Asianet Suvarna News Asianet Suvarna News

ಕನ್ನಡತಿ; ಭುವಿ ಚಿಕ್ಕಮ್ಮ ಸಹನಾ ಸೈಲೆಂಟ್ ಆಗಿರುವುದೇಕೆ?

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಕನ್ನಡತಿ ಕೂಡ ಒಂದು. ಹರ್ಷ ಮತ್ತು ಭುವಿ ಪಾತ್ರಕ್ಕೆ ಕನ್ನಡ ಪ್ರೇಕ್ಷಕರು ಮನಸೋತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಹರ್ಷ ಮತ್ತು ಭುವಿ ಮದುವೆ ಸಂಭ್ರಮ ನಡೆಯುತ್ತಿದೆ. ಅದ್ದೂರಿಯಾಗಿ ನಡೆಯುತ್ತಿರುವ ಮದುವೆಯಲ್ಲಿ ಅನೇಕ ಟ್ವಿಸ್ಟ್ ಅಂಡ್ ಟರ್ನ್‌ಗಳು ನೋಡುಗರ ಕುತೂಹಲ ಹೆಚ್ಚಿಸುತ್ತಿದೆ. ಹರ್ಷ ಮತ್ತು ಭುವಿ ಮದುವೆಯಲ್ಲಿ ಅಮ್ಮಮ್ಮ ಇರ್ತಾರಾ ಎನ್ನುವುದೇ ಪ್ರೇಕ್ಷಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ರತ್ನಮಾಲಾ ಆಸೆಯಂತೆ ಮದುವೆ ನಡೆಯುತ್ತಾ ಎಂದುಪ್ರೇಕ್ಷಕರು ಕುತೂಹಲದಿಂದ ಧಾರಾವಾಹಿ ವೀಕ್ಷಿಸುತ್ತಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಕನ್ನಡತಿ ಕೂಡ ಒಂದು. ಹರ್ಷ ಮತ್ತು ಭುವಿ ಪಾತ್ರಕ್ಕೆ ಕನ್ನಡ ಪ್ರೇಕ್ಷಕರು ಮನಸೋತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಹರ್ಷ ಮತ್ತು ಭುವಿ ಮದುವೆ ಸಂಭ್ರಮ ನಡೆಯುತ್ತಿದೆ. ಅದ್ದೂರಿಯಾಗಿ ನಡೆಯುತ್ತಿರುವ ಮದುವೆಯಲ್ಲಿ ಅನೇಕ ಟ್ವಿಸ್ಟ್ ಅಂಡ್ ಟರ್ನ್‌ಗಳು ನೋಡುಗರ ಕುತೂಹಲ ಹೆಚ್ಚಿಸುತ್ತಿದೆ. ಹರ್ಷ ಮತ್ತು ಭುವಿ ಮದುವೆಯಲ್ಲಿ ಅಮ್ಮಮ್ಮ ಇರ್ತಾರಾ ಎನ್ನುವುದೇ ಪ್ರೇಕ್ಷಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ರತ್ನಮಾಲಾ ಆಸೆಯಂತೆ ಮದುವೆ ನಡೆಯುತ್ತಾ ಎಂದುಪ್ರೇಕ್ಷಕರು ಕುತೂಹಲದಿಂದ ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ಹರ್ಷ ಮತ್ತು ಭುವಿ ಮದುವೆ ನಡೆಯುತ್ತಿದ್ದರೂ ಭುವಿ ಚಿಕ್ಕಮ್ಮ ಸಹನಾ ಮಾತ್ರ ಸೈಲೆಂಟ್ ಆಗಿದ್ದಾರೆ. ಭುವಿ ಚಿಕ್ಕಮ್ಮನ ಸೈಲೆನ್ಸ್ ಇನ್ನೇನಾದ್ರು ಟ್ವಿಸ್ಟ್ ಇದಿಯಾ ಎನ್ನುವ ಅನುಮಾನ ಮೂಡಿಸಿದೆ. ಈ ಬಗ್ಗೆ ಭುವಿ ಚಿಕ್ಕಮ್ಮನ ಪಾತ್ರದಲ್ಲಿ ನಟಿಸಿರುವ ಹೇಮಾ ಮಾತನಾಡಿದ್ದಾರೆ. 

Video Top Stories