Asianet Suvarna News Asianet Suvarna News

ತಂದೆ, ತಾಯಿ ಕೊರೊನಾ ಗೆದ್ದ ಕಥೆ ಹಂಚಿಕೊಂಡ ನಟ ವಿಜಯ್..!

ಕೊರೊನಾ ಕರಾಳ ಕ್ಷಣಗಳನ್ನು, ತಂದೆ- ತಾಯಿ ಕೊರೊನಾ ಗೆದ್ದ ಕಥೆಯನ್ನು ನಟ ದುನಿಯಾ ವಿಜಯ್ ಹಂಚಿಕೊಂಡಿದ್ದಾರೆ. 
 

ಬೆಂಗಳೂರು (ಮೇ. 26): ಕೊರೊನಾ ಕರಾಳ ಕ್ಷಣಗಳನ್ನು, ತಂದೆ- ತಾಯಿ ಕೊರೊನಾ ಗೆದ್ದ ಕಥೆಯನ್ನು ನಟ ದುನಿಯಾ ವಿಜಯ್ ಹಂಚಿಕೊಂಡಿದ್ದಾರೆ. 

'ನನ್ನ ತಂದೆ-ತಾಯಿಗೆ ಕೊರೊನಾ ಸೋಂಕು ತಗುಲಿದಾಗ ಗಾಬರಿಯಾಯ್ತು. ಈಗ ನನ್ನ ತಂದೆ ಸುಧಾರಿಸಿಕೊಳ್ಳುತ್ತಾರೆ. ತಾಯಿ ಚೇತರಿಸಿಕೊಂಡಿದ್ದಾರೆ. ಧೈರ್ಯವೇ ಕೊರೊನಾಗೆ ಮದ್ದು. ಕೊರೊನಾ ಸೋಂಕಿತರನ್ನು ಕೆಟ್ಟದಾಗಿ ಟ್ರೀಟ್ ಮಾಡಬೇಡಿ. ಅವರಿಂದ ಸಾವು ಬರುತ್ತದೆ ಎನ್ನುವಂತೆ ನೋಡಬೇಡಿ ಎಂದು ಸಲಹೆ ನೀಡಿದ್ದಾರೆ.  ಈಗಾಗಲೇ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಹಾಗಾಗಿ ಸಿಕ್ಕಾಪಟ್ಟೆ ಭಯಗೊಂಡಿದ್ದರು. ನಾವು ಧೈರ್ಯದಿಂದ ಎದುರಿಸಿ, ಕೊನೆಗೂ ಕೊರೊನಾ ಗೆದ್ದೆವು' ಎಂದಿದ್ದಾರೆ. 

ಕೊರೊನಾ ಗೆದ್ದ ದುನಿಯಾ ಪೋಷಕರು, ವಿಜಯ್ ಕೊಟ್ಟ ಅದ್ಭುತ ಸಂದೇಶ
 

Video Top Stories