News Hour: ರೈತರ ಭೂಮಿ, ಮಠ-ದೇವಸ್ಥಾನ ಆಯ್ತು, ಈಗ ಐತಿಹಾಸಿಕ ಸ್ಮಾರಕಗಳು ವಕ್ಫ್‌ದಂತೆ!

ವಕ್ಫ್‌ ವಿಚಾರದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳು ಶುರುವಾಗಿದೆ. ರೈತರ ಭೂಮಿ, ಮಠ-ದೇವಸ್ಥಾನ ಎಲ್ಲವೂ ಆಯ್ತು ಈಗ ಐತಿಹಾಸಿಕ ಸ್ಮಾರಕಗಳು ಇರುವ ಪ್ರದೇಶಗಳು ಕೂಡ ತಮ್ಮ ಜಾಗ ಎಂದು ಹೇಳಿದೆ.
 

Santosh Naik  | Published: Nov 4, 2024, 11:25 PM IST

ಬೆಂಗಳೂರು (ನ.4): ರೈತರ ಜಮೀನು, ಮಠ, ದೇವಸ್ಥಾನಗಳ ಬಳಿಕ ಐತಿಹಾಸಿಕ ಸ್ಮಾರಕಗಳೂ ಕೂಡ ವಕ್ಫ್‌ ಅಸ್ತಿ ಎಂದು ಹೇಳಿದೆ. ವಿಜಯಪುರದಲ್ಲಿನ 43 ಸ್ಮಾರಕಗಳ ಮೇಲೆ ವಕ್ಫ್‌ ಕಣ್ಣು ನೆಟ್ಟಿದೆ. ಅದರೊಂದಿಗೆ ಜಿಲ್ಲಾದ್ಯಂತ ವಕ್ಫ್‌ ಬೋರ್ಡ್‌ ದಬ್ಬಾಳಿಕೆ ಹಬ್ಬುತ್ತಿದೆ.

ವಕ್ಫ್​ ದಬ್ಬಾಳಿಕೆ ವಿರುದ್ಧ ರಾಜ್ಯಾದ್ಯಂತ ಆಕ್ರೋಶದ ಜ್ವಾಲೆ ಶುರುವಾಗಿದೆ. 1974ರ ಗೆಜೆಟ್​ ರದ್ದಿಗೆ ಎಲ್ಲ ಜಿಲ್ಲೆಗಳಲ್ಲಿ ಕೇಸರಿಪಡೆ ರಣಕಹಳೆ ಮೊಳಗಿಸಿದೆ. ಬೊಮ್ಮಾಯಿ ಹಳೇ ಹೇಳಿಕೆ ಮುಂದಿಟ್ಟು ಕಾಂಗ್ರೆಸ್ ತಿರುಗೇಟು ನೀಡಿದೆ.

ವಕ್ಫ್ ಜಟಾಪಟಿಯಲ್ಲಿ ಸಿಎಂ ಮಹತ್ವದ ನಿರ್ಧಾರದ ಹಿಂದಿನ ಅಸಲಿ ರಹಸ್ಯವೇನು?

ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ಹಳೇ ಹೇಳಿಕೆ ಮುಂದಿಟ್ಟು ಕಾಂಗ್ರೆಸ್‌ ತಿರುಗೇಟು ನೀಡಿದೆ. ಈ ವೇಳೆ ಬೊಮ್ಮಾಯಿ, 'ಕಾಂಗ್ರೆಸ್‌ ನಾಯಕರು ಅತಿಕ್ರಮಣ ಮಾಡಿರುವ ಭೂಮಿಯ ಬಗ್ಗೆ ನಾನು ಆ ಮಾತನ್ನು ಹೇಳಿದ್ದೆ' ಎಂದಿದ್ದಾರೆ.
 

Read More...