Asianet Suvarna News Asianet Suvarna News

ಕಂಬಳದಲ್ಲಿ ಕೆಸರೆಬ್ಬಿಸಿದ ರಿಷಬ್ ಶೆಟ್ಟಿ: ಸೆ.30ಕ್ಕೆ ಕಾಂತಾರ ತೆರೆಗೆ!

ಮಂಗಳೂರಿನ ಕೆಸರು ಗದ್ದೆ ಕಂಬಳ ಅಂದ್ರೆ ಅದೊಂದು ದೊಡ್ಡ ಹಬ್ಬ. ಕಟ್ಟು ಮಸ್ತಾದ ಕೋಣಗಳ ಜೊತೆಗೆ ಹುಸೆನ್ ಬೋಲ್ಡ್ ತರ ಕಂಬಳ ಓಡಿಸೋದನ್ನ ನೋಡುತ್ತಿದ್ರೆ ಮೈ ಝುಮ್ ಎನ್ನುತ್ತೆ.

ಮಂಗಳೂರಿನ ಕೆಸರು ಗದ್ದೆ ಕಂಬಳ ಅಂದ್ರೆ ಅದೊಂದು ದೊಡ್ಡ ಹಬ್ಬ. ಕಟ್ಟು ಮಸ್ತಾದ ಕೋಣಗಳ ಜೊತೆಗೆ ಹುಸೆನ್ ಬೋಲ್ಡ್ ತರ ಕಂಬಳ ಓಡಿಸೋದನ್ನ ನೋಡುತ್ತಿದ್ರೆ ಮೈ ಝುಮ್ ಎನ್ನುತ್ತೆ. ಅಬ್ಬಬ್ಬಾ! ಈಗ ಇದೇ ಕಂಬಳದ ರೋಚಕಥೆಯನ್ನ ತೆರೆದಿಟ್ಟಿದ್ದಾರೆ ದಿ ವೇರಿ ಟ್ಯಾಲೆಂಟೆಡ್ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ. ಕಾಂತಾರ ಸಿನಿಮಾಗೆ ಆಕ್ಷನ್ ಕಟ್ ಹೇಳಿರೋ ರಿಷಬ್ ಶೆಟ್ಟಿ ಕಂಬಳದಲ್ಲಿ ಕೆಸರೆಬ್ಬಿಸಿರೋ ಮೇಕಿಂಗ್ ರಿವೀಲ್ ಮಾಡಿದ್ದಾರೆ. ಈಗ ಕನ್ನಡ ಸಿನಿ ಪ್ರೇಕ್ಷಕರು ಕಣ್ಣಿಟ್ಟು ಕೂತಿರೋ ಸಿನಿಮಾ ಕಾಂತಾರ. ಅದರಲ್ಲೂ ಈ ಸಿನಿಮಾದ ಸಾರಥಿ ರಿಷಬ್ ಶೆಟ್ಟಿ. ಈ ಚಿತ್ರಕ್ಕೆ ಬಂಡವಾಳ ಇನ್ವೆಸ್ಟ್ ಮಾಡಿರೋದು ಹೊಂಬಾಳೆ ಅಂದ್ಮೇಲೆ ಕೇಳ್ಬೇಕಾ? ಆಂತಾರ ಮೂವಿ ಮೇಲಿನ ನಿರೀಕ್ಷೆ ಬೇರೆ ಲೆವೆಲ್‌ನಲ್ಲೇ ಕ್ರಿಯೆಟ್ ಆಗಿದೆ. ಆ ಎಕ್ಸ್ಪಟೇಷನ್ ಹೆಚ್ಚಿಸಿದೆ ಈಗ ಬಂದಿರೋ ಕಾಂತಾರದ ಕಂಬಳದ ಮೇಕಿಂಗ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment