Asianet Suvarna News Asianet Suvarna News

ಕಿಚ್ಚನ ಲಕ್ಕಿ ಚಾರ್ಮ್ ಬಿಯರ್ಡ್‌ಗೆ ಗುಡ್ ಬೈ ಹೇಳಿದ್ದೇಕೆ?

12 ವರ್ಷದ ನಂತ್ರ ಮತ್ತದೆ ಹಳೆ ಗೆಟಪ್ ನಲ್ಲಿ ಸುದೀಪ್ ಬಿಗ್ ಸ್ಕ್ರೀನ್ ಮೇಲೆ ಬರಲಿದ್ದಾರೆ. 

Aug 19, 2022, 1:11 PM IST

ಇತ್ತೀಚಿಗಷ್ಟೇ ವಿಕ್ರಾಂತ್ ರೋಣನ ಜಗತ್ತಿಗೆ ಕರೆದುಕೊಂಡು ಹೋಗಿ ಪ್ರೇಕ್ಷಕರಿಗೆ ಹೊಸ ಅನುಭವ ಕೊಟ್ಟ ಕಿಚ್ಚ ಈಗ ಪ್ರೇಕ್ಷಕರ ಮುಂದೆ ಹೊಸ ಗೆಟಪ್ ಎಂಟ್ರಿಕೊಡಲು ಸಿದ್ದರಾಗಿದ್ದಾರೆ...12 ವರ್ಷದ ನಂತ್ರ ಮತ್ತದೆ ಹಳೆ ಗೆಟಪ್ ನಲ್ಲಿ ಸುದೀಪ್ ಬಿಗ್ ಸ್ಕ್ರೀನ್ ಮೇಲೆ ಬರಲಿದ್ದಾರೆ. ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ನ ಹ್ಯಾಂಡ್ ಸಮ್ ಹಂಕ್...ಕಿಚ್ಚನ ಹೇರ್ ಸ್ಟೈಲ್ ಹಾಗೂ ಬಿಯರ್ಡ್ ಲುಕ್ ಗೆ ಫ್ಯಾನ್ಸ್ ಫಿದಾ ಆಗ್ತಾರೆ...ಪ್ರತಿ ಸಿನಿಮಾಗೂ ತನ್ನದೇ ಸ್ಟೈ ಲ್ ಆಫ್ ಹೇರ್ ಸ್ಟೈಲ್ ಬಿಯರ್ಡ್ ಮಾಡಿಕೊಳ್ಳೋ ಕಿಚ್ಚ ಬರೋಬ್ಬರಿ 12 ವರ್ಷದ ನಂತ್ರ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಯರ್ಡ್ ಅಂದ್ರೆ ಕಿಚ್ಚನಿಗೆ ಸಖತ್ ಫೆವರೇಟ್..ಹಾಗೇನಾದ್ರು ಕ್ಲೀನ್ ಶೇವ್ ಮಾಡಬೇಕು ಅಂದ್ರೆ ಸುದೀಪ್ ಹೇಳಿದಂತೆಯೇ ಅವ್ರನ್ನ ಸಖತ್ ಕನ್ವಿನ್ಸ್ ಮಾಡಬೇಕು.. ಪಾತ್ರ ಆ ಲುಕ್ ಅನ್ನ ಡಿಮ್ಯಾಂಡ್ ಮಾಡಬೇಕು..ಸದ್ಯ ಕಿಚ್ಚನನ್ನ ಕ್ಲೀನ್ ಶೇವ್ ಮಾಡುವಂತೆ ಕನ್ವೀನ್ಸ್ ಮಾಡಿದ್ದು ನಿರ್ದೇಶಕ ಆರ್ ಚಂದ್ರು...ಕಿಚ್ಚ ಸುದೀಪ್ ಸದ್ಯ ಈ ರೀತಿ ಕ್ಲೀನ್ ಶೇವ್ ಮಾಡಿರೋದು ಕಬ್ಜ ಸಿನಿಮಾದ ಭಾರ್ಗವ್ ಬಕ್ಷಿ ಪಾತ್ರಕ್ಕಾಗಿ..ಆರ್ ಚಂದ್ರು ಕಿಚ್ಚನಿಗೆ ಶೇವ್ ಮಾಡುವಂತೆ ಕನ್ವೀನ್ಸ್ ಮಾಡಿದ್ದಾರೆ