Asianet Suvarna News Asianet Suvarna News

ಅದ್ದೂರಿಯಾಗಿ ವರಮಹಾಲಕ್ಷ್ಮೀ ಆಚರಿಸಿದ ನಟಿ, ರೂಪದರ್ಶಿ ಶ್ರುತಿ

ವರಮಹಾಲಕ್ಷ್ಮೀ ಹಬ್ಬವನ್ನು ಆಗಸ್ಟ್ 5ರಂದು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಕರುನಾಡಿನ ಜನ ತಮ್ಮ ಮನೆ ಮನದಲ್ಲಿ ಲಕ್ಷ್ಮೀ ಆರಾಧನೆ ಮಾಡಿದರು.ಲಕ್ಷ್ಮೀ ಪೂಜೆಯನ್ನು ಶ್ರದ್ಧೆ ಭಕ್ತಿಯಿಂದ ಮಾಡುವಲ್ಲಿ ಸೆಲೆಬ್ರಿಟಿಗಳೇನು ಹಿಂದೆ ಬಿದ್ದಿಲ್ಲ. ಅನೇಕ ನಟಿಮಣಿಯರು ಭಕ್ತಿಯಿಂದ ಲಕ್ಷ್ಮೀ ಆರಾಧನೆ ಮಾಡಿದ್ದಾರೆ. ಇದರಲ್ಲಿ ನಟಿ ಹಾಗೂ ರೂಪದರ್ಶಿ ಶ್ರುತಿ ಅವರ ಮನೆಯಲ್ಲೂ ವರಮಹಾಲಕ್ಷ್ಮಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದರು. 

ವರಮಹಾಲಕ್ಷ್ಮೀ ಹಬ್ಬವನ್ನು ಆಗಸ್ಟ್ 5ರಂದು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಕರುನಾಡಿನ ಜನ ತಮ್ಮ ಮನೆ ಮನದಲ್ಲಿ ಲಕ್ಷ್ಮೀ ಆರಾಧನೆ ಮಾಡಿದರು.ಲಕ್ಷ್ಮೀ ಪೂಜೆಯನ್ನು ಶ್ರದ್ಧೆ ಭಕ್ತಿಯಿಂದ ಮಾಡುವಲ್ಲಿ ಸೆಲೆಬ್ರಿಟಿಗಳೇನು ಹಿಂದೆ ಬಿದ್ದಿಲ್ಲ. ಅನೇಕ ನಟಿಮಣಿಯರು ಭಕ್ತಿಯಿಂದ ಲಕ್ಷ್ಮೀ ಆರಾಧನೆ ಮಾಡಿದ್ದಾರೆ. ಇದರಲ್ಲಿ ನಟಿ ಹಾಗೂ ರೂಪದರ್ಶಿ ಶ್ರುತಿ ಅವರ ಮನೆಯಲ್ಲೂ ವರಮಹಾಲಕ್ಷ್ಮಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದರು. ಮಿಸೆಸ್ ಕರ್ನಾಟಕ ಕಿರೀಟ ಮುಡಿಗೇರಿಸಿಕೊಂಡಿದ್ದ ಶ್ರುತಿ ಸಂಸದ ಶಿವರಾಮೇಗೌಡ ಅವರ ಸೊಸೆ.ಪೂಜೆಯಲ್ಲಿ ಶಿವರಾಮೇಗೌಡ ಅವರ ಪತ್ನಿ ಕೂಡ ಭಾಗಿಯಾಗಿದ್ದರು. ಅದ್ದೂರಿಯಾಗಿ ಶ್ರುತಿ ಲಕ್ಷ್ಮೀ ಪೂಜೆಯನ್ನು ಮಾಡಿದರು. ಶ್ರುತಿ ಲಕ್ಷ್ಮಿ ಪೂಜೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಪ್ರದಾಯಬದ್ದವಾಗಿ ಶ್ರುತಿ ಹಬ್ಬ ಆಚರಣೆ ಮಾಡಿದರು. ಸೊಸೆಯ ಹಬ್ಬದ ಸಂಭ್ರಮ ನೋಡಿ ಶಿವರಾಮೇಗೌಡ ಕೂಡ ಸಂತಸ ಪಟ್ಟರು.    
 

Video Top Stories