Asianet Suvarna News Asianet Suvarna News

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ: ಮತ್ತೆ ಒಂದಾದ್ರು ಸೂಪರ್ ಸ್ಟಾರ್ಸ್!

ಸ್ಯಾಂಡಲ್‌ವುಡ್ ಸಿನಿ ದುನಿಯಾದಲ್ಲಿ ಈಗ ಮತ್ತೊಂದು ಮಲ್ಟಿ ಸ್ಟಾರ್ಸ್ ಸಿನಿಮಾ ಸಿದ್ಧವಾಗುತ್ತಿದೆ. ಈ ಭಾರಿ ಆ ಸಿನಿಮಾದಲ್ಲಿ ಜೊತೆಯಾಗುತ್ತಿರೋದು ಯಾವ ಸ್ಟಾರ್ಸ್ ಗೊತ್ತಾ..? ಕನ್ನಡ ಬೆಳ್ಳಿತೆರೆಯಲ್ಲಿ 'ಓಂ'ಕಾರ ಬರೆದಿದ್ದ ಸೂಪರ್ ಸ್ಟಾರ್ಸ್ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ಹಾಗು ರಿಯಲ್ ಸ್ಟಾರ್ ಉಪೇಂದ್ರ. 

ಸ್ಯಾಂಡಲ್‌ವುಡ್ ಸಿನಿ ದುನಿಯಾದಲ್ಲಿ ಈಗ ಮತ್ತೊಂದು ಮಲ್ಟಿ ಸ್ಟಾರ್ಸ್ ಸಿನಿಮಾ ಸಿದ್ಧವಾಗುತ್ತಿದೆ. ಈ ಭಾರಿ ಆ ಸಿನಿಮಾದಲ್ಲಿ ಜೊತೆಯಾಗುತ್ತಿರೋದು ಯಾವ ಸ್ಟಾರ್ಸ್ ಗೊತ್ತಾ..? ಕನ್ನಡ ಬೆಳ್ಳಿತೆರೆಯಲ್ಲಿ 'ಓಂ'ಕಾರ ಬರೆದಿದ್ದ ಸೂಪರ್ ಸ್ಟಾರ್ಸ್ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ಹಾಗು ರಿಯಲ್ ಸ್ಟಾರ್ ಉಪೇಂದ್ರ. ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್ ಮತ್ತು ರಿಯಲ್ ಸೂಪರ್ ಸ್ಟಾರ್ ಬುದ್ಧಿವಂತ ನಿರ್ದೇಶಕ ಉಪೇಂದ್ರ.. ಉಪ್ಪಿ-ಶಿವಣ್ಣ ಈಗಾಗ್ಲೆ ಸ್ಯಾಂಡಲ್‌ವುಡ್‌ನಲ್ಲಿ ಅಳಿಸಲಾಗದ ರೆಕಾರ್ಡ್ ಬರೆದವರು. ಓಂ ಸಿನಿಮಾದಲ್ಲಿ ಶಿವಣ್ಣನ ಕೈಗೆ ಲಾಂಗ್ ಕೊಟ್ಟ ಉಪೇಂದ್ರ ಶಿವಣ್ಣನ ಫೇವರಿಟ್ ಡೈರೆಕ್ಟರ್ ಕೂಡ ಹೌದು. 

ಅಷ್ಟೆ ಅಲ್ಲ ಪ್ರೀತ್ಸೆ, ಲವ-ಕುಶ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಓಂಕಾರದ ಕೋಟೆ ಕಟ್ಟಿರೋ ಉಪ್ಪಿ ಶಿವಣ್ಣ ಈಗ ಮತ್ತೆ ಬೆಳ್ಳಿತೆರೆ ಮೇಲೆ ಒಂದಾಗುತ್ತಿದ್ದಾರೆ. ಅದ್ಯಾವ ಚಿತ್ರಕ್ಕಾಗಿ ಈ ‘ಲವ-ಕುಶ’  ಒಂದಾಗ್ತಿದ್ದಾರೆ ಅಂತ ಕೇಳಿದ್ರೆ ಅದಕ್ಕೆ ಉತ್ತರ ಕನ್ನಡದ ಮ್ಯೂಸಿಕ್ ಮಾಂತ್ರಿಕಾ ಅರ್ಜುನ್ ಜನ್ಯ. ಇದು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಫಸ್ಟ್ ಟೈಮ್ ಡೈರೆಕ್ಷನ್ ಮಾಡಿತ್ತಿರೋ ಸಿನಿಮಾ. ಡಿಕೆಡಿ ರಿಯಾಲಿಟಿ ಡ್ಯಾನ್ ಶೋ ಸೆಟ್ನಲ್ಲಿ ಅರ್ಜುನ್ ಜನ್ಯ ಅವರ ಒನ್ ಲೈನ್ ಕಥೆ ಕೇಳಿ ಶಿವಣ್ಣ ಸಿನಿಮಾ ಮಾಡೋದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ರು. ಇದೀಗ ಈ ಸಿನಿಮಾಕ್ಕೆ ಉಪ್ಪಿ ಸೇರಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. 

ಗಾಳಿಪಟ 2 ಸಿನಿಮಾ ನಿರ್ಮಾಪಕ ರಮೇಶ್ ರೆಡ್ಡಿ ಬಂಡವಾಳ ಹುಡುತ್ತಿರೋ 45 ಸಿನಿಮಾದಲ್ಲಿ ಶಿವಣ್ಣನಿಗೆ ಇರೋ ಪಾತ್ರದಂತೆ ಒಂದು ಸ್ಟ್ರಾಂಗ್ ರೋಲ್ ಇದೆಯಂತೆ. ಶಿವಣ್ಣ ಮತ್ತು ಉಪ್ಪಿ ಒಟ್ಟಿಗೆ ಕಾಣಿಸಿಕೊಂಡ್ರೇ ಖಂಡಿತ ಏನಾದ್ರು ಒಂದು ಮ್ಯಾಜಿಕ್ ಆಗೇ ಆಗುತ್ತೆ. ಕಾರಣ ಇಬ್ಬರ ನಡುವೆ ಇರುವ ಗೆಳೆತನ.. ಒಬ್ಬರನೊಬ್ಬರು ಯಾವತ್ತಿಗೂ ಬಿಟ್ಟುಕೊಟ್ಟವರಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಕೂಡ ಒಂದಿದೆ. ನಾವಿಬ್ಬರು ಶಿವ ಪಾರ್ವತಿಯರು ಇದ್ದಂಗೆ. ನನ್ನ ಕ್ರಶು ಶಿವಣ್ಣ. ಗೀತಕ್ಕಾ ಏನಾದ್ರು ಶಿವಣ್ಣ ಅವರನ್ನ ಮದುವೆ ಆಗದಿದ್ದರೆ ನಾನೇನಾದ್ರು ಹೆಣ್ಣಾಗಿದ್ದರು ಖಂಡಿತ ನಾನೇ ಮದುವೆ ಆಗಿ ಬಿಡ್ತಿದೆ ಅಂತ ಉಪ್ಪಿ ಕಾರ್ಯಕ್ರಮ ಒಂದರಲ್ಲಿ ಹೇಳಿದ್ರು. ಇದೀಗ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ತಾರೆ ಅಂದ್ರೆ ಇಬ್ಬರ ಅಭಿಮಾನಿಗಳಿಗೆ ಅದಕ್ಕಿಂತ ದೊಡ್ಡ ಸರ್ಪ್ರೈಸ್ ಇನ್ನೇನಿದೆ ಅಲ್ವಾ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment