Asianet Suvarna News Asianet Suvarna News

ನಮ್ಮೊಳಗೆಯೇ ಸರ್ಕಾರ ಹುಟ್ಟಬೇಕು; ಯುವಜನ ಮಹೋತ್ಸವದಲ್ಲಿ ರಾಕಿಂಗ್ ಸ್ಟಾರ್ ಯಶ್ ಮಾತು

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಡೆದ ಯುವಜನ ಮಹೋತ್ಸವದಲ್ಲಿ ಕೆಜಿಎಫ್ ಸ್ಟಾರ್ , ರಾಕಿಂಗ್ ಸ್ಟಾರ್ ಭಾಗಿಯಾಗಿದ್ದರು. ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿಗ ಯಶ್ ಸ್ವಾತ್ಯಂತ್ರ್ಯಕ್ಕಾಗಿ ಹೋರಾಡಿದ ಎಲ್ಲರನ್ನು ಸ್ಮರಿಸೋಣ ಎಂದರು. ನಮ್ಮೊಳಗೆ ಒಂದು ಸರ್ಕಾರ ಹುಟ್ಟಬೇಕು, ನಮ್ಮೊಳಗೆ ಎಲ್ಲಾ ಇಲಾಖೆ ಇರಬೇಕು, ನಾವೆ ಯೋಜನೆಗಳನ್ನು ಹಾಕಿಕೊಳ್ಳಬೇಕು. ಅವರವರ ಕ್ಷೇತ್ರದಲ್ಲಿ ಎಲ್ಲರೂ ಕಷ್ಟಗಳನ್ನು ದಾಟಿ ಮುಂದೆ ಬರುವಂತೆ ಇರಬೇಕು. ಆಗ ದೇಶ ಖಂಡಿತ ಮುಂದೆ ಹೋಗುತ್ತದೆ ಎಂದರು.

Aug 11, 2022, 4:12 PM IST

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಡೆದ ಯುವಜನ ಮಹೋತ್ಸವ ಕಾರ್ಯಕ್ರಮದಲ್ಲಿ ಕೆಜಿಎಫ್ ಸ್ಟಾರ್ , ರಾಕಿಂಗ್ ಸ್ಟಾರ್ ಭಾಗಿಯಾಗಿದ್ದರು. ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿಗ ಯಶ್ ಸ್ವಾತ್ಯಂತ್ರ್ಯಕ್ಕಾಗಿ ಹೋರಾಡಿದ ಎಲ್ಲರನ್ನು ಸ್ಮರಿಸೋಣ ಎಂದರು. ನಮ್ಮೊಳಗೆ ಒಂದು ಸರ್ಕಾರ ಹುಟ್ಟಬೇಕು, ನಮ್ಮೊಳಗೆ ಎಲ್ಲಾ ಇಲಾಖೆ ಇರಬೇಕು, ನಾವೆ ಯೋಜನೆಗಳನ್ನು ಹಾಕಿಕೊಳ್ಳಬೇಕು. ಅವರವರ ಕ್ಷೇತ್ರದಲ್ಲಿ ಎಲ್ಲರೂ ಕಷ್ಟಗಳನ್ನು ದಾಟಿ ಮುಂದೆ ಬರುವಂತೆ ಇರಬೇಕು. ಆಗ ದೇಶ ಖಂಡಿತ ಮುಂದೆ ಹೋಗುತ್ತದೆ. ಇನ್ನೇನು ಬೇಡ ಎಂದು ಹೇಳಿದರು. ರಾಕಿಂಗ್ ನೋಡಲು ಜನಸಾಗರ ಸೇರಿತ್ತು. ಯಶ್ ಮಾತು ಆರಂಭಸುತ್ತಿದ್ದಂತೆ ವಿದ್ಯಾರ್ಥಿಗಳ ಕೂಡ ಮುಗಿಸಲು ಮುಟ್ಟಿತ್ತು. ಕೆಜಿಎಫ್-2 ಸಕ್ಸಸ್ ನ ಅಲೆಯಲ್ಲಿ ತೇಲುತ್ತಿರುವ ಯಶ್ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.