Asianet Suvarna News Asianet Suvarna News

ರಕ್ಕಮ್ಮನ ಗುಂಗಲ್ಲಿ ಮತ್ತೆ ತೇಲಿದ ಗಂಡ್ ಹೈಕ್ಳು: ಒಂದೇ ದಿನದಲ್ಲಿ 1 ಮಿಲಿಯನ್ ವೀಕ್ಷಣೆ

ರಾ ರಾ ರಕ್ಕಮ್ಮ..ಆ ಹಾ ನೀನು ಅದೆಷ್ಟು ಕಿಕ್ಕಮ್ಮ.. ಆಲ್​ ಇಂಡಿಯಾ ಕಟೌನ್​ ಕಿಚ್ಚ ಸುದೀಪ್​​ ಡ್ರೀಮ್ ವಿಕ್ರಾಂತ್ ರೋಣನನ್ನ ಪ್ರಪಂಚಕ್ಕೇ ಪರಿಚಯಿಸಿದ್ದು ಇದೇ ರಕ್ಕಮ್ಮ. ಇಷ್ಟು ದಿನ ಚಿತ್ರಮಂದಿರದಲ್ಲಿ ಮಾತ್ರ ನೋಡುತ್ತಿದ್ದ ಈ ಹಾಟೆಸ್ಟ್​ ರಕ್ಕಮ್ಮನ ನೃತ್ಯವನ್ನ ಈಗ ನಿಮ್ಮ ಮೊಬೈಲ್​ನಲ್ಲೇ ನೋಡೋ ಚಾನ್ಸ್​ ಸಿಕ್ಕಿದೆ. 

ರಾ ರಾ ರಕ್ಕಮ್ಮ..ಆ ಹಾ ನೀನು ಅದೆಷ್ಟು ಕಿಕ್ಕಮ್ಮ.. ಆಲ್​ ಇಂಡಿಯಾ ಕಟೌನ್​ ಕಿಚ್ಚ ಸುದೀಪ್​​ ಡ್ರೀಮ್ ವಿಕ್ರಾಂತ್ ರೋಣನನ್ನ ಪ್ರಪಂಚಕ್ಕೇ ಪರಿಚಯಿಸಿದ್ದು ಇದೇ ರಕ್ಕಮ್ಮ. ಇಷ್ಟು ದಿನ ಚಿತ್ರಮಂದಿರದಲ್ಲಿ ಮಾತ್ರ ನೋಡುತ್ತಿದ್ದ ಈ ಹಾಟೆಸ್ಟ್​ ರಕ್ಕಮ್ಮನ ನೃತ್ಯವನ್ನ ಈಗ ನಿಮ್ಮ ಮೊಬೈಲ್​ನಲ್ಲೇ ನೋಡೋ ಚಾನ್ಸ್​ ಸಿಕ್ಕಿದೆ. ಯಾಕಂದ್ರೆ ರಾ ರಾ ರಕ್ಕಮ್ಮನ ವೀಡಿಯೋ ಸಾಂಗ್ ಹೊರ ಬಂದಿದೆ. ಈ ಹಾಡು ಬಿಡುಗಡೆ ಆಗಿ ಒಂದೇ ದಿನದಲ್ಲಿ ಬರೋಬ್ಬರಿ 1 ಮಿಲಿಯನ್ ವೀಕ್ಷಣೆ ಕಂಡು ರಕ್ಕಮ್ಮನ ಗುಂಗಲ್ಲಿ ಗಂಡ್​​​​​ ಹೈಕ್ಳು ತೇಲಿ ಬಿಟ್ಟಿದ್ದಾರೆ. ಕಿಚ್ಚ ಸುದೀಪ್​ ಬಾಲಿವುಡ್ ಬ್ಯೂಸಿ ಜಾಕ್ವೆಲೀನ್ ಫರ್ನಾಂಡಿಸ್​​ರನ್ನ ವಿಕ್ರಾಂತ್ ರೋಣ ಸಿನಿಮಾಗಾಗಿ ಬೆಂಗಳೂರಿಗೆ ಕರೆಸುತ್ತಿದ್ದಾರೆ ಅಂದಾಗ್ಲೆ ದೊಡ್ಡ ನಿರೀಕ್ಷೆ ಇತ್ತು. ಜಾಕ್ವೆಲೀನ್ ಅದೇನು ಮೋಡಿ ಮಾಡ್ತಾರೆ ಅನ್ನೋ ಕುತೂಹಲ ಕ್ರಿಕೆಟ್ ಆಗಿತ್ತು. ಆ ಕುತೂಹಲಕ್ಕೆ ತಕ್ಕಂತೆ ವಿಕ್ರಾಂತ್ ರೋಣನ ರಾ ರಾ ರಕ್ಕಮ್ಮ ಲಿರಿಕಲ್ ಸಾಂಗ್ ಹೊರ ಬಂದಿತ್ತು. ಈ ಹಾಡು ಬಿಡುಗಡೆ ಆಗುತ್ತಿದ್ದಂತೆ ಕಿಚ್ಚ ಜಾಕ್ವೆಲಿನ್ ಮಾಡಿದ್ದ ಸಿಗ್ನೇಚರ್ ಸ್ಟೆಪ್ಸ್​ ಸಿಕ್ಕಾಪಟ್ಟೆ ಟ್ರೆಂಡ್ ಆಯ್ತು. ಅಂದಿನಿಂದ ರಕ್ಕಮ್ಮ ಸೋಷಿಯಲ್ ಮೀಡಿಯಾದ ಒಡತಿಯಂತೆ ವಿಜೃಂಭಿಸುತ್ತಿದ್ದು, ಈಗ ರಕ್ಕಮ್ಮನ ಸಂಪೂರ್ಣ ವೀಡಿಯೋ ಹಾಡು ಹೊರ ಬಂದಿದೆ.

Video Top Stories