Asianet Suvarna News Asianet Suvarna News

ಬೆಳ್ಳಿತೆರೆಯಲ್ಲಿ ಶರಣ್ ಹಂಗಾಮ: ಹೇಗಿದೆ ಗೊತ್ತಾ 'ಗುರು ಶಿಷ್ಯರು' ಸಿನಿಮಾ?

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ.. ಈ ಸಾಲು ಕಾಮಿಡಿ ಅಧ್ಯಕ್ಷ ಶರಣ್‌ಗೆ ಪಕ್ಕಾ ಸೂಟ್ ಆಗುತ್ತೆ. ಯಾವ್ ಸಿನಿಮಾನೆ ಆಗಿರಲಿ ಶರಣ್ ಅಲ್ಲಿ ಸ್ಕೋರ್ ಮಾಡಿಯೇ ಮಾಡ್ತಾರೆ ಅನ್ನೋ ನಂಬಿಕೆ ಇದೆ. ಈಗ ಶುಭ ಶುಕ್ರವಾರ ಬಂದಿರೋ ಗುರು ಶಿಷ್ಯರು ಸಿನಿಮಾದಲ್ಲೂ ಶರಣ್ ಮತ್ತೊಮ್ಮೆ ಆ ಮಾತನ್ನ ಪ್ರೂವ್ ಮಾಡಿದ್ದಾರೆ.

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ.. ಈ ಸಾಲು ಕಾಮಿಡಿ ಅಧ್ಯಕ್ಷ ಶರಣ್‌ಗೆ ಪಕ್ಕಾ ಸೂಟ್ ಆಗುತ್ತೆ. ಯಾವ್ ಸಿನಿಮಾನೆ ಆಗಿರಲಿ ಶರಣ್ ಅಲ್ಲಿ ಸ್ಕೋರ್ ಮಾಡಿಯೇ ಮಾಡ್ತಾರೆ ಅನ್ನೋ ನಂಬಿಕೆ ಇದೆ. ಈಗ ಶುಭ ಶುಕ್ರವಾರ ಬಂದಿರೋ ಗುರು ಶಿಷ್ಯರು ಸಿನಿಮಾದಲ್ಲೂ ಶರಣ್ ಮತ್ತೊಮ್ಮೆ ಆ ಮಾತನ್ನ ಪ್ರೂವ್ ಮಾಡಿದ್ದಾರೆ. ಶರಣ್ ಹಾಗು 12 ಜನ ಹುಡುಗರು ಮತ್ತು ನಿಶ್ವಿಕಾ ನಾಯ್ಡು ನಟಿಸಿರೋ ಗುರು ಶಿಷ್ಯರು ಸಿನಿಮಾ ಬೆಳ್ಳಿತೆರೆ ಬಾನಂಗಳಕ್ಕೆ ಬಂದಿದ್ದು, ಈ ಗುರು ಶಿಷ್ಯರು ಹಂಗಾಮ ಸೃಷ್ಟಿಸಿದ್ದಾರೆ. ಗುರು ಶಿಷ್ಯರು ಪಕ್ಕಾ ದೇಸಿ ಸಿನಿಮಾ. ಈ ಸಿನಿಮಾದಲ್ಲಿ ಶರಣ್ ಸರ್ಕಾರಿ ಶಾಲೆಗೆ ಟ್ರೈನಿಂಗ್‌ಗಾಗಿ ಸಿಟಿಯಿಂದ ಹಳ್ಳಿಗೆ ಬರೋ ಪಿಟಿ ಮೇಷ್ಟ್ರ ರೋಲ್ ಮಾಡಿದ್ದಾರೆ. ಹಳ್ಳಿಯಲ್ಲಿ ಹಾಲು ಮಾರು ಹುಡುಗಿ ಪಾತ್ರದಲ್ಲಿ ನಿಶ್ವಿಕಾ ನಾಯ್ಡು ನಟಿಸಿದ್ದು, ಈ ಸಿನಿಮಾದಲ್ಲಿ 12 ಜನ ಶಾಲೆ ಹುಡುಗರ ತಂಡವೂ ಇದೆ. 

ಆ ತಂಡದಲ್ಲಿ ಕನ್ನಡದ ಸ್ಟಾರ್ ನಟರಾದ ಶರಣ್ ಪುತ್ರ ಹೃದಯ್ ನೆನಪಿರಲಿ ಪ್ರೇಮ್ ಮಗ ಏಕಾಂತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ಶಾಸಕ ರಾಜೂಗೌಡ ಮಗ ಮಣಿಕಂಠ ನಾಯಕ್, ರವಿಶಂಕರ್ ಗೌಡ ಮಗ ಸೂರ್ಯ ಮತ್ತು ನವೀನ್ ಕೃಷ್ಣ ಅವರ ಸುಪುತ್ರ ಹರ್ಷಿತ್ ಶರಣ್‌ಗೆ ಶಿಷ್ಯರಾಗಿ ಅಭಿನಯಿಸಿದ್ದಾರೆ. ಮನೋಹರ ಅನ್ನೋ ಪಾತ್ರ ಮಾಡಿರೋ ಶರಣ್ ಅದ್ಭುತ ಖೋಖೋ ಪ್ಲೇಯರ್. ಶರಣ್ರನ್ನ ಚಿಕ್ಕವಯಸ್ಸಿನಿಂದ ಬೆಳೆಸುತ್ತಿದ್ದ ನಟ ದತ್ತಣ್ಣ ರಿಟೈರ್ಡ್ ಮಾಸ್ಟ್ರು. ಆದ್ರೆ ಶರಣ್ಗೆ ಕಲಸ ಇಲ್ಲದ ಸೋಮಾರಿ ಆಗಿರ್ತಾರೆ. ಕೊನೆಗೆ ದತ್ತಣ್ಣ ಶರಣ್ಗೆ ಪಿಟಿ ಮೇಷ್ಟ್ರ ಕೆಲಸ ಕೊಡಿಸಿ ಟೈನಿಂಗ್ಗೆ ಅಂತ ಬೆಟ್ಟದ ಪುರ ಅನ್ನೋ ಊರಿನ ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. 

Guru Shishyaru Film Review: ಮನರಂಜನೆಯ ಮೈದಾನದಲ್ಲಿ ಕ್ರೀಡಾ ಕಲಿಗಳು

ಆದ್ರೆ ಆ ಬೆಟ್ಟದ ಪುರ ಊರನ್ನ ಕಬ್ಜ ಮಾಡೋಕೆ ಪಕ್ಕದ ಅರಸಿಪುರ ಅನ್ನೋ ಊರ ಗೌಡ ಹೊಂಚು ಹಾಕಿರುತ್ತಾರೆ. ಕೊನೆಗೆ ದೇಸಿ ಕ್ರೀಡೆ ಖೋ ಖೋ ಮೂಲಕ ನಮ್ಮ ಬೆಟ್ಟದ ಪುರವನ್ನ ಉಳಿಸಿಕೊಳ್ಳುತ್ತೇವೆ ಅಂತ ಆ ಊರ ಮಂದಿ ಅರಸೀಪುರ ಗೌಡನ ಮುಂದೆ ತೊಡೆ ತಟ್ಟುತ್ತಾರೆ. ಶರಣ್ ಆ ಊರ ಶಾಲೆಯಲ್ಲಿರೋ 12 ಜನ ಹುಡುಗರ ಖೋ ಕೋ ತಂಡ ಕಟ್ಟುತಾರೆ. ಕೊನೆಗೆ ಈ ಗುರು ಶಿಷ್ಯರ ಖೋಖೋ ಗೆದ್ದು ಊರನ್ನ ಉಳಿಸಿಕೊಳ್ತಾರಾ ಅನ್ನೋದೆ ಗುರು ಶಿಷ್ಯರು ಸಿನಿಮಾದ ಸ್ಟೋರಿ. ಖೋಖೋ ಕ್ರೀಡೆಯ ಮೇಲೆ ಸಿದ್ಧವಾಗಿರೋ ಗುರು ಶಿಷ್ಯರು ಸಿನಿಮಾ ಪ್ರೇಕ್ಷಕರಿಗೆ ಮೋಡಿ ಮಾಡಿದೆ. ಇಂತಹ ಸಿನಿಮಾ ಕನ್ನಡಕ್ಕೆ ಬೇಕು. ನಮ್ಮ ನೇಟಿವಿಟಿ, ನಮ್ಮ ದೇಸಿಕ್ರೀಡೆಯ ಕತೆಯನ್ನ ಅದ್ಭುತವಾಗಿ ಮಾಡಿದ್ದಾರೆ. ನಾವು ಸೀಟ ತುದಿಯಲ್ಲಿ ಕೂತು ಸಿನಿಮಾ ನೋಡಿದ್ದೇವೆ ಅಂತ ಪ್ರೇಕ್ಷಕರು ಸಂಭ್ರಮಿಸಿದರು. 

ಇನ್ನು ಗುರು ಶಿಷ್ಯರು ಸಿನಿಮಾವನ್ನ ಪ್ರೇಕ್ಷಕರ ಮಧ್ಯೆ ಕೂತು ನೋಡಿದ ಚಿತ್ರತಂಡ ಸಿಕ್ಕಾಪಟ್ಟೆ ಎನರ್ಜಿಯಿಂದಲೇ ಸಂಭ್ರಮಿಸಿದ್ದಾರೆ. ಈ ಸಿನಿಮಾದ ಗೆಲುವು ಕನ್ನಡ ಚಿತ್ರರಂಗದ ಮತ್ತೊಂದು ಗೆಲುವು ಎಂದಿದ್ದಾರೆ. ಗುರು ಶಿಷ್ಯರು ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಸುರೇಶ್ ಹೆಬ್ಳೀಕರ್, ದತ್ತಣ್ಣ, ಅಪೂರ್ವ ಕಾಸರಹಳ್ಳಿ, ಮಹಂತೇಶ್ ಹಿರೇಮಠ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನ ನಿರ್ದೇಶಕ ಜಡೇಶಾ ಕೆ ಹಂಪಿ ಟೈಟ್ ಆಗಿರೋ ಸ್ಕ್ರೀನ್ ಪ್ಲೇ ಮೂಲಕ ಪ್ರೇಕ್ಷಕರಿಗೆ ಮನೊರಂಜನೆ ಭಾಡೂಟ ಬಡಸಿದ್ದಾರೆ. 1995ರಲ್ಲಿ ನಡೆದ ಕಥೆ ಇದಾಗಿದ್ದು, ಲಡ್ಡು ಸಿನಿಮಾ ಬ್ಯಾನರ್‌ನಲ್ಲಿ ಸಿನಿಮಾವನ್ನ ಶರಣ್ ಹಾಗು ತರುಣ್ ಸುಧೀರ್ ಜಂಟಿಯಾಗಿ ನಿರ್ಮಾಣ ಮಾಡಿದ್ದು, ಈ ಜೋಡಿಗೆ ಮತ್ತೊಂದು ಗೆಲುವು ಸಿಕ್ಕಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment