Asianet Suvarna News Asianet Suvarna News

ಉಪ್ಪಿಯ 'UI' ಪ್ರಪಂಚದಲ್ಲಿ ಅಂತರಾಷ್ಟ್ರೀಯ ಅಲೆ: ಯುಐ ಬಿಜಿಎಂಗೆ ಹಂಗೇರಿಯಾ ಆಯ್ಕೆ ಮಾಡಿದ್ದೇಕೆ ರಿಯಲ್ ಸ್ಟಾರ್?

ಉಪೇಂದ್ರ ಹಾಗು ಅಜನೀಶ್ ಲೋಕನಾತ್ ಈಗ ಯುಐ ಪ್ರಪಂಚದಲ್ಲಿ ಅಂತರಾಷ್ಟ್ರೀಯ ಅಲೆಯೊಂದನ್ನ ಎಬ್ಬಿಸಿದ್ದಾರೆ. ಅದೇನ್ ಗೊತ್ತಾ.? ಯುಐನ ಟ್ಯೂನ್​​ಗಾಗಿ ಹಂಗೇರಿಯಾಗೆ ಹೋಗಿದೆ ಈ ಕಿಲಾಡಿ ಜೋಡಿ. 

ಕನ್ನಡದಲ್ಲಿ ಬಿಗ್ ಸ್ಟಾರ್ ಸಿನಿಮಾಗಳ ಕೊರತೆ ಇದೆ. ದೊಡ್ಡ ಸ್ಟಾರ್​ಗಳ ವರ್ಷಕ್ಕೆ ಒಂದ್ ಸಿನಿಮಾ ಬಂದ್ರು ಗ್ರೇಟ್ ಅನ್ನೋ ಹಾಗಾಗಿದೆ. ಇದಕ್ಕೆ ಕಾರಣ ಸಿನಿಮಾದ ಕ್ವಾಲಿಟಿ ಮೇಲೆ ವರ್ಕ್​ ಮಾಡುತ್ತಿರೋದು. ಹೌದು, ಈಗ ಪ್ರೇಕ್ವಕ ಕ್ವಾಲಿಟಿ ಕಂಟೆಂಟ್ ಸಿನಿಮಾಗಳನ್ನ ಕೇಳುತ್ತಿದ್ದಾರೆ. ಅವರ ನಿರೀಕ್ಷೆ ರೀಚ್ ಮಾಡೋಕೆ ಒಂದು ಸಿನಿಮಾ ಮೇಲೆ ವರ್ಷಗಟ್ಟಲೆ ವರ್ಕ್​ ಮಾಡಬೇಕು. ಹೊಸದನ್ನಿನ್ನೇನೋ ಹೊತ್ತು ತರಬೇಕು. ಈ ಚಾಲೇಂಜ್​​ಅನ್ನ ಒಪ್ಪಿಕೊಂಡು ಭೂರಿ ಬೋಜನ ಸಿದ್ಧಪಡಿಸುತ್ತಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ಅದು ಯುಐ ಸಿನಿಮಾದಲ್ಲಿ. ನಟ ಉಪೇಂದ್ರ ಅವರ ಕನಸು ಮನಸು ಏನಿದ್ರು ಈಗ ಯುಐ ಸಿನಿಮಾ. 

ಈ ಸಿನಿಮಾದ ಟ್ರೋಲ್ ಸಾಂಗ್ ಸೂಪರ್ ಡೂಪರ್ ಹಿಟ್ ಆಗಿದೆ. ಸಂಗೀತ ನಿರ್ದೇಶಕ ಅಜನೀಶ್ ಟ್ಯೂನ್​ ಟ್ರೆಂಡ್ ಆಗಿದೆ. ಯುಐ ಸ್ಯಾಂಪಲ್ಸ್​ಗಳು ದೇಶಾದ್ಯಂತ ಸೌಂಡ್ ಮಾಡಿದೆ. ಆದ್ರೆ ಅದಕ್ಕೂ ಮಿಗಿಲಾದದ್ದೇನನ್ನಾದ್ರು ಕೊಡಬೇಕು ಅಂತ ಡಿಸೈಡ್ ಮಾಡಿರೋ ಉಪೇಂದ್ರ ಹಾಗು ಅಜನೀಶ್ ಲೋಕನಾಥ್ ಈಗ ಯುಐ ಪ್ರಪಂಚದಲ್ಲಿ ಅಂತರಾಷ್ಟ್ರೀಯ ಅಲೆಯೊಂದನ್ನ ಎಬ್ಬಿಸಿದ್ದಾರೆ. ಅದೇನ್ ಗೊತ್ತಾ.? ಯುಐನ ಟ್ಯೂನ್​​ಗಾಗಿ ಹಂಗೇರಿಯಾಗೆ ಹೋಗಿದೆ ಈ ಕಿಲಾಡಿ ಜೋಡಿ. ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳು ಸಂಗೀತಕ್ಕೆ ಹೆಸರುವಾಸಿ. ಮ್ಯೂಸಿಕ್ ಮೇಲೆ ಹೆಚ್ಚು ವರ್ಕ್​ ಮಾಡೋ ಉಪೇಂದ್ರ ತನ್ನ ಸೂಪರ್​ ಹಿಟ್ ಹಾಡುಗಳನ್ನ ಕೊಟ್ಟವರು. 

ಅದಕ್ಕೆ ಎಕ್ಸಾಂಪಲ್​ ಹೇಳಬೇಕಿಲ್ಲ. ಉಪ್ಪಿ ಡೈರೆಕ್ಷನ್​ ಸಿನಿಮಾಗಳ ಆಲ್ಬಂ ಓಪನ್ ಮಾಡಿದ್ರೆ ಎಂತೆಂಥಾ ಹಾಡುಗಳ ಬಂದಿವೆ ಅಂತ ಗೊತ್ತಾಗುತ್ತೆ. ಈಗ ಯುಐನಲ್ಲೂ ಅಂತಹ ಅದ್ಭುತ ಸಂಗೀತದ ಟ್ರೀಟ್ ಕೊಡೋದಕ್ಕಾಗಿ ಹಂಗೇರಿಯಾಗೆ ಹಾರಿದ್ದಾರೆ ಉಪೇಂದ್ರ ಹಾಗು ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್.. ಇಲ್ಲಿ ಯುಐನ ಬಿಜಿಎಂ ರೆಕಾರ್ಡಿಂಗ್ ನಡೆಯುತ್ತಿದೆ. ಹೊಸ ಟೆಕ್ನಾಲಜಿಯ ಮ್ಯೂಸಿಕ್​ ಅನ್ನ ಹುಡುಕಿ ಹೊರಟಿರೋ ಉಪೇಂದ್ರ ಈ ಭಾರಿ ಹಂಗೇರಿಯಾದಲ್ಲಿ ತಮ್ಮ ಸಿನಿಮಾದ ಬಿಜಿಎಂ ಸೆಟ್​ ಮಾಡಿಸುತ್ತಿದ್ದಾರೆ. ಯಾಕಂದ್ರೆ ಯುಐ ಯುನಿವರ್ಸೆಲ್ ಕಲ್ಕರ್ಚ್ಡ್​ ಸಿನಿಮಾ. ಹೀಗಾಗಿ ಪ್ಯಾನ್ ವರ್ಲ್ಡ್​ನಲ್ಲಿ ಯುಐ ಸದ್ದು ಮಾಡಬೇಕು ಅಂದ್ರೆ ಎಲ್ಲಾ ನೇಟೀವಿಟಿಗೆ​ ತಕ್ಕಂತ ಬಿಜಿಎಂ ಬೇಕು. 

ನಮ್ಮಲ್ಲಿ ಕರ್ನಾಟಿಕ್ ಸಂಗೀತ ಹೇಗೆ ಫೇಮಸ್ಸೋ ಹಾಗೆ ವಿದೇಶಗಳಲ್ಲಿ ಸಿಂಪೋನಿಸ್​ ಹಾಗು ದೊಡ್ಡ ವೈಲಿನ್​ಗಳನ್ನ ಬಳಸಿ ಮ್ಯೂಸಿಕ್ ಕ್ರಿಯೆಟ್ ಮಾಡುತ್ತಾರೆ. ಅದರಲ್ಲೂ ಹಂಗೆರಿಯ ಸಂಗೀತಾಗರರು ಭಿನ್ನವಾದ ಮ್ಯೂಸಿಕ್ ಸೃಷ್ಟಿಸುತ್ತಾರೆ. ಅವರಿಗೆ ಜನಪದ ಶೈಲಿಯ ಪರಿಚಯವಿದೆ. ಇದು ಯುಐ ಸಿನಿಮಾಕ್ಕೆ ಬೇಕಿದೆ. ಹೀಗಾಗಿ ಹಂಗೇರಿ ರಾಜಧಾನಿ ಮುದ್ದಾಪೆಸ್ಟ್ ಅನ್ನೋ ಊರಿನಲ್ಲಿ ಯುಐ ಬಿಜಿಎಂ ಲೈವ್ ರೆಕಾರ್ಡಿಂಗ್ ಮಾಡುತ್ತಿದ್ದಾರೆ. ಸಧ್ಯ ಯುಐ ಶೂಟಿಂಗ್ ಮುಗಿದಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. Lahari Films ಹಾಗು Venus Enterrtainers ಬ್ಯಾನರ್​ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದ್ದು, ಇದೇ ವರ್ಷ ಯುಐ ತೆರೆ ಮೇಲೆ ಬರಲಿದೆ.