Asianet Suvarna News Asianet Suvarna News

ಐರಾ ಪ್ರಪಂಚದಲ್ಲಿ ರಾಕಿಂಗ್ ಸ್ಟಾರ್: ಅಪ್ಪ-ಮಗಳ ಆಟದ ವೀಡಿಯೋ ವೈರಲ್

ಕೆಜಿಎಫ್ ಟೆನ್ಷನ್ ಮುಗಿದ್ಮೇಲೆ ರಾಕಿಂಗ್ ಸ್ಟಾರ್ ಯಶ್ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಆಗ್ಬಿಟ್ಟಿದ್ದಾರೆ. ಅದರಲ್ಲು ಮುದ್ದು ಮಕ್ಕಳು ಐರಾ, ಯಥರ್ವ್ ಯಶ್ ಟೈಮ್ ಕಳೆಯುತ್ತಿದ್ದಾರೆ. ಆಗಾಗ ಮಕ್ಕಳ ಜೊತೆ ಇದ್ದ ವೀಡಿಯೋಗಳನ್ನ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡೋ ರಾಕಿ ಭಾಯ್ ಈಗ ಮಗಳು ಐರಾ ಪ್ರಪಂಚದಲ್ಲಿ ಕಳೆದುಹೋದ ವೀಡಿಯೋ ಒಂದನ್ನ ಹಂಚಿಕೊಂಡಿದ್ದಾರೆ. 

ಕೆಜಿಎಫ್ ಟೆನ್ಷನ್ ಮುಗಿದ್ಮೇಲೆ ರಾಕಿಂಗ್ ಸ್ಟಾರ್ ಯಶ್ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಆಗ್ಬಿಟ್ಟಿದ್ದಾರೆ. ಅದರಲ್ಲು ಮುದ್ದು ಮಕ್ಕಳು ಐರಾ, ಯಥರ್ವ್ ಯಶ್ ಟೈಮ್ ಕಳೆಯುತ್ತಿದ್ದಾರೆ. ಆಗಾಗ ಮಕ್ಕಳ ಜೊತೆ ಇದ್ದ ವೀಡಿಯೋಗಳನ್ನ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡೋ ರಾಕಿ ಭಾಯ್ ಈಗ ಮಗಳು ಐರಾ ಪ್ರಪಂಚದಲ್ಲಿ ಕಳೆದುಹೋದ ವೀಡಿಯೋ ಒಂದನ್ನ ಹಂಚಿಕೊಂಡಿದ್ದಾರೆ. ಅಪ್ಪ ಮಗಳ ಈ ಆಟದ ವೀಡಿಯೋ ನೋಡೋಕೆ ಅಷ್ಟೇ ಮುದ್ದಾಗಿದ್ದು, ಈಗ ರಾಕಿ ಫ್ಯಾನ್ಸ್ ಬಳಗದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯಾವ್ ಮಟ್ಟಕ್ಕೆ ಅಂದ್ರೆ ಈ ವೀಡಿಯೋ ಅಪ್ಲೋಡ್ ಆಗಿ ಇಲ್ಲಿಯವರೆಗೂ ಎರಡು ಮಿಲಿಯನ್ಸ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಯಶ್, ಇನ್‌ಸ್ಟಾಗ್ರಾಂ ಖಾತೆಯಲ್ಲಿ 11.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಇದುವರೆಗ 158 ಪೋಸ್ಟ್‌ಗಳನ್ನ ಹಾಕಿದ್ದಾರೆ. ಯಶ್ ಫಾಲೋ ಮಾಡುತ್ತಿರೋದು ಇಬ್ಬರನ್ನ ಮಾತ್ರ. ಅದರಲ್ಲಿ ಒಬ್ಬರು ಯಶ್ ಪತ್ನಿ ರಾಧಿಕಾ ಪಂಡಿತ್ ಮತ್ತೊಬ್ಬರು ಯಶ್ ಜಾಹೀರಾತು ಮಾಡಿರೋ ವಿಲನ್ಲೈಫ್ ಪರ್ಫ್ಯೂಮ್ ಕಂಪೆನಿ ಪೇಜ್ಅನ್ನ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories