Asianet Suvarna News Asianet Suvarna News

ಉಡುಪಿ: ಪ್ರಕೃತಿ ಸೌಂದರ್ಯದಿಂದ ಕೂಡಿರುವ ತಾಣ ಪ್ರವಾಸಿ ತಾಣವಲ್ಲ, ಡಂಪಿಂಗ್ ಯಾರ್ಡ್ ಅಂತೆ.!

- ಮೋಕ್ಷಗಿರಿಯಲ್ಲಿ ಡಂಪಿಂಗ್ ಯಾರ್ಡ್ ಜನರ ಭಾವನೆಗೆ ಧಕ್ಕೆ

- ಮಣಿಪುರ ಪಂಚಾಯತ್‌ನ ನಡೆಗೆ ಜನರಿಂದ ವಿರೋಧ

- ಧಾರ್ಮಿಕ ಸಾಕ್ಷಿಗಳಿಗೆ ಹೆಸರುವಾಸಿಯಾಗಿರುವ ಮೋಕ್ಷಗಿರಿ ಬೆಟ್ಟ

ಉಡುಪಿ (ಸೆ. 04): ಜನವಸತಿ ಇಲ್ಲದ ನಿರ್ಜನ ಪ್ರದೇಶಗಳಲ್ಲಿ ಡಂಪಿಂಗ್ ಯಾರ್ಡ್ ಮಾಡೋದು ಸಹಜ.ಆದರೆ ಉಡುಪಿಯಲ್ಲಿ ಹಾಗಲ್ಲ, ಊರಿನಲ್ಲಿ ನಿಸರ್ಗ ಸೌಂದರ್ಯದಿಂದ ಶ್ರೀಮಂತವಾಗಿರುವ ಧಾರ್ಮಿಕ ಸ್ಥಳ ಮೋಕ್ಷಗಿರಿ ಪಕ್ಕದಲ್ಲೇ ಡಂಪ್ ಯಾರ್ಡ್ ಮಾಡಲಾಗುತ್ತಿದೆ.

ಮೋದಿ ಕನಸಿನ ಜಲ ಜೀವನ್ ಮಿಷನ್ ಯೋಜನೆ ಹಳ್ಳ ಹಿಡಿಯಲು ಅಸಲಿ ಕಾರಣ!

ಮೋಕ್ಷಗಿರಿಯನ್ನು ದೊಡ್ಡ ಪ್ರವಾಸಿ ತಾಣವನ್ನಾಗಿಸಬೇಕು ಎಂದು ಹೊರಟಿದ್ದ ಗ್ರಾಮಸ್ಥರಿಗೆ ಶಾಕ್ ಕಾದಿದೆ.  ಗ್ರಾಮಸ್ಥರರಿಗೆ ತಿಳಿಸದೇ ಗ್ರಾಮ ಪಂಚಾಯತ್ ಅಧ್ಯಕ್ಷ ಡಂಪಿಂಗ್ ಯಾರ್ಡ್ ಮಾಡಲು ಮುಂದಾಗಿದ್ದಾರೆ. ಇವರ ಶಿಫಾರಸ್ಸಿನಂತೆ ಜಿಲ್ಲಾಧಿಕಾರಿಗಳೂ ಡಂಪಿಂಗ್ ಯಾರ್ಡ್‌ಗೆ ಭೂಮಿಯನ್ನು ಮಂಜೂರು ಮಾಡಿದ್ಧಾರೆ. ಇದು ಗ್ರಾಮಸ್ಥರನ್ನು ಕೆರಳಿಸಿದೆ.