Asianet Suvarna News Asianet Suvarna News

Rishab Shetty: ಪೊನ್ನಿಯಿನ್ ಸೆಲ್ವನ್ ದಾಖಲೆ ಬ್ರೇಕ್ ಮಾಡಿದ ಕಾಂತಾರ!

ರಿಷಬ್ ಶೆಟ್ಟಿಯ ಕಾಂತಾರ ಪ್ರಪಂಚ ತೆರೆದುಕೊಳ್ಳೋಕೆ ಇನ್ನೆರಡು ದಿನ ಭಾಕಿ ಇದೆ. ಈ ಕಾಂತಾರ ವರ್ಲ್ಡ್‌ನಲ್ಲಿ ನೀವು ರೌಂಡ್ ಹೊಡೆಯೋಕೆ ರೆಡಿನಾ ಅಂತ ಯಾರನ್ನಾದ್ರು ಕೇಳ್ ನೋಡಿ? ಅವ್ರು ಯೆಸ್. ಯೆಸ್. ಅಂತಾರೆ. ಯಾಕಂದ್ರೆ ಕಾಂತಾರದ ರಷಸ್ಗಳು ಆ ಮಟ್ಟಕ್ಕೆ ಕುತೂಹಲದ ಬೆಟ್ಟವನ್ನೇ ಸೃಷ್ಟಿಸಿವೆ.

ರಿಷಬ್ ಶೆಟ್ಟಿಯ ಕಾಂತಾರ ಪ್ರಪಂಚ ತೆರೆದುಕೊಳ್ಳೋಕೆ ಇನ್ನೆರಡು ದಿನ ಭಾಕಿ ಇದೆ. ಈ ಕಾಂತಾರ ವರ್ಲ್ಡ್‌ನಲ್ಲಿ ನೀವು ರೌಂಡ್ ಹೊಡೆಯೋಕೆ ರೆಡಿನಾ ಅಂತ ಯಾರನ್ನಾದ್ರು ಕೇಳ್ ನೋಡಿ? ಅವ್ರು ಯೆಸ್. ಯೆಸ್. ಅಂತಾರೆ. ಯಾಕಂದ್ರೆ ಕಾಂತಾರದ ರಷಸ್ಗಳು ಆ ಮಟ್ಟಕ್ಕೆ ಕುತೂಹಲದ ಬೆಟ್ಟವನ್ನೇ ಸೃಷ್ಟಿಸಿವೆ. ಕಾಂತಾರ ಅಂದ್ರೆ ಅದೊಂದು ಮ್ಯಾಜಿಕ್ ಅಂತ ಟ್ರೈಲರ್ ನೋಡಿದ ಮಂದಿ ಹೇಳ್ತಿದ್ದಾರೆ. ಯಾಕಂದ್ರೆ ಈ ಸಿನಿಮಾದ ವಿಶ್ಯುವಲ್ ಟ್ರೀಟ್ ಆ ಮಟ್ಟಕ್ಕಿದೆ. ಮ್ಯೂಸಿಕ್ ಕೇಳುತ್ತಿದ್ರೆ ಕಾಂತಾರದ ಸೆಲೆಬ್ರೇಷನ್ ಮೂಡ್‌ಗೆ ಹೋಗ್ಬಿಡ್ಬೇಕು ಅನ್ನಿಸುತ್ತೆ. ಹೀಗಿದ್ದ ಮೇಲೆ ಥಿಯೇಟರ್ ಅಂಗಳಕ್ಕೆ ಕಾಂತಾರಾ ಬರ್ಲಿ ಅಂತ ಕಾದೇ ಕಾಯ್ತೇವೆ ಅಲ್ವಾ. ಯೆಸ್ ಕಾಂತಾರ ಚಿತ್ರಮಂದಿರದಕ್ಕೆ ಇದೇ ಸೆಪ್ಟೆಂಬರ್ 30ರಂದು ಬರ್ತಿದೆ. ಈ ಕಾಂತಾರದ ಕಂಬಳ ಮಾಡೋದಕ್ಕೆ ಕನ್ನಡ ಸಿನಿಮಾ ಪ್ರೇಕ್ಷಕ ಬಳಗ ಸಕಲ ಸಜ್ಜಾಗಿದೆ. 

ಅಷ್ಟೆ ಅಲ್ಲ ಕಾಂತಾರದ ಟಿಕೇಟ್ ಬುಕ್ಕಿಂಗ್ ಕೂಡ ಓಪನ್ ಆಗಿದ್ದು. ಟಿಕೇಟ್ ಮಾರಾಟದಲ್ಲಿ ಶೆಟ್ರು ಧಮ್ಕೇ ಧಾರ್ ಧಮಾಕ ಸೃಷ್ಟಿಸಿದ್ದಾರೆ. ರಿಷಬ್ ಶೆಟ್ಟಿ ಡೈರೆಕ್ಷನ್, ಆಕ್ಟಿಂಗ್ ಅನ್ನ ಇಷ್ಟ ಪಡೋ ಬೇರೆಯದ್ದೇ ವರ್ಗ ಇದೆ. ಈಗ ಆ ವರ್ಗಕ್ಕೆ ಕಾಂತಾರ ಸಿನಿಮಾದಿಂದ ಸ್ಯಾಂಪಲ್ಸ್‌ಗಳನ್ನ ನೋಡಿ ಮತ್ತಷ್ಟು ಮಂದಿ ಆ್ಯಡ್ ಆಗಿದ್ದಾರೆ. ಹೀಗಾಗಿ ಕಾಂತಾರ ಸಿನಿಮಾ ಟಿಕೇಟ್ ಬುಕ್ಕಿಂಗ್ನಲ್ಲಿ ದಾಖಲೆ ಸೃಷ್ಟಿಯಾಗಿದೆ. ಮಣಿರತ್ನಂರ ಪ್ಯಾನ್ ಇಂಡಿಯಾ ಸಿನಿಮಾ ಪೊನ್ನಿಯಿನ್ ಸೆಲ್ವನ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ದೇಶಾದ್ಯಂತ 24 ಗಂಟೆಯಲ್ಲಿ ಈ ಸಿನಿಮಾ ಒಂದು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಆದ್ರೆ ಕರ್ನಾಟಕದಲ್ಲಿ ಮಾತ್ರ ಬರುತ್ತಿರೋ ಕಾಂತಾರ ಸಿನಿಮಾ ಟಿಕೆಟ್ ಬುಕ್ಕಿಂಗ್ ಓಪನ್ ಆಗಿ 24 ಗಂಟೆಯಲ್ಲಿ ಕರ್ನಾಟಕ ಒಂದರಲ್ಲಿ 70 ಲಕ್ಷಕ್ಕೂ ಹೆಚ್ಚು ಕಲೆಕ್ಷನ್ ಮಾಡಿದೆ. ಹೊಂಬಾಳೆ ಫಿಲ್ಮ್ಸ್ಂನ ನಿರ್ಮಾಪಕ ವಿಜಯ್ ಕಿರಗಂಧೂರು ಅಂದ್ರೆ ಕ್ವಾಲಿಟಿ ಸಿನಿಮಾಗಳ ನಿರ್ಮಾಪಕ ಅನ್ನೋದು ಪ್ರ್ಯೂ ಮಾಡಿದ್ದಾರೆ. 

'ಕಾಂತಾರ'ದ ಪ್ರಪಂಚ ತೆರೆದಿಟ್ಟ ಶಿವ ಮತ್ತು ಗ್ಯಾಂಗ್​

ಹೊಂಬಾಳೆ ಬ್ಯಾನರ್‌ನಿಂದ ಬಂದ ಸಿನಿಮಾಗಳೆಲ್ಲಾ ಇಂದು ಮಾರ್ಕ್ ಮಾಡೇ ಮಾಡುತ್ತಿವೆ. ಇದೀಗ ಕಾಂತಾರದ ಮೇಲೂ ಅಂತದ್ದೇ ನಿರೀಕ್ಷೆ ಮೂಡಿದೆ. ಈ ಸಿನಿಮಾ ರಾಜ್ಯಾದ್ಯಂತ 250ಕ್ಕು ಹೆಚ್ಚಿನ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಕಾಂತಾರ ಸಿನಿಮಾ ಒಂದು ದಂತಕಥೆ.. ಈ ಸಿನಿಮಾ ನೀಡಿದ್ರೆ ನಿಮ್ಮ ಕಣ್ಣು ಬೆಳಗಲಿವೆ. ಆ ಮಟ್ಟದ ಸ್ಟೋರಿ ವಿಶ್ಯೂವಲ್ ಟ್ರೀಟ್, ಸ್ಟಾರ್ ಕಾಸ್ಟ್ ಈ ಕಾಂತಾರದಲ್ಲಿದೆ. ಕರಾವಳಿಯ ಕಲ್ಚರ್ ಕಾಂತಾರದಲ್ಲಿ ತೆರೆದುಕೊಳ್ಳಿದೆ. ಕಾಡು ಬೆಟ್ಟದ ಶಿವಣ್ಣನ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಂಬಳ ಮಾಡುತ್ತಿದ್ರೆ. ಕರಾವಳಿ ಕಾಡು ಉಳಿರೋ ಡಿಆರ್ಎಫ್ಓ ಆಫೀಸರ್ ಮುರುಳಿ ರೋಲ್‌ನಲ್ಲಿ ಕಿಶೋರ್ ಆರ್ಭಟಿಸಿದ್ದಾರೆ. ಇದರ ಜೊತೆಗೆ ಶಿವಣ್ಣನ ಶೆಟ್ಟಿಂಗ್ ರೋಲ್‌ನಲ್ಲಿ ಸಪ್ತಮಿ ಗೌಡ ನಟಿಸಿದ್ದು, ಅಚ್ಯೂತ್ ಕುಮಾರ್, ಪ್ರಮೋದ್ ಶೆಟ್ಟಿ, ವಿನಯ್ ಬಿದ್ಧಪ್ಪ ನಟಿಸಿದ್ದಾರೆ.. ಸಧ್ಯದ ವೆದರ್ ನೋಡುತ್ತಿದ್ದೆ ಬಾಕ್ಸಾಫೀಸ್‌ನಲ್ಲಿ ಕಾಂತಾರ ಕಮಾಲ್ ಮಾಡೋದು ಪಕ್ಕಾ ಅನ್ನಿಸುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories