Asianet Suvarna News Asianet Suvarna News

Kantara Collection: ಒಂದೇ ದಿನದಲ್ಲಿ ಎಷ್ಟು ಗಳಿಸಿದೆ ಮಾಸ್ಟರ್​ ಪೀಸ್​ ಕಾಂತಾರ?

ಒಂದು ದಂತ ಕತೆ ಕಾಂತಾರ ತೆರೆ ಮೇಲೆ ತೆರೆದುಕೊಂಡಾಗಿದೆ. ಈ ಕರಾವಳಿಯ ಗುಳಿಗ ದೈವ ಘರ್ಜನೆ ಕೇಳಿ, ನೋಡಿ ಸಿನಿ ರಸಿಕರ ಕಣ್ಣು, ಮನ ರೋಮಾಂಚನಗೊಂಡಿದೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬರು ಇದೊಂದು ಮೈಲುಗಲ್ಲು.

Oct 2, 2022, 10:59 AM IST

ಒಂದು ದಂತ ಕತೆ ಕಾಂತಾರ ತೆರೆ ಮೇಲೆ ತೆರೆದುಕೊಂಡಾಗಿದೆ. ಈ ಕರಾವಳಿಯ ಗುಳಿಗ ದೈವ ಘರ್ಜನೆ ಕೇಳಿ, ನೋಡಿ ಸಿನಿ ರಸಿಕರ ಕಣ್ಣು, ಮನ ರೋಮಾಂಚನಗೊಂಡಿದೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬರು ಇದೊಂದು ಮೈಲುಗಲ್ಲು. ಕನ್ನಡದ ಮಾಸ್ಟರ್​ ಪೀಸ್​ ಮೂವಿ ಎನ್ನುತ್ತಿದ್ದಾರೆ. ಹಾಗಾದ್ರೆ ರಿಷಬ್ ಶೆಟ್ಟಿಯ ಕಾಂತಾರ ಮೂವಿ ಫಸ್ಟ್ ಡೇ ಎಷ್ಟು ಕಲೆಕ್ಷನ್ ಮಾಡಿದೆ ಅಂತ ಹುಡುಕಿದ್ರೆ ರಿಷಬ್ ಶೆಟ್ಟಿಯ ಇದುವರೆಗಿನ ಸಿನಿ ಕೆರಿಯರ್​ನಲ್ಲೇ ಕಾಂತಾರ ದಾಖಲೆ ಬರೆದಿದೆ ಅನ್ನೋ ಉತ್ತರ ಸಿಕ್ತಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರೋ ಕಾಂತಾರ ಸಿನಿಮಾಗೆ ಎಲ್ಲಾ ವಿಭಾಗದಲ್ಲಿ ಸೂಪರ್ ರಿವ್ಯೂ ಸಿಕ್ಕಿದೆ. ಹೀಗಾಗಿ ಕಾಂತಾರ ಬಿಡುಗಡೆ ಆಗಿರೋ ಚಿತ್ರಮಂದಿರಗಳಲ್ಲಿ ಮೊದಲ ಶೋನಿಂದ ಹೌಸ್​ ಫುಲ್ ಬೋರ್ಡ್​ ಬಿದ್ದಿದೆ. 

ಇದರ ಫಲವೇ ಕಾಂತಾರ ಸಿನಿಮಾ ಎರಡು ದಿನದಲ್ಲಿ ಬರೋಬ್ಬರಿ 8 ರಿಂದ 9 ಕೋಟಿ ಕಲೆಕ್ಷನ್ ಮಾಡಿದೆ ಅಂತ ಹೇಳ್ತಾಗ್ತಿದೆ. ರಿಷಬ್ ಶೆಟ್ಟಿ ಸಿನಿ ಖರಿಯರ್​ನಲ್ಲೇ ಎರಡು ದಿನದಲ್ಲಿ ಇಷ್ಟೊಂದು ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಕಾಂತಾರ ಆಗಿದೆ. ಹೊಂಬಾಳೆ ಪ್ರೊಡಕ್ಷನ್​​ನ ಕಾಂತಾರ ಸಿನಿಮಾ ವೀಕೆಂಡ್​ನಲ್ಲಿ ಸೂಪರ್ ಕಲೆಕ್ಷನ್ ಮಾಡ್ತಿದೆ. ಕಾಂತಾರ ನೋಡಿದ ಪ್ರತಿಯೊಬ್ಬರೂ ಈ ಸಿನಿಮಾವನ್ನ ಕೊಂಡಾಡುತ್ತಿದ್ದಾರೆ. ಆಯ್ಕೆ ಮಾಡಿದ ಕಥೆ, ಅದನ್ನು ಪ್ರಸೆಂಟ್ ಮಾಡಿದ ರೀತಿ, ಕಲಾವಿದರ ಅಭಿನಯ, ರಿಷಬ್ ಶೆಟ್ಟಿ ಆರ್ಭಟ, ಹಿನ್ನೆಲೆ ಸಂಗೀತ ಕ್ಯಾಮೆರಾ ವರ್ಕ್, ವಿಶ್ಯೂವಲ್ ಟ್ರೀಟ್​ ಎಲ್ಲವೂ ಕಣ್ಣಿಗೆ ಹಬ್ಬ. ಇಷ್ಟೆಲ್ಲಾ ಅದ್ಧೂರಿತನ ಇದ್ಮೇಲೆ ಪ್ರೇಕ್ಷಕ ಈ ಸಿನಿಮಾ ಮಿಸ್ ಮಾಡಿಕೊಳ್ಳೋಕೆ ಸಾಧ್ಯಾನ ಕಂಡಿತ ಇಲ್ಲ. ಅದರಲ್ಲು ದಸರಾ ಹಬ್ಬದ ಸಾಲು ಸಾಲು ರಜೆ ಬೇರೆ ಸಿಕ್ಕಿದೆ. ಹೀಗಾಗಿ ವರ್ಲ್ಡ್​ ವೈಡ್​ ಕಲೆಕ್ಷನ್​​ನಲ್ಲಿ ಇನ್ನೊಂದು ವಾರದಲ್ಲಿ ಕಾಂತಾರ 50 ಕೋಟಿ ಕ್ಲಬ್ ಸೇರಿದ್ರು ಆಶ್ವರ್ಯ ಇಲ್ಲ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment