Asianet Suvarna News Asianet Suvarna News

ಈ ಪದಗಳಲ್ಲೆ ಅಡಗಿದೆಯಂತೆ ವಿಕ್ರಾಂತ್ ರೋಣ ಕತೆ..!

ಎಲ್ಲ ಕಡೆ ಯಕ್ಕಾ ಸಕ್ಕಾ ಸೌಂಡ್ ಮಾಡ್ತಿರೋ ಸಿನಿಮಾ ವಿಕ್ರಾಂತ್ ರೋಣ. ಸುದೀಪ್ ಇದ್ದಾರೆ ಅಂದ್ರೆ ಒಂದು ಸೆನ್ಸೇಷನ್ ಕ್ರಿಯೇಟ್ ಆಗುತ್ತೆ. ಅದನ್ನ ಡಬಲ್, ತ್ರಿಬಲ್ ಲೆವೆಲ್ಲಿಗೆ ಕರ್ಕೊಂಡ್ ಹೋಗಿರೋದು ಅನೂಪ್ ಭಂಡಾರಿ. ಆ ಗುಮ್ಮನ ಕಥೆಯ ಟ್ರೇಲರ್ ಗಮ್ಮತ್ತನ್ನೇ ಕ್ರಿಯೇಟ್ ಮಾಡಿದೆ. 
 

ಎಲ್ಲ ಕಡೆ ಯಕ್ಕಾ ಸಕ್ಕಾ ಸೌಂಡ್ ಮಾಡ್ತಿರೋ ಸಿನಿಮಾ ವಿಕ್ರಾಂತ್ ರೋಣ (Vikrant Rona) ಸುದೀಪ್ ಇದ್ದಾರೆ ಅಂದ್ರೆ ಒಂದು ಸೆನ್ಸೇಷನ್ ಕ್ರಿಯೇಟ್ ಆಗುತ್ತೆ. ಅದನ್ನ ಡಬಲ್, ತ್ರಿಬಲ್ ಲೆವೆಲ್ಲಿಗೆ ಕರ್ಕೊಂಡ್ ಹೋಗಿರೋದು ಅನೂಪ್ ಭಂಡಾರಿ. ಆ ಗುಮ್ಮನ ಕಥೆಯ ಟ್ರೇಲರ್ ಗಮ್ಮತ್ತನ್ನೇ ಕ್ರಿಯೇಟ್ ಮಾಡಿದೆ. 

ಟ್ರೇಲರ್ ನೋಡಿದವರ ಪ್ರಕಾರ ಸುದೀಪ್ ಈ ಸಿನಿಮಾದಲ್ಲಿ ಡಬಲ್ ಆಕ್ಟಿಂಗ್ ಮಾಡಿದ್ದಾರೆ. ಅವರ ಪ್ರಕಾರ ವಿಕ್ರಾಂತ್ ಬೇರೆ. ರೋಣನೇ ಬೇರೆ. ಮೊದಲಿಗೆ ಎಲ್ಲರೂ ರೋಣ ಅನ್ನೋದು ಊರು. ಆ ಊರಿಗೆ ವಿಕ್ರಾಂತ್ ಬರ್ತಾನೆ ಅಂದ್ಕೊಂಡಿದ್ರು. ಟ್ರೇಲರ್ ನೋಡಿದವರು ಅದನ್ನ ಚೇಂಜ್ ಮಾಡ್ಕೊಂಡಿದ್ದಾರೆ.

Vikrant Rona: ಕಿಚ್ಚ, ಅನೂಪ್ ಸೃಷ್ಟಿಯ ಹೊಸ ಪ್ರಪಂಚದ ದರ್ಶನ ಪಡೆದ ಫ್ಯಾನ್ಸ್ ಫಿದಾ

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಅನ್ನೋದನ್ನ ಡೈರೆಕ್ಟರ್ ಹೇಳಿ ಆಗಿದೆ. ಅನೂಪ್ ನಿರ್ದೇಶನದ ರಂಗಿತರಂಗ ನೋಡಿದವರು, ವಿಕ್ರಾಂತ್ ರೋಣ ಚಿತ್ರ ರಂಗಿತರಂಗದ ಮುಂದುವರೆದ ಭಾಗದಂತಿರುತ್ತೆ ಅಂತಿದ್ದಾರೆ. ನಿರೂಪ್ ಭಂಡಾರಿ ಕೂಡಾ ಇರೋದ್ರಿಂದ ಈ ಕಲ್ಪನೆಯನ್ನೂ ನೋಡಿಕೊಳ್ಳಬಹುದು. ಜೊತೆಗೆ ರಂಗಿತರಂಗದಲ್ಲಿ ಬಳಸಿರೋ ಮ್ಯೂಸಿಕ್ ಟ್ರ್ಯಾಕ್ ಅಂದ್ರೆ ಬಿಜಿಎಂ.. ಇಲ್ಲಿ ಡೈಲಾಗ್ ಆಗಿದೆ..

ಗರ ಗರ ಗರ ಗಗ್ಗರ ಜರ್ಬ ಪಿರನಲ್ಕುರಿ ನೆತ್ತರ ಪರ್ಬ.. ಈ ಲೈನಿನಲ್ಲೇ ಇಡೀ ಕಥೆ ಇದೆ. ಡಣ್ಣಾನ ಡಣ್ಣಾನ ಹಾಡಿನಲ್ಲಿಯೂ ಈ ಲೈನ್ ಇದೆ. ಹೀಗಾಗಿ ಇದು ಹಾರರ್ ಸಬ್ಜೆಕ್ಟ್ ರಬೇಕು ಅಂತಿದ್ದಾರೆ.