News Hour: ವಿಧಾನಸಭೆ ಕಲಾಪ ನುಂಗಿದ ಮುಡಾ ಹಗರಣ

ವಿಧಾನಸಭೆ & ಪರಿಷತ್​ನಲ್ಲಿ ಮುಡಾ ಚರ್ಚೆಗಾಗಿ ಕೋಲಾಹಲ ಗುರುವಾರವೂ ಮುಂದುವರಿದಿತ್ತು. ಆದರೆ, ಸ್ಪೀಕರ್‌ ಮಾತ್ರ ಕಲಾಪವನ್ನು ಒಂದು ದಿನ ಮುನ್ನವೇ ಮುಕ್ತಾಯ ಮಾಡುವ ಮೂಲಕ ವಿಪಕ್ಷಗಳಿಗೆ ಅಚ್ಚರಿ ನೀಡಿದರು.
 

First Published Jul 25, 2024, 11:13 PM IST | Last Updated Jul 25, 2024, 11:13 PM IST

ಬೆಂಗಳೂರು (ಜು.25): ಅಧಿವೇಶನದಲ್ಲಿ ಮುಡಾ ಹಗರಣ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷಗಳ ಪಟ್ಟು ಗುರುವಾರೂ ಮುಂದುವರಿದ ಕಾರಣ, ಸ್ಪೀಕರ್‌ ಯುಟಿ ಖಾದರ್‌ ಇನ್ನೊಂದು ದಿನ ಬಾಕಿ ಇರುವಂತೆಯೇ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದ್ದಾರೆ.

ಮುಡಾ ಚರ್ಚೆಗೆ ನಿನ್ನೆಯಿಂದಲೂ ಮೈತ್ರಿ ನಾಯಕರು ಅಹೋರಾತ್ರಿ ಧರಣಿ ನಡೆಸಿದ್ದರು. ಗುರುವಾರ ಇಡೀ ದಿನವೂ ಉಭಯ ಕಲಾಪದಲ್ಲಿ ಮುಡಾ ಸದ್ದು ಮಾಡಿತ್ತು. ಉಭಯ ಕಲಾಪಗಳಲ್ಲಿ ಸದನದಲ್ಲಿ ಬಾವಿಗಿಳಿದು ವಿಪಕ್ಷ ನಾಯಕರು ಪ್ರತಿಭಟನೆ ಮಾಡಿದ್ದರು.

ಮುಡಾ ಹಗರಣದ ವಿರುದ್ಧ ಹೋರಾಟಕ್ಕೆ ಬಿಜೆಪಿಗೆ ಕಾಂಗ್ರೆಸ್ಸಿಂದಲೇ ಒತ್ತಡ: ವಿಜಯೇಂದ್ರ

ವಿಧಾನಸಭೆ, ಪರಿಷತ್​ನಲ್ಲಿ ಮುಡಾ ಚರ್ಚೆಗೆ ಅವಕಾಶ ಸಿಗದ ಹಿನ್ನಲೆಯಲ್ಲಿ ಸಿಎಂ ರಾಜೀನಾಮೆ ನೀಡಲಿ ಎಂದು ಮೈತ್ರಿ ಪಡೆ ಪ್ರತಿಭಟನೆ ನಡೆಸಿದೆ. ಪರಿಷತ್​ನಲ್ಲಿ CM ವಿರುದ್ಧ ಘೋಷಣೆ, ಹಾಡಿನ ಮೂಲಕ ಲೇವಡಿ ಮಾಡಲಾಗಿದೆ.