Asianet Suvarna News Asianet Suvarna News

SIIMA; ದುಃಖ ಮತ್ತು ಖುಷಿ ಎರಡು ಆಗ್ತಿದೆ, ಶಿವರಾಜ್ ಕುಮಾರ್

ಪುನೀತ್ ನೆನಪಲ್ಲಿ ಈ ಬಾರಿಯ ಸೈಮಾ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರಾ ಮಾತನಾಡಿ, ದುಃಖ ಮತ್ತು ಖುಷಿ ಎರಡು ಆಗುತ್ತಿದೆ ಎಂದು ಹೇಳಿದರು. ಅಪ್ಪು ಜೊತೆಯಲ್ಲಿದ್ದಾನೆ ಎಂದು ಸೈಮಾ ಮಾಡ್ತೀವಿ ಎಂದು ಹೇಳಿದರು. 

ಪ್ರತಿಷ್ಠಿತ ಸೈಮಾ 2022 (SIIMA) ಪ್ರಶಸ್ತಿ ಕಾರ್ಯಕ್ರಮ ಸಮಾರಂಭ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಸೆಪ್ಟಂಬರ್ 10, 11ರಂದು ಬೆಂಗಳೂರಿನಲ್ಲಿ 10ನೇ ಸೈಮಾ ನಡೆಯಲಿದ್ದು ದಕ್ಷಿಣ ಭಾರತದ ಅನೇಕ ಕಲಾವಿದರು ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ.  ಬೆಂಗಳೂರಿನ ಪ್ಯಾಲೇಸ್ ​ಗ್ರೌಂಡ್ ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಈ ಬಾರಿಯ ಸೈಮಾ ವಿಶೇಷ ಎಂದರೆ ಕಳೆದ ವರ್ಷ ನಿಧನ ಹೊಂದಿದ ಪುನೀತ್​ ರಾಜ್​ಕುಮಾರ್ ಅವರಿಗೆ ವಿಶೇಷ ಗೌರವ ನೀಡಲಾಗಿದೆ. ಪುನೀತ್ ನೆನಪಲ್ಲಿ ಈ ಬಾರಿಯ ಸೈಮಾ ಕಾರ್ಯಕ್ರಮ ನಡೆಯುತ್ತಿದೆ. ಈ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರಾ ಮಾತನಾಡಿ, ದುಃಖ ಮತ್ತು ಖುಷಿ ಎರಡು ಆಗುತ್ತಿದೆ ಎಂದು ಹೇಳಿದರು. ಅಪ್ಪು ಜೊತೆಯಲ್ಲಿದ್ದಾನೆ ಎಂದು ಸೈಮಾ ಮಾಡ್ತೀವಿ ಎಂದು ಹೇಳಿದರು.