಶೇರ್ ಮಾಡಿದ್ದಾರೆ. ಅದನ್ನು ಶೇರ್ ಮಾಡಿರುವ ಅವರು.. ಇವನು ಯಾವನೋ agent ಅಂತೆ! ಯಾವ ಪಕ್ಷದ agent ಎಂದು ಸ್ವಲ್ಪ ಪತ್ತೆ ಹಚ್ಚಿ ಎಂದು ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಮುಂದುವರಿದು ಹಿಂಬಾಗಿಲಿನಿಂದ ಬಂದು ಮಾಡೋರನ್ನು ಹೇಡಿಗಳು ಎಂದು ಕರೆಯುತ್ತಾರೆ. complaint ಕೊಟ್ಟಿದ್ದೇನೆ. ಖಾರದಪುಡಿ ರೆಡಿ ಇದೆ ಎಂದು ಬರೆದುಕೊಡಿದ್ದಾರೆ. ಬೆನ್ನಲ್ಲೇ ಜಾಹ್ನವಿ ಅವರು ಯಾಕೆ ಹೀಗೆ ಆಕ್ರೋಶ ಭರಿತವಾಗಿ ಪೋಸ್ಟ್ ಮಾಡಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ.
ಸ್ಕ್ರೀನ್ ಶಾಟ್ನಲ್ಲಿ ಏನಿದೆ?
ಅವರು ಶೇರ್ ಮಾಡಿರುವ ಸ್ಕ್ರೀನ್ ಶಾಟ್ ವಾಟ್ಸ್ಆಪ್ ಮೂಲಕ ಮಾತನ್ನಾಡಲು ಯತ್ನಿಸಿರುವ ಚಾಟಿಂಗ್ ಇದ್ದಂತೆ ಕಾಣ್ತಿದೆ. ಆರೋಪಿತ ವ್ಯಕ್ತಿಯ ನಂಬರ್ ಕೆಳಗೆ 'ಕಿಂಗ್ ಆಫ್ ಶೆಟ್ಟಿ' ಎಂಬ ಹೆಸರಿದೆ. ಹಾಯ್ ಎಂದು ಮೆಸೇಜ್ ಮಾಡಿದ್ದಾನೆ. ನಂತರ ಜಾಹ್ನವಿ ಮೇಡಂ ಆರಾಮಾ? ಎಂದು ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಜಾಹ್ನವಿ ಅವರು ನೀವು ಯಾರೆಂದು ಕೇಳಿದ್ದಾರೆ. ಅದಕ್ಕೆ ಆತ ಮೇಡಂ ನಾನು ರಕ್ಷಿತ್ ಕಿಂಗ್ 567 ಅಲ್ಲಿ.. ಎಂದು ಚಾಟಿಂಗ್ ಕಂಟಿನ್ಯೂ ಆಗಿದೆ.. ಪೂರ್ತಿ ವಿವರ ಲಭ್ಯ ಇಲ್ಲ.
ಇನ್ನು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಜಾಹ್ನವಿ ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮೇಲೆ ಕ್ರಮ ತೆಗೆದುಕೊಂಡರಾ? ಆ ರೀತಿ ಮೆಸೇಜ್ ಮಾಡಿದ್ದರು ಯಾರು? ಆತ ಯಾಕೆ ಹಾಗೆ ಮಾಡಿದ್ದಾನೆ? ಅನ್ನೋದ್ರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಬೆಂಗಳೂರು ಪೊಲೀಸರ ಕ್ರಮದ ಬಗ್ಗೆ ಮಾಹಿತಿ ಬರಬೇಕಿದೆ.
ಜೆಡಿಎಸ್ನಲ್ಲಿ ಮಹತ್ವದ ಜವಾಬ್ದಾರಿ
ಸುದ್ದಿ ನಿರೂಪಣೆ, ರಿಯಾಲಿಟಿ ಶೋ, ಬಿಗ್ ಬಾಸ್ ಹಾಗೂ ಸಿನಿಮಾಗಳ ಮೂಲಕ ತಮ್ಮದೇ ಚಾಪು ಮೂಡಿಸಿದ್ದ ಜಾಹ್ನವಿ ಅವರು ರಾಜಕೀಯ ಇನ್ನಿಂಗ್ಸ್ ಆರಂಭೀಸಿದ್ದಾರೆ. ಜೆಡಿಎಸ್ ಪಕ್ಷದ ಮೂಲಕ ರಾಜಕೀಯ ಹೆಜ್ಜೆ ಆರಂಭಿಸಿರುವ ಜಾಹ್ನವಿಗೆ, ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನ ನೀಡಲಾಗಿದೆ. ಜೆಡಿಎಸ್ ಮಹಿಳಾ ಘಟಕವನ್ನು ಮತ್ತಷ್ಟು ಬಲಪಡಿಸಲು ಹೆಚ್ಡಿ ಕುಮಾರಸ್ವಾಮಿ ಪ್ಲಾನ್ ಮಾಡಿಕೊಂಡಿದ್ದಾರೆ. ಇದರ ಹಿನ್ನಲೆಯಲ್ಲಿ ಪ್ರಮುಖ ಮಹಿಳೆಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ಲಾನ್ ರೂಪಿಸಿದೆ.














