ಮುಸ್ಲಿಂ ಮಹಿಳೆಯರಿಗೆ ಉಡಿ ತುಂಬಿದ ಶ್ರೀಗಳು !
ಲೋಕ ಕಲ್ಯಾಣಕ್ಕಾಗಿ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ರಾಯಚೂರಿನಲ್ಲಿ ನಡೆಯಿತು. ಬಂಗಾರಿಕ್ಯಾಂಪಿನ ಶ್ರೀ ಸಿದ್ಧಾಶ್ರಮ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ 48 ಮುಸ್ಲಿಂ ಮಹಿಳೆಯರು ಸೇರಿದಂತೆ 2551 ಮಹಿಳೆಯರು ಭಾಗಿಯಾಗಿದ್ರು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಬಂಗಾರಿ ಕ್ಯಾಂಪ್ನಲ್ಲಿ 2551 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು. ಬಂಗಾರಿಕ್ಯಾಂಪಿನ ಶ್ರೀ ಸಿದ್ಧಾಶ್ರಮ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಬಾಳೆಹೊನ್ನೂರು ಮಠದ ರಂಭಾಪುರಿ ಶ್ರೀಗಳಾದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರು ಉಡಿತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಮತ್ತೊಂದು ವಿಶೇಷವೆಂದರೆ 48ಕ್ಕೂ ಮುಸ್ಲಿಂ ಮಹಿಳೆಯರು ಸಹ ಉಡಿತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದೂ ಧರ್ಮದ ಸಂಪ್ರದಾಯ (Tradition)ದಂತೆ ಉಡಿತುಂಬಿಸಿಕೊಂಡು ತನ್ನ ಪತಿ ಮತ್ತು ಕುಟುಂಬದ ಆರೋಗ್ಯ (Health) ಕ್ಷೇಮವಾಗಿ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ರು.
ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಯುವಕನನ್ನು ದರದರನೆ ಎಳೆದುಕೊಂಡು ಹೋದ ಹೋರಿಗಳು
ಸಮಾರಂಭ ಉದ್ದೇಶಿಸಿ ಮಾತನಾಡಿದ ರಂಭಾಪುರಿ ಶ್ರೀಗಳು ಉಡಿತುಂಬ ಸಮಾರಂಭದಲ್ಲಿ ಮುಸ್ಲಿಂ ಮಹಿಳೆಯರು (Muslim women) ಭಾಗವಹಿಸಿದ್ದು ಹೆಮ್ಮೆಯ ವಿಷಯವಾಗಿದೆ. ಜಗದ್ಗುರುಗಳ ಎಡಭಾಗದಲ್ಲಿ ಇರುವ ಧ್ವಜ ಹಸಿರು ಧ್ವಜವಾಗಿದ್ದು, ಈ ಸಮಾರಂಭದಲ್ಲಿ ಭಕ್ತರು ಜಾತಿ, ಮತ ಮತ್ತು ಮಂಥಗಳು ಅಲ್ಲದೆ ಭಾಗವಹಿಸಿದ್ದು ನಮ್ಮ ಸಂತೋಷವಾಗಿದೆ. ಪ್ಲಾಸ್ಟಿಕ್ ಟಿಕಲಿ ಹೆಣ್ಣು ಮಕ್ಕಳಿಗೆ ಶಿಷೇಧ, ಹೆಣ್ಣು ಮಕ್ಕಳು ಶುದ್ಧವಾದ ಕುಂಕುಮ ಹಂಚಬೇಕು ಎಂಬುವುದು ನಮ್ಮ ಅಭಿಲಾಷೆವಾಗಿದೆ. ಕುಂಕುಮದಲ್ಲಿ ಅದ್ಭುತ ಶಕ್ತಿಯಿದೆ. ಕಾಮುಕ ಮನುಷ್ಯನಿಗೆ ಕುಂಕುಮ ಎಚ್ಚರಿಕೆ ನೀಡುತ್ತೆ, ಮುಖವನ್ನು ನೋಡದೇ ಪಾದವನ್ನು ನೋಡುವಂತೆ ಕುಂಕುಮ ಎಚ್ಚರಿಕೆ ನೀಡುತ್ತೆ ಎಂದ ಶ್ರೀಗಳು..