Asianet Suvarna News Asianet Suvarna News

ಭಟ್ರು ಜೊತೆ ಗಣಿ ಬಿಟ್ಟ ಗಾಳಿಪಟ-2 ಸೂಪರ್​ ಹಿಟ್: ಮೂರು ದಿನದಲ್ಲಿ ಎಷ್ಟಾಯ್ತು ಕಲೆಕ್ಷನ್​?

ಗಾಳಿಪಟ-2 ಬಾಕ್ಸಾಫೀಸ್ ಲೆಕ್ಕಾಚಾರ ಗಾಂಧಿನಗರದಲ್ಲಿ ಜೋರಾಗಿದೆ. ಫಸ್ಟ್ ಡೇ ಹೌಸ್​​ ಪ್ರದರ್ಶನ ಕಂಡಿದ್ದ ಚಿತ್ರಮಂದಿರಗಳು ಎರಡೇ ದಿನವೂ ಭರ್ತಿಯಾಗಿವೆ. 

Aug 15, 2022, 4:08 PM IST

ಬೆಳ್ಳಿತೆರೆ ಬಾನಂಗಳದಲ್ಲಿ ಗಣೇಶ್ ಯೋಗರಾಜ್ ಭಟ್​ ಜೋಡಿ ಕಲರ್​ ಫುಲ್​​ ಗಾಳಿಪಟ-2 ಹಾರಿಸಿದ್ದಾರೆ. ಗಣೇಶ್ ಭಟ್ರು​ ಸಿನಿಮಾ ಅಂದ್ಮೇಲೆ ಅಲ್ಲೊಂದು ಮ್ಯಾಜಿಕ್ ಇರುತ್ತೆ. ಈ ಭಾರಿ ಕೂಡ ಈ ಮೆಗಾ ಕಾಂಬೋ ಕಾಮಿಡಿ ಮತ್ತು ಎಮೋಷನಲ್​​ ಮಂತ್ರ ಹೇಳಿ ಪ್ರೇಕ್ಷಕರು ಬೆಳ್ಳಿತೆರೆ ಮುಂದೆ ಕೂರುವಂತೆ ಚೂ ಮಂತರ್ ಮಾಡಿದ್ದಾರೆ. ಹೀಗಾಗಿ ಭಟ್ರು ಗಣಿ ಗಾಳಿಪಟ-2 ಸೂಪರ್ ಹಿಟ್ ಆಗಿದ್ದು, ಮೂರು ದಿನದ ಒಟ್ಟು ಕಲೆಕ್ಷನ್​ ಬಗ್ಗೆ ಗಾಂಧಿನಗರದಲ್ಲಿ ಹೊಸ ಗುಲ್ಲೆದ್ದಿದೆ. ಗಾಳಿಪಟ-2 ಬಾಕ್ಸಾಫೀಸ್ ಲೆಕ್ಕಾಚಾರ ಗಾಂಧಿನಗರದಲ್ಲಿ ಜೋರಾಗಿದೆ. ಫಸ್ಟ್ ಡೇ ಹೌಸ್​​ ಪ್ರದರ್ಶನ ಕಂಡಿದ್ದ ಚಿತ್ರಮಂದಿರಗಳು ಎರಡೇ ದಿನವೂ ಭರ್ತಿಯಾಗಿವೆ. ಹೀಗಾಗಿ ಗಾಳಿಪಟ-2 ಮೊದಲ ದಿನ 17 ಕೋಟಿ ಕಲೆಕ್ಷನ್ ಮಾಡಿದ್ರೆ, ಎರಡನೇ ದಿನ 12 ಕೋಟಿ ಗಳಿಕೆ ಮಾಡಿದೆಯಂತೆ. ಇನ್ನು ಭಾನುವಾರ. ಎಲ್ಲರಿಗೂ ರಜೆ. ಈ ದಿನ 14 ಕೋಟಿ ಗಳಿಸಿದೆ ಅಂತ ಸಿನಿ ಪಂಡಿತರು ಲೆಕ್ಕ ಹಾಕಿದ್ದಾರೆ. 2008ರಲ್ಲಿ ಬಂದ ಗಾಳಿಪಟ ಬರೋಬ್ಬರಿ 175 ದಿನ ಪ್ರದರ್ಶನ ಕಂಡು ಮುಂಗಾರು ಮಳೆ ಸಿನಿಮಾದ ಹಾಗೆ ಇತಿಹಾಸ ಬರೆದಿತ್ತು. ಆಗಿನ ಕಾಲಕ್ಕೆ ನಾಲ್ಕುವರೆ ಕೋಟಿಯಲ್ಲಿ ಸಿದ್ಧವಾಗಿದ್ದ ಈ ಸಿನಿಮಾ ಬರೋಬ್ಬರಿ 21 ಕೋಟಿ ಗಳಿಕೆ ಮಾಡಿತ್ತು.