Asianet Suvarna News Asianet Suvarna News

ಬೆಳ್ಳಿತೆರೆ ಮೇಲೆ ವಿಜೃಂಭಿಸಿದೆ ಒಂದು ದಂತ ಕಥೆ ಕಾಂತಾರ: ರಿಷಬ್ ಶೆಟ್ಟಿಯ ಕಥೆ ಹೇಗಿದೆ ಗೊತ್ತಾ?

ಅಬ್ಬಬ್ಬ..! ಅದೆಂತಾ ದಂತ ಕಥೆ. ಅದೆಂತಾ ವಿಶ್ಯುವಲ್ ಟ್ರೀಟ್. ಅದೆಂಥಾ ಅಭಿನಯ.. ಅಬ್ಬಬ್ಬಬಬಬ.. ಮೈ ನರ ನಾಡಿಯೆಲ್ಲಾ ರೋಮಾಂಚನಗೊಳ್ಳು ಅನುಭವ. ಅದುವೆ ಕಾಂತಾರ. ಯೆಸ್, ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾ ಬೆಳ್ಳಿತೆರೆ ಮೇಲೆ ಬಂದಿದೆ. 

Oct 1, 2022, 11:46 AM IST

ಅಬ್ಬಬ್ಬ..! ಅದೆಂತಾ ದಂತ ಕಥೆ. ಅದೆಂತಾ ವಿಶ್ಯುವಲ್ ಟ್ರೀಟ್. ಅದೆಂಥಾ ಅಭಿನಯ.. ಅಬ್ಬಬ್ಬಬಬಬ.. ಮೈ ನರ ನಾಡಿಯೆಲ್ಲಾ ರೋಮಾಂಚನಗೊಳ್ಳು ಅನುಭವ. ಅದುವೆ ಕಾಂತಾರ. ಯೆಸ್, ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾ ಬೆಳ್ಳಿತೆರೆ ಮೇಲೆ ಬಂದಿದೆ. ಈ ಸಿನಿಮಾ ನೋಡಿದವರು ಒಂದೇ ಮಾತಲ್ಲಿ ಕಡ್ಡಿ ಮುರಿದ ಹಾಗೆ ಹೇಳೋದೇನು ಗೊತ್ತಾ. ಚೆನ್ನಾಗಿದೆ ಅಂತ ಅಷ್ಟೆ ಅಲ್ಲ ಎಕ್ಸ್ಸ್ಟ್ರಾರ್ಡಿನರಿ ಅಂತಾರೆ. ಆ ಮಟ್ಟಕ್ಕೆ ಕಾಂತಾರ ದಂತೆಕಥೆ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಕಾಂತಾರ ಅನ್ನೋದು ನಿಜಕ್ಕೂ ಒಂದು ದಂತ ಕತೆ. ಈ ಸಿನಿಮಾದಲ್ಲಿ ಕರಾವಳಿ ಮಲೆನಾಡ ಸಂಸ್ಕೃತಿ ಅನಾವರಣ ಆಗಿದೆ. ಕಂಬಳ ಭೂತಕೋಲದ ಜೊತೆ ಆ ಜನರ ಜೀವನ ಶೈಲಿ ರಾಜಕಾರಣ ಭೂ ಕಬಳಿಕೆಯ ಸ್ಟೋರಿ ಇದೆ. ರಿಷಬ್ ಶೆಟ್ಟಿ ಶಿವನ ಪಾತ್ರದಲ್ಲಿ ದರ್ಬಾರ್ ಮಾಡಿದ್ರೆ ಅರಣ್ಯಾಧಿಕಾರಿ ರೋಲ್ನಲ್ಲಿ ಕೀಶೋರ್ ವಿಜೃಂಭಿಸಿದ್ದಾರೆ. 

ಮತ್ತೊಂದ್ ಕಡೆ ರಾಜಕಾರಣಿಯಾಗಿ ಅಚ್ಯೂತ್ ಕುಮಾರ್ ಕಾಣಿಸಿದ್ರೆ, ಸಪ್ತಮಿ ಗೌಡ ಲೀಲಾ ಅನ್ನೋ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ. ಕಾಂತಾರ ಸಿನಿಮಾದ ಪ್ರೀಮಿಯರ್ ಶೋ ಆಗಿದೆ. ಈ ಪ್ರದರ್ಶನದಲ್ಲಿ ಕನ್ನಡದ ಚಿತ್ರರಂಗದ ಟಾಪ್ ಸ್ಟಾರ್ಸ್ ಸಿನಿಮಾ ನೋಡಿದ್ದಾರೆ. ನಟಿ ರಮ್ಯಾ. ಅಶ್ವಿನಿ ಪುನೀತ್ ರಾಜ್ ಕುಮಾರ್, ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯೂತ್ ಕುಮಾರ್, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಸೇರಿದಂತೆ ಹಲವು ಸ್ಟಾರ್ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ನಟಿ ರಮ್ಯಾ ಹಾಗು ಅಶ್ವೀನಿ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿ ಸಿನಿಮಾವನ್ನ ತಮ್ಮದೇ ಸ್ಟೈಲ್‌ನಲ್ಲಿ ವಿಮರ್ಶಿಸಿದ್ದಾರೆ. ಕಾಂತಾರ ಸಿನಿಮಾ ನೋಡೋದಕ್ಕೆ ಇಡೀ ಕಾಂತಾರ ಟೀಂ ಬೆಂಗಳೂರಿನ ಸಂತೋಷ್ ಚಿತ್ರಮಂದಿರಕ್ಕೆ ಬಂದಿದ್ರು. ಈ ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ನೋಡಿ ನಟಿ ಸಪ್ತಮಿ ಗೌಡ ಭರ್ಜರಿ ಡಾನ್ಸ್ ಮಾಡಿದ್ದಾರೆ. ಟೋಟಲ್ ಆಗಿ ಹೇಳ್ಬೇಕು ಅಂದ್ರೆ ಕಾಂತಾರ ಸೂಪರ್ ಡೂಪರ್ ಅಂತ ಹೇಳ್ಬಹುದು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment