Asianet Suvarna News Asianet Suvarna News

ದೈವ ಶಕ್ತಿಯೇ ಜನರನ್ನು ಸೆಳೆಯುತ್ತಿದೆ; ಕಾಂತಾರ ಸಕ್ಸಸ್ ಬಗ್ಗೆ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿರುವ ಕಾಂತಾರ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಸಕ್ಸಸ್ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. 

Oct 3, 2022, 12:53 PM IST

ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿರುವ ಕಾಂತಾರ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಮಂದಿರಗಳಲ್ಲಿ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ರಿಷಬ್ ಶೆಟ್ಟಿ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾದ ಬಗ್ಗೆ ರಿಷಬ್  ಶೆಟ್ಟಿ ಮಾತನಾಡಿದ್ದು ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ರಿಷಬ್ ಶೆಟ್ಟಿ ಫುಲ್ ಖುಷಿಯಾಗಿದ್ದಾರೆ. ದೈವ ಶಕ್ತಿಯೇ ಜನರನ್ನು ಸೆಳೆಯುತ್ತಿದೆ ಎಂದು ರಿಷಬ್ ಹೇಳಿದರು. ಕಾಂತಾರ ಪಾರ್ಟ್ 2 ಬಗ್ಗೆಯೂ ಮಾತನಾಡಿದ ರಿಷಬ್ ಸದ್ಯಕ್ಕೆ ಪ್ರಮೋಷನ್ ಬಗ್ಗೆ ಮಾತ್ರ ಯೋಚಿಸುತ್ತಿದ್ದೀವಿ ಎಂದು ಹೇಳಿದರು.