'ನಡೆ ಮುಂದೆ ನಡೆ ಮುಂದೆ...', ಕುವೆಂಪು ಗೀತೆಯಲ್ಲಿ ಅಂದು ಅಣ್ಣಾವ್ರು, ಇಂದು ಶರಣ್

ಸ್ಯಾಂಡಲ್ವುಡ್ ಕಾಮಿಡಿ ಅಧ್ಯಕ್ಷ ಶರಣ್ 13 ಜನ ಶಿಷ್ಯರ ತಂಡ ಕಟ್ಟಿಕೊಂಡು ಬೆಳ್ಳಿತೆರೆ ಮೇಲೆ ದಾಂಗುಡಿ ಇಡೋಕೆ ಸಿದ್ಧರಾಗಿದ್ದಾರೆ. ಆ ಸಿನಿಮಾವೇ ಗುರು ಶಿಷ್ಯರು, ಇದೀಗ ಗುರು ಶಿಷ್ಯರು ಸಿನಿಮಾದ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಅನ್ನೋ ಹಾಡು ಬಿಡುಗಡೆ ಆಗಿದೆ.

First Published Sep 17, 2022, 4:27 PM IST | Last Updated Sep 17, 2022, 4:27 PM IST

ಸ್ಯಾಂಡಲ್ವುಡ್ ಕಾಮಿಡಿ ಅಧ್ಯಕ್ಷ ಶರಣ್ 13 ಜನ ಶಿಷ್ಯರ ತಂಡ ಕಟ್ಟಿಕೊಂಡು ಬೆಳ್ಳಿತೆರೆ ಮೇಲೆ ದಾಂಗುಡಿ ಇಡೋಕೆ ಸಿದ್ಧರಾಗಿದ್ದಾರೆ. ಆ ಸಿನಿಮಾವೇ ಗುರು ಶಿಷ್ಯರು, ಇದೀಗ ಗುರು ಶಿಷ್ಯರು ಸಿನಿಮಾದ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಅನ್ನೋ ಹಾಡು ಬಿಡುಗಡೆ ಆಗಿದೆ. ಶರಣ್ ತನ್ನ ಶಿಷ್ಯರ ಬೆನ್ನ ಹಿಂದೆ ನಿಂತು ನುಗ್ಗಿ ನಡೆ ಮುಂದೆ ಎನ್ನುತ್ತಿದ್ದಾರೆ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದು ಶುರುವಾಗೋ ಈ ಸಾಂಗ್ ಗುರು ಶಿಷ್ಯರ ಸ್ಪೂರ್ತಿಯ ಹಾಡು. 13 ಜನ ಶಿಷ್ಯರ ಖೋ.. ಖೋ.. ಟೀಂ ಕಟ್ಟಿಕೊಂಡು ಇಡೀ ಊರನ್ನೇ ಗೆಲ್ಲೋಕೆ ಹೊರಡೋ ಶರಣ್ ತಮ್ಮ ಶಿಷ್ಯರ ಜೊತೆ ಸೇರಿ ಈ ಸ್ಪೂರ್ತಿಯ ಹಾಡು ಹಾಡುತ್ತಾರೆ. ಆದ್ರೆ ಗುರು ಶಿಷ್ಯರ ಈ ಸ್ಪೂರ್ಥಿಯ ಸಾಂಗ್ಗ ಬೇರೆಯದ್ದೇ ಇತಿಹಾಸ ಇದೆ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ ಅನ್ನೋ ಪಧ್ಯವನ್ನ ನಾವು ನೀವೆಲ್ಲಾ ಪಠ್ಯದಲ್ಲಿ ಓದಿರುತ್ತೇವೆ. ಈ ಪದ್ಯವನ್ನು ರಾಷ್ಟ್ರಕವಿ ಕುವೆಂಪು ಅವರು ಬರೆದಿದ್ದು. ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ದಾಸ್ ಬ್ರಿಟಿಷರ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿ ಬ್ರಿಟೀಷರ ಸರೆಯಲ್ಲೇ ನಿಧನ ಆಗಿದ್ರು. ಆಗ ಕುವೆಂಪು ಅವರು ಯುವಜನತೆಗೆ ಸ್ಫೂರ್ತಿ ನೀಡಲು ಈ ಕವಿತೆ ಬರೆದಿದ್ರು. ಕೊನೆಗೆ ಈ ಕವಿತೆ 1969ರಲ್ಲಿ ಬಂದ ರಾಜಕುಮಾರ್, ಚಂದ್ರಕಲಾ ನಟಿಸಿದ್ದ ಮಾರ್ಗದರ್ಶಿ ಅನ್ನೋ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿತ್ತು.

Video Top Stories