Asianet Suvarna News Asianet Suvarna News

ಕಾಂತಾರ ನೋಡಿ ಥ್ರಿಲ್ ಆದ ರಕ್ಷಿತ್‌ ಶೆಟ್ಟಿ: ಸೀಟಿನಿಂದ ಜಿಗಿದು ರಿಷಬ್‌ರನ್ನ ಅಪ್ಪಿಕೊಂಡ ಸಿಂಪಲ್ ಸ್ಟಾರ್!

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಾಂತಾರದ ಶಿವ ರಿಷಬ್ ಶೆಟ್ಟಿ ಒಡ ಹುಟ್ಟಿದವರಲ್ಲ. ರಕ್ತ ಸಂಬಂಧಿಗಳಲ್ಲ. ಆದರೆ ಇವರಿಬ್ಬರೂ ಅಣ್ಣ ತಮ್ಮಂದಿರಿಗಿಂತಲೂ ಹೆಚ್ಚು ಆತ್ಮೀಯತೆಯಿಂದಿದ್ದಾರೆ. ಕಷ್ಟ ಸುಖದಲ್ಲಿ ಒಬ್ಬರಿಗೊಬ್ಬರು ಹೆಗಲಾಗುತ್ತಿದ್ದಾರೆ. ಅದರಲ್ಲೂ ಸಿನಿಮಾ ರಂಗದಲ್ಲಿ ಇವ್ರಿಬ್ಬರನ್ನ ಶಂಕರ್‌ನಾಗ್ ಅನಂತ್‌ನಾಗ್ ಸ್ನೇಹಕ್ಕೆ  ಹೋಲಿಸುತ್ತಿದ್ದಾರೆ. 

Oct 3, 2022, 11:45 PM IST

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಾಂತಾರದ ಶಿವ ರಿಷಬ್ ಶೆಟ್ಟಿ ಒಡ ಹುಟ್ಟಿದವರಲ್ಲ. ರಕ್ತ ಸಂಬಂಧಿಗಳಲ್ಲ. ಆದರೆ ಇವರಿಬ್ಬರೂ ಅಣ್ಣ ತಮ್ಮಂದಿರಿಗಿಂತಲೂ ಹೆಚ್ಚು ಆತ್ಮೀಯತೆಯಿಂದಿದ್ದಾರೆ. ಕಷ್ಟ ಸುಖದಲ್ಲಿ ಒಬ್ಬರಿಗೊಬ್ಬರು ಹೆಗಲಾಗುತ್ತಿದ್ದಾರೆ. ಅದರಲ್ಲೂ ಸಿನಿಮಾ ರಂಗದಲ್ಲಿ ಇವ್ರಿಬ್ಬರನ್ನ ಶಂಕರ್‌ನಾಗ್ ಅನಂತ್‌ನಾಗ್ ಸ್ನೇಹಕ್ಕೆ  ಹೋಲಿಸುತ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಎನ್ನುವಂತೆ ಇಲ್ಲೊಂದು ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೊನ್ನೆ ತಾನೆ ಚಿತ್ರರಂಗದ ಹಲವು ಗಣ್ಯರು ಕಾಂತಾರ ಸಿನಿಮಾ ನೋಡಿದ್ದಾರೆ. ಆದ್ರೆ ಅವರೆಲ್ಲರ ಮಧ್ಯೆ ಕೂತು ಕಾಂತಾರ ನೋಡುತ್ತಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕ್ಲೈಮ್ಯಾಕ್ಸ್ ಮುಗಿಯುತ್ತಿದ್ದಂತೆ ಥ್ರಿಲ್ ಆಗಿದ್ದು, ತಾನು ಕೂತಿದ್ದ ಸೀಟ್‌ನಿಂದ ಜಿಗಿದು ಬಂದು ರಿಷಬ್ ಶೆಟ್ಟಿಯನ್ನ ಗಟ್ಟಿಯಾಗಿ ಅಪ್ಪಿಕೊಂಡಿದ್ರು. ಆ ಅಪ್ಪುಗೆಯಲ್ಲಿ ಇಬ್ಬರ ಸ್ನೇಹ ಎಷ್ಟು ಗಟ್ಟಿಯಾಗಿದ್ದು ಅಂತ ಗೊತ್ತಾಗುತ್ತಿತ್ತು. ಅಷ್ಟೆ ಅಲ್ಲ ಕಾಂತಾರ ಸಿನಿಮಾ ಅದೆಷ್ಟು ಎಂಟರ್ಟೈನಿಂಗ್ ಆಗಿದೆ ಅಂತ ಈ ಅಪ್ಪುಗೆ ಹೇಳುತ್ತಿತ್ತು. ಇದೀಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment