Asianet Suvarna News Asianet Suvarna News

ಸುದೀಪ್ ಜಪಾನ್ ಅಭಿಮಾನಿಯಿಂದ ರಾ..ರಾ ರಕ್ಕಮ್ಮ ಡ್ಯಾನ್ಸ್, ವಿಡಿಯೋ ವೈರಲ್

ವಿಕ್ರಾಂತ್ ರೋಣ ಅಬ್ಬರ ಭರ್ಜರಿಯಾಗಿದೆ. ಹೊರ ದೇಶದಲ್ಲೂ ಮುಗಿಬಿದ್ದು ನೋಡುತ್ತಿದ್ದಾರೆ. ಭಾರತದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದ್ದ ರಾ.. ರಾ.. ರಕ್ಕಮ್ಮನ ಹಾಡು ಈಗ ಫಾರಿನ್ನಲ್ಲೂ ಕ್ರೇಜ್ ಸೃಷ್ಟಿಸಿದೆ. 

Aug 5, 2022, 3:09 PM IST

ವಿಕ್ರಾಂತ್ ರೋಣ ಅಬ್ಬರ ಭರ್ಜರಿಯಾಗಿದೆ. ಹೊರ ದೇಶದಲ್ಲೂ ಮುಗಿಬಿದ್ದು ನೋಡುತ್ತಿದ್ದಾರೆ. ಭಾರತದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದ್ದ ರಾ.. ರಾ.. ರಕ್ಕಮ್ಮನ ಹಾಡು ಈಗ ಫಾರಿನ್ನಲ್ಲೂ ಕ್ರೇಜ್ ಸೃಷ್ಟಿಸಿದೆ. ಜಪಾನಿನ ಸುದೀಪ್ ಅಭಿಮಾನಿಯೊಬ್ಬರು ರಕ್ಕಮ್ಮ ಡಾನ್ಸ್ ಮಾಡಿದ್ದು, ಈ ವೀಡಿಯೋ ವೈರಲ್ ಆಗಿದೆ.

ಹೊರ ದೇಶದಲ್ಲಿ ಅಭಿಮಾನಿ ಸಂಘಟನೆ ಹೊಂದಿದ ಕನ್ನಡದ ಮೊದಲ ಸ್ಟಾರ್ ನಟ ಅನ್ನೋ ಹೆಗ್ಗಳಿಕೆ ಕಿಚ್ಚ ಸುದೀಪ್ರದ್ದು. ಕಿಚ್ಚನಿಗೆ ಜಪಾನ್ ನಲ್ಲಿ ಮೊದಲ ಅಭಿಮಾನಿ ಸಂಘಟನೆ ಹುಟ್ಟಿಕೊಂಡಿದ್ದು, ಆ ನಂತರ ಜರ್ಮನಿ, ದುಬೈ, ಹಾಗು ಸಿಂಗಾಪುರ್ನಲ್ಲೂ ಕಿಚ್ಚನ ಅಭಿಮಾನಿಗಳಿದ್ದಾರೆ.  

ಫಾರಿನ್‌ನಲ್ಲಿ ಅಭಿಮಾನಿಗಳ ದೊಡ್ಡ ಸಾಗರವನ್ನ ಸೃಷ್ಟಿಸಿಕೊಂಡ ದಕ್ಷಿಣ ಭಾರತದ ಮೊದಲ ಸ್ಟಾರ್ ಸೂಪರ್ ಸ್ಟಾರ್ ರಜನಿಕಾಂತ್. ತಲೈವಾ ಸ್ಟೈಲ್, ಆ್ಯಕ್ಟಿಂಗ್ ನೋಡಿ ಜರ್ಮನಿ, ಜಪಾನ್, ಸಿಂಗಾಪುರ್, ಇಂಗ್ಲೇಂಡ್, ಆಸ್ಟ್ರೇಲಿಯಾ ದುಬೈ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ರಜನಿಕಾಂತ್‌ರನ್ನು ಆರಾಧಿಸುವ ಪ್ರೀತಿಸೋ ಅಭಿಮಾನಿಗಳು ಸೃಷ್ಟಿಯಾದ್ರು. ಹೀಗಾಗಿ ಸೂಪರ್ ಸ್ಟಾರ್ ನಟಿಸಿದ ಬಾಷಾ. ಲಿಂಗ, ಕಬಾಲಿ, ರೋಬೋ, ಕಾಲ ಸಿನಿಮಾಗಳು ಫಾರಿನ್ನಲ್ಲೂ ಹೌಸ್ಫುಲ್ ಪ್ರದರ್ಶನ ಕಂಡಿದ್ವು. ಸೂಪರ್ ಸ್ಟಾರ್ ಹಾದಿಯಲ್ಲೇ ಈಗ ಕಿಚ್ಚ ಸುದೀಪ್ ಸಾಗುತ್ತಿದ್ದಾರೆ.