ಕೊರೋನಾ ಗೆದ್ದ ದುನಿಯಾ ಪೋಷಕರು, ವಿಜಯ್ ಕೊಟ್ಟ ಅದ್ಭುತ ಸಂದೇಶ

* ಕೊರೋನಾ ಗೆದ್ದ ದುನಿಯಾ ವಿಜಯ್ ಪೋಷಕರು
* ಕೊರೋನಾ ಪಾಸಿಟಿವ್ ಅಂದಾಗ ಏನು ಮಾಡಬೇಕು
* ತಂದೆ-ತಾಯಿಯನ್ನು  ಹೇಗೆ ನೋಡಿಕೊಳ್ಳಬೇಕು?

First Published May 25, 2021, 9:53 PM IST | Last Updated May 25, 2021, 9:53 PM IST

ಬೆಂಗಳೂರು(ಮೇ 25)  ಕೊರೋನಾ ಬಂದಿದೆ ಎಂದ ತಕ್ಷಣ ಅವರನ್ನು ಭಯಬೀಳಿಸುವ ಕೆಲಸ ಮಾಡಬೇಡಿ ಹೀಗೆಂದು ನಟ ದುನಿಯಾ ವಿಜಯ್ ಮನವಿ ಮಾಡಿಕೊಂಡಿದ್ದಾರೆ.

ಒಂದು ದಿನ ನನ್ನ ಜನ್ಮದಾತರಿಬ್ಬರಿಗೂ ಕೊರೋನಾ ಪಾಸಿಟಿವ್ ಆಗಿದೆ ಎಂದಾಗ ಒಂದು ಕ್ಷಣ ನಲುಗಿದೆ. ಮತ್ತೆ ಮರುಕ್ಷಣ ಕಾರ್ಯಶೀಲನಾದೆ. ಬಿಯು ನಂಬರ್ ಬರೋವರೆಗೂ ನಮ್ಮ ತಂದೆ ತಾಯಿಗೆ ಬೆಡ್ ಸಿಗಲ್ಲ ಎಂಬ ವಿಷಯ ನನಗೆ ತಿಳಿಯಿತ್ತು.ನನ್ನ ತಂದೆಗೆ 80 ವರ್ಷ ವಯಸ್ಸು, ನನ್ನ ತಾಯಿಗೆ 76 ವರ್ಷ.

ಕರ್ನಾಟಕದ ಇಂದಿನ ಕೊರೋನಾ ಲೆಕ್ಕಾಚಾರ ಇಲ್ಲಿದೆ

ಈಗಾಗಲೇ ಅವರ ಆರೋಗ್ಯದ ಸ್ಥಿತಿ ಹದಗೆಟ್ಟಿದೆ. ಯೋಚಿಸಿಕೊಂಡು ಕೋರುವ ಸಮಯ ಇದಲ್ಲ ಎಂದು ತಿಳಿದ ನಾನು ನನ್ನ ಆತ್ಮೀಯ ವೈದ್ಯ ವಿದ್ಯಾನಂದ ರನ್ನು ಸಂಪರ್ಕಿಸಿದೆ. ಆಗ ಅವರು ಬೆಡ್ ಗೆ ಕಾಯದೆ ಟ್ರೀಟ್ಮೆಂಟ್ ಆರಂಭಿಸಲು ಹೇಳಿದರು. ಹೀಗೆ ದುನಿಯಾ ವಿಜಯ್ ಕೊರೋನಾ ಕಾಲವನ್ನು ಗೆದ್ದ ಬಗೆಯನ್ನು ವಿವರಿಸುತ್ತ ಹೋಗುತ್ತಾರೆ. 

Video Top Stories