Asianet Suvarna News Asianet Suvarna News

ಮತ್ತೊಂದು ಸಾಂಗ್ ಕೊಟ್ಟ ಗುರು ಶಿಷ್ಯರು: ಸಾವಿರ ಕೋಟಿ ನೋಡಿಲ್ವಂತೆ ಸಲ್ಲು!

ಸ್ಯಾಂಡಲ್‌ವುಡ್‌ನ ಕಾಮಿಡಿ ಅಧ್ಯಕ್ಷ ಶರಣ್ ನಾಯಕನಾಗಿ ನಟಿಸಿರೋ ಗುರು ಶಿಷ್ಯರು ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಸಿನಿಮಾದ ಮತ್ತೊಂದು ಹಾಡು ಬಿಡಿಗಡೆ ಆಗಿದೆ. ಯೋಗರಾಜ್ ಭಟ್ ಬರೆದಿರೋ ಬಹಳ ಒಳ್ಳೆಯವ್ರು ನಮ್ಮ ಮೇಷ್ಟು ಅನ್ನೋ ಹಾಡು ರಿಲೀಸ್ ಆಗಿದೆ.

ಸ್ಯಾಂಡಲ್‌ವುಡ್‌ನ ಕಾಮಿಡಿ ಅಧ್ಯಕ್ಷ ಶರಣ್ ನಾಯಕನಾಗಿ ನಟಿಸಿರೋ ಗುರು ಶಿಷ್ಯರು ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಸಿನಿಮಾದ ಮತ್ತೊಂದು ಹಾಡು ಬಿಡಿಗಡೆ ಆಗಿದೆ. ಯೋಗರಾಜ್ ಭಟ್ ಬರೆದಿರೋ ಬಹಳ ಒಳ್ಳೆಯವ್ರು ನಮ್ಮ ಮೇಷ್ಟು ಅನ್ನೋ ಹಾಡು ರಿಲೀಸ್ ಆಗಿದ್ದು, ವಿ ಹರಿಕೃಷ್ಣ ಈ ಹಾಡು ಬರೆದಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್ನಲ್ಲಿ ಬಂದಿರೋ ಈ ಸಾಂಗ್ ಸಂಗೀತ ಪ್ರೀಯರ ಮನ ಗೆಲ್ಲುತ್ತಿದೆ. 

ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ 1000 ಕೋಟಿ ದುಡ್ಡನ್ನ ನೋಡೇ ಇಲ್ವಂತೆ. ಸಲ್ಲು ಬಿಗ್ಬಾಸ್ ನಿರೂಪಣೆಗಾಗಿ ಇದುವರೆಗೂ ಒಂದು ಸಾವಿರ ಕೋಟಿ ಸಂಭಾವನೆ ಪಡೆದಿದ್ದಾರೆ ಅಂತ ಸುದ್ದಿ ಹಬ್ಬಿತ್ತು. ಇದಕ್ಕೆ ಬಿಗ್ಬಾಸ್ ಸೀಸನ್ 16ರ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿರೋ ಬಾಯ್ಜಾನ್ ನಾನು ಜೀವನದಲ್ಲಿ ಅಷ್ಟೊಂದು ದುಡ್ಡು ನೋಡಿಯೇ ಇಲ್ಲ ಇದು ಸುಳ್ಳು ವದಂತಿ ಎಂದಿದ್ದಾರೆ. 

ಈ ವಾರ ಥಿಯೇಟರ್‌ನಲ್ಲಿ ಟಾಪ್ ಸಿನಿಮಾಗಳ ಸಂಗ್ರಾಮ: ಯಾವೆಲ್ಲಾ ಸಿನಿಮಾಗಳು ಬಿಡುಗಡೆ ಆಗುತ್ತಿವೆ ಗೊತ್ತಾ?

ಟಾಲಿವುಡ್ ಲಿಲ್ಲಿ ರಶ್ಮಿಕಾ ಮಂದಣ್ಣ ಮೊನ್ನೆ ಮೊನ್ನೆಯಷ್ಟೆ ಮೊಣಕಾಲಿನ ನೋವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ರು. ಇದೀಗ ಪುಷ್ಪನ ರಾಣಿ ಶ್ರೀವಲ್ಲಿ ಹೊಸದಾಗಿ ಪೋಟೋ ಶೂಟ್ ಮಾಡಿಸಿದ್ದು ಗಂಡ್ ಹೈಕ್ಳ ಬಾಡಿ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ರಶ್ಮಿಕಾ ಈ ಫೋಟೋ ಶೂಟ್‌ನಲ್ಲಿ ಗೋಲ್ಡನ್ ಕಲರ್ ಡ್ರೆಸ್ನಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಫೋಟೋಗಳು ಈ ರಶ್ಮಿಕಾ ಅಭಿಮಾನಿಗಳ ಹೃದಯ ಗೆಲ್ಲುತ್ತಿವೆ.

ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಿದ್ದಾರೆ. ಹೈದರಾಬಾದ್‌ನಲ್ಲಿ ಇನ್ನೂ ಹೆಸರಿಡದ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿ ಆಗಿದ್ರು ದೀಪಿಕಾ. ಆಗ ಡಿಪ್ಪಿ ಸುಸ್ತಿನಿಂದ ಶೂಟಿಂಗ್ ಸೆಟ್ನಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ದೀಪಿಕಾರನ್ನ ಹೈದ್ರಾಬಾದ್ನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಡಿಪ್ಪಿ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories