Asianet Suvarna News Asianet Suvarna News

'ಕಾಂತಾರ' ಪಾರ್ಟ್-2ಗೆ ಭಾರಿ ಬೇಡಿಕೆ: ಪಾರ್ಟ್‌ 2 ಬಗ್ಗೆ ರಿಷಬ್ ಶೆಟ್ಟಿ ಏನಂದ್ರು?

ಒಂದು ಗೆಲುವು ಮತ್ತೊಂದು ಕೆಲಸಕ್ಕೆ ಹರದಾರಿ ಅನ್ನೋ ಮಾತು ಸುಳ್ಳಲ್ಲ. ಅದರಲ್ಲೂ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ಸಿನಿಮಾ ಗೆದ್ರೆ ಹತ್ತಾರು ಸಿನಿಮಾಗಳು ನಿರ್ಮಾಣ ಆಗೋಕೆ ಸಾಧ್ಯವಾಗುತ್ತೆ. ಇದೀಗ ಕಾಂತಾರ ಗೆಲುವು ಇದೆಯಲ್ಲಾ ಈ ಗೆಲುವನ್ನ ಇಡೀ ಕನ್ನಡ ಸಿನಿ ಪ್ರೇಕ್ಷಕ ಬಳಗ ಆನಂದಿಸುತ್ತಿದೆ. 

ಒಂದು ಗೆಲುವು ಮತ್ತೊಂದು ಕೆಲಸಕ್ಕೆ ಹರದಾರಿ ಅನ್ನೋ ಮಾತು ಸುಳ್ಳಲ್ಲ. ಅದರಲ್ಲೂ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ಸಿನಿಮಾ ಗೆದ್ರೆ ಹತ್ತಾರು ಸಿನಿಮಾಗಳು ನಿರ್ಮಾಣ ಆಗೋಕೆ ಸಾಧ್ಯವಾಗುತ್ತೆ. ಇದೀಗ ಕಾಂತಾರ ಗೆಲುವು ಇದೆಯಲ್ಲಾ ಈ ಗೆಲುವನ್ನ ಇಡೀ ಕನ್ನಡ ಸಿನಿ ಪ್ರೇಕ್ಷಕ ಬಳಗ ಆನಂದಿಸುತ್ತಿದೆ. ಹೀಗಾಗಿ ಕಾಂತಾರ ಟೀಂ ಗೆಲುವಿನ ಖುಷಿಯನ್ನ ಸುದ್ದಿಗೋಷ್ಠಿ ಮಾಡಿ ಹಂಚಿಕೊಂಡಿದ್ದಾರೆ. ಇದೇ ಸಕ್ಸಸ್‌ನಿಂದ ಕಾಂತಾರ-2 ಸಿನಿಮಾ ಮಾಡಿ ಅಂತ ಕಾಂತಾರದ ಶಿವನಿಗೆ ಬೇಡಿಕೆ ಕೂಡ ಬರ್ತಾ ಇವೆ. ಕಾಂತಾರ ಒಂದು ದಂತಕತೆ. ಕಣ್ಣಿಗೆ ಹಬ್ಬ, ಮೈ ಮನ ರೋಮಾಂಚನಗೊಳ್ಳೋ ಸ್ಟೋರಿ ಈ ಸಿನಿಮಾದಲ್ಲಿದೆ. ಹೀಗಾಗಿ ಕಾಂತರ ಬಿಡುಗಡೆ ಆಗಿ ಮುರು ದಿನದಿಂದ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. 

ಕಾಂತಾರದ ಸಕ್ಸಸ್ ಖುಷಿಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿರೋ ರಿಷಬ್ ಶೆಟ್ಟಿ ಈ ಸಿನಿಮಾದ ಪಾರ್ಟ್-2 ಮಾಡಬಹುದು ಅಂತ ಸುಳಿವು ಕೊಟ್ಟಿದ್ದಾರೆ. ಕಾಂತಾರ ಸಿನಿಮಾ ನಿಜಕ್ಕು ಒಂದು ಅದ್ಭುತ ಲೋಕ. ಈ ಸಿನಿಮಾದ ಕಥೆಯ ಕೊನೆಯಲ್ಲಿ ಕಾಂತಾರ ಪಾರ್ಟ್-2 ಮಾಡೋದಕ್ಕೂ ಲಿಂಕ್ ಇಟ್ಟಿದ್ದಾರೆ. ರಿಷಬ್ ಹೇಳಿದಂತೆ ಕಾಂತಾರ 2 ಸ್ಟೋರಿಯನ್ನ ಮೊದಲಿನಿಂದಲೂ ಶುರು ಮಾಡಬಹುದು ಅಥವ ಕ್ಲೈಮ್ಯಾಕ್ಸ್‌ನಿಂದಲೂ ಆರಂಭಿಸಬಹುದು. ಈ ಬಗ್ಗೆ ರಿಷಬ್ ಈಗಾಗಲೇ ಪ್ಲಾನ್ ಕೂಡ ಮಾಡಿದ್ದಾರೆ. ಆದ್ರೆ ಕಾಂತಾರ-2 ಯಾವಾಗ ಎಕ್ಸಿಕ್ಯೂಟ್ ಆಗುತ್ತೆ ಅನ್ನೋ ಗುಟ್ಟನ್ನ ಬಿಟ್ಟುಕೊಟ್ಟಿಲ್ಲ. ಹೊಂಬಾಳೆ ಫಿಲಮ್ಸ್ ಅಂದ್ರೆ ಇಂಡಿಯನ್ ಸಿನಿ ಜಗತ್ತಿನಲ್ಲಿ ದೊಡ್ಡ ಹೆಸರಿದೆ. ಈ ಬ್ಯಾನರ್ನಲ್ಲಿ ಬರೋ ಸಿನಿಮಾಗಳಿಗೆ ದೊಡ್ಡ ಮಾರ್ಕೆಟ್ ಇದೆ. ಕಾಂತಾರ ಸಿನಿಮಾವನ್ನ ಹಲವು ಭಾಷೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಬಹುದಿತ್ತು.

ಈ ಬೇಡಿಕೆಯನ್ನ ನಿರ್ದೇಶಕ ರಿಷಬ್ ಶೆಟ್ಟಿ ಮುಂದೆ ಹೊಂಬಾಳೆ ಪ್ರೊಡಕ್ಷನ್ ಕೂಡ ಇಟ್ಟಿತ್ತು. ಆದ್ರೆ ಶೆಟ್ರು ಮಾತ್ರ ಪ್ಯಾನ್ ಇಂಡಿಯಾ ಕಾನ್ಸೆಪ್ಟೆ ಬೇಡ. ನಮ್ ಸಿನಿಮಾನ ಕನ್ನಡ ಭಾಷೆಯಲ್ಲೇ ಎಲ್ಲರೂ ನೋಡಲಿ ಅಂದಿದ್ರಂತೆ. ಅದರಂತೆ ಇಂದು ದೇಶಾದ್ಯಂತ ಈ ಸಿನಿಮಾವನ್ನ ಕನ್ನಡದಲ್ಲೇ ಎಲ್ಲರೂ ಕಣ್ತುಂಬಿಕೊಳ್ಳುತ್ತಿದ್ದಾರೆ. ಕಾಂತಾರದ ಹೀರೋ ಶಿವ ರಿಷಬ್ ಶೆಟ್ಟಿ ಇನ್ಮುಂದೆ ಹೊಂಬಾಳೆ ಬ್ಯಾನರ್ನ ಮನೆ ಮಗ.. ಯಾಕ್ ಗೊತ್ತಾ. ರಿಷಬ್ ಯಾವ್ದೇ ಸಿನಿಮಾ ಮಾಡಿದ್ರು ಆ ಚಿತ್ರಕ್ಕೆ ನಾವೇ ಬಂಡವಾಳ ಹೂಡುತ್ತೇವೆ ಅಂತ ಹೊಂಬಾಳೆ ಬ್ಯಾನರ್ ಬೇಡಿಕೆ ಇಟ್ಟಿದೆಯಂತೆ. ಹೊಂಬಾಳೆ ಫಿಲಮ್ಸ್‌ನ ನಿರ್ಮಾಪಕ ವಿಜಯ್ ಕಿರಗಂದೂರು ಫೇವರಿಟ್ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಚಿತ್ರರಂಗದಲ್ಲಿ ಹೊಂಬಾಳೆ ಬ್ಯಾನರ್‌ಗೆ ಒಂದು ಗೌರವ ತಂದುಕೊಟ್ಟಿದ್ದೇ ಅಪ್ಪು. ಈಗ ರಿಷಬ್ ಶೆಟ್ಟಿ ಹೊಂಬಾಳೆ ಫಿಲಮ್ಸ್‌ನ ಫೇವರಿಟ್ ಡೈರೆಕ್ಟರ್ ಆಗಿದ್ದಾರೆ. ಹೀಗಾಗಿ ಇನ್ಮುಂದೆ ಹೊಂಬಾಳೆ ರಿಷಬ್ ಕಾಂಬಿನೇಷನ್‌ನಲ್ಲಿ ಹಲವು ಸಿನಿಮಾಗಳನ್ನೂ ನಿರೀಕ್ಷಿಸಬಹುದು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment