Covid 3rd Wave: ಉಡುಪಿಯ ಶಾಲೆಗಳಲ್ಲಿ ಕೊರೋನಾ ಸ್ಫೋಟ: 1293 ಮಕ್ಕಳಿಗೆ ಸೋಂಕು

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಇದೀಗ ಕೊರೋನಾ ಸೋಂಕು ಸ್ಫೋಟವಾಗಿದೆ. ಜನವರಿ ಆರಂಭದಿಂದ ಇಲ್ಲಿಯವರೆಗೂ 1293 ಮಕ್ಕಳಿಗೆ ಕೊರೊನಾ ತಗುಲಿದ್ದು, ಈಗ ಆತಂಕಕ್ಕೆ ಎಡೆ ಮಾಡಿದೆ. 

First Published Jan 15, 2022, 9:41 PM IST | Last Updated Jan 15, 2022, 9:41 PM IST

ಉಡುಪಿ (ಜ. 15): ಕರ್ನಾಟಕದ (Karnataka) ಬಹುತೇಕ ಜಿಲ್ಲೆಗಳಲ್ಲಿ ಮಹಾಮಾರಿ ಕೊರೋನಾ ವೈರಸ್ (Coronavirus) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಇದೀಗ ಕೊರೋನಾ ಸೋಂಕು ಸ್ಫೋಟವಾಗಿದೆ. ಜನವರಿ ಆರಂಭದಿಂದ ಇಲ್ಲಿಯವರೆಗೂ 1293 ಮಕ್ಕಳಿಗೆ ಕೊರೊನಾ ತಗುಲಿದ್ದು, ಈಗ ಆತಂಕಕ್ಕೆ ಎಡೆ ಮಾಡಿದೆ. ಶುಕ್ರವಾರದಂದು 139 ವಿದ್ಯಾರ್ಥಿಗಳಿಗೆ ಈ ಮಹಾಮಾರಿ ಸೋಂಕು ತಗುಲಿತ್ತು. ಶಾಲೆಗಳಲ್ಲಿ ಕೊರೋನಾ ಹಬ್ಬುತ್ತಿದ್ದರೂ ಶಾಲೆಗಳನ್ನು ಮಾತ್ರ ಬಂದ್ ಮಾಡಿಲ್ಲ. ಸದ್ಯದ ಕೊರೋನಾ ಪಾಸಿಟಿವಿಟಿ ರೇಟ್ ಶೇ. 7.40 ಇದೆ.

Karnataka Covid 19 Relief: ಕೋವಿಡ್‌-19 ಕೇಸ್ ಹೆಚ್ಚಳ, ಆಸ್ಪತ್ರೆಗೆ ದಾಖಲಾತಿ ತೀರಾ ಕಡಿಮೆ

Video Top Stories