ಹೂವಿನ ಬಾಣದಂತೆ ಹಾಡು ಇತ್ತೀಚೆಗೆ ಭಾರಿ ವೈರಲ್ ಆಗಿತ್ತು. ಮೈಸೂರಿನ ಕಾಲೇಜು ಹುಡುಗಿ ಹಾಡಿದ ಈ ಹಾಡು ರಾಜ್ಯದಲ್ಲೇ ಸಂಚಲನ ಸೃಷ್ಟಿಸಿತ್ತು. ಇದೀಗ ಮಕ್ಕಳ ದಿನಾಚರಣೆಗೆ ಹೊಸ ವರ್ಶನ್ ಬಂದಿದೆ. ಮಕ್ಕಳು ಹಾಡಿದ ಸೂಪರ್ ಡೂಪರ್ ಹಾಡು.

ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಶ್ರೇಯಾ ಘೋಷಾಲ್ ಮಧುರ ಧ್ವನಿಯಲ್ಲಿ ಮೂಡಿ ಬಂದ ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ ಒರಿಜಿನಲ್ ಹಾಡಿಗಿಂತ ವೈರಲ್ ಹುಡುಗಿ ಹಾಡಿದ ಹಾಡೇ ಎಲ್ಲರ ತಲೆಯಲ್ಲಿದೆ. ಮೈಸೂರಿನ ಕಾಲೇಜು ಹುಡುಗಿ ನಿತ್ಯಶ್ರಿ ತಮ್ಮದೇ ರಾಗದಲ್ಲಿ ಹಾಡು ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಮಕ್ಕಳ ದಿನಾಚರಣೆಗೆ ಮಕ್ಕಳು ಹಾಡಿದ ಹೂವಿನ ಬಾಣದಂತೆ ಹಾಡು ಹಳೇ ಎಲ್ಲಾ ದಾಖಲೆ ಮೀರಿಸಿದೆ. ಬಾಲಕಿಯೊಬ್ಬಳು ಹೂವಿನ ಬಾಣದಂತೆ ಹಾಡನ್ನು ತನ್ನ ಶೈಲಿಯಲ್ಲಿ ಹಾಡಿದ್ದಾಳೆ. ಜೊತೆಗೆ ಹಾಡಿಗೆ ತನ್ನದೇ ರೀತಿಯಲ್ಲಿ ಹೆಜ್ಜೆ ಹಾಕಿದ್ದಾಳೆ. ಆದರೆ ಈ ವೈರಲ್ ಹಾಡಿನ ಪಂಚ್ ಇರೋದು ಕೊನೆಯ ಸಾಲಿನಲ್ಲಿ.

ಮಕ್ಕಳ ಮುಗ್ದ ಹಾಡು, ಕೊನೆಯ ಆ್ಯಕ್ಷನ್

ಶಾಲಾ ಮಕ್ಕಳು ಒಟ್ಟಾಗಿ ಈ ಹಾಡು ಹಾಡಿದ್ದಾರೆ. ವಿಶೇಷ ಅಂದರೆ ಕಾಲೇಜು ಲೆವೆಲ್‌ನಲ್ಲಿ ಪೋಸ್ ನೀಡಿದ್ದಾರೆ. ಶಾಲಾ ಬಾಲಕಿಯರ ನಡುವೆ ನಿಂತ ವಿದ್ಯಾರ್ಥಿನಿ ಹೂವಿನ ಬಾಣದಂತೆ ಹಾಡು ಹಾಡಿದ್ದಾಳೆ. ಸುತ್ತಲೂ ಇರುವ ಇತರ ಬಾಲಕಿಯರು ಸಾಥ್ ನೀಡಿದ್ದಾರೆ. ಬಾಲಕಿಯ ಮುಗ್ದತೆ, ಖುಷಿ ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ವಿಶೇಷ ಅಂದರೆ ಹಾಡನ್ನು ಆತ್ಮವಿಶ್ವಾಸದಿಂದ ಹಾಡಿದ್ದಾಳೆ.

ಕೋರಸ್‌ನಲ್ಲಿ ಪಂಚಿಂಗ್ ಕೊಟ್ಟ ಬಾಲಕಿ

ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ, ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ ಚೇತನವಾದೆ ನೀನು ಸಾಲುಗಳನ್ನು ಅದ್ಭುತವಾಗಿ ಹಾಡಲಾಗಿದೆ. ಬಳಿಕ ಬರುವ ಕೋರಸ್‌ಗೆ ಇತರ ಬಾಲಕಿಯರು ಧನಿಗೂಡಿಸಿದ್ದಾರೆ. ಇಡೀ ಹಾಡಿನಲ್ಲಿ ಪಂಚಿಂಗ್ ಲೈನ್ ಇದೇ. ಕೋರಸ್ ವೇಳೆ ನಿಮ್ಮ ಮುಖದಲ್ಲಿ ನಗು ಬರುವುದು ಖಚಿತ.

ಮೈಸೂರಿನ ಕಾಲೇಜು ವಿದ್ಯಾರ್ಥಿನಿ ನಿತ್ಯಶ್ರಿ ತನ್ನದೇ ರಾಗದಲ್ಲಿ ಹಾಡಿದ್ದಳು. ಮೂಲ ಹಾಡಿನ ರಾಗವನ್ನು ಬದಲಾಯಿಸಿದ್ದಳು. ಕೆಟ್ಟದಾಗಿ ಹಾಡಿದರೂ ಆತ್ಮವಿಶ್ವಾಸದಿಂದ ಹಾಡಿದ್ದಳು. ಹೀಗಾಗಿ ಈ ಹಾಡು ರಾತ್ರೋರಾತ್ರಿ ವೈರಲ್ ಆಗಿತ್ತು. ಸ್ವತಃ ಅರ್ಜುನ್ ಜನ್ಯ ಕೂಡ ಪ್ರತಿಕ್ರಿಯಿಸಿದ್ದರು. ಆದರೆ ಈಗ ಬಾಲಕಿ ಉತ್ತಮವಾಗಿ ಹಾಡಿದ್ದಾಳೆ. ಮೊದಲ ಚರಣದ ಅಂತ್ಯದಲ್ಲಿ ಬರುವ ಕೋರಸ್‌ನಲ್ಲಿ ಪಂಚಿಂಗ್ ನೀಡಿ ಎಲ್ಲರನ್ನು ನಗಿಸಿದ್ದಾಳೆ.

ಬಾಲಕಿ ಹಾಡಿಗೆ ಭಾರಿ ಮೆಚ್ಚುಗೆ

ಇದೀಗ ಮತ್ತೆ ಹೂವಿನ ಬಾಣದಂತೆ ಹಾಡು ವೈರಲ್ ಆಗಿದೆ. ಬಾಲಕಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದು ಮಕ್ಕಳ ದಿನಾಚರಣೆ ಸ್ಪೆಷಲ್ ಎಂದು ಹಲವರು ಕಮೆಂಟ್ಸ್ ಮಾಡಿದ್ದಾರೆ. ನಿತ್ಯಶ್ರಿ ಹಾಡಿಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಇದರಲ್ಲಿ ಬಹುತೇಕರು ಕೆಟ್ಟದಾಗಿ ಹಾಡಿ ವೈರಲ್ ಮಾಡಲಾಗಿದೆ ಅನ್ನೋ ಆರೋಪಗಳು ಕೇಳಿಬಂದಿತ್ತು. ಆದರೆ ಈ ಮಗುವಿನ ಹಾಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲರೂ ಬಾಲಕಿಯ ಪ್ರತಿಭೆ, ಹಾಡು, ಆ್ಯಕ್ಷನ್ ಸೇರಿದಂತೆ ಕೋರಸ್‌ಗೂ ಮೆಚ್ಚುಗೆ ಸೂಚಿಸಿದ್ದಾರೆ. ಇದು ಎಲ್ಲಾ ವೈರಲ್ ದಾಖಲೆ ಪುಡಿ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

2009ರಲ್ಲಿ ಬಿಡುಗಡೆಯಾದ ಬಿರುಗಾಳಿ ಸಿನಿಮಾದ ಹಾಡು ಇದು. 2009ರಲ್ಲೂ ಈ ಹಾಡು ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಆದರೆ 2025-26ರಲ್ಲಿ ಈ ಹಾಡು ನಿತ್ಯಶ್ರಿ ಕಾರಣದಿಂದ ಮತ್ತೆ ಮುನ್ನಲೆಗೆ ಬಂದಿತ್ತು. ಇದೀಗ ಮತ್ತೆ ಬಾಲಕಿಯ ಹಾಡಿನಿಂದ ವೈರಲ್ ಆಗುತ್ತಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ ನೀಡಿರುವ ಈ ಹಾಡು ಬಾಲಕಿ ಮೂಲಕ ಇದೀಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

View post on Instagram