Asianet Suvarna News Asianet Suvarna News

ಕೋಟಿಗೊಬ್ಬ 3,  ಭಜರಂಗಿ 2 .. ಅಕ್ಟೋಬರ್‌ನಲ್ಲಿ ಸಿನಿಮಾ ಹಬ್ಬ

* ರಾಜ್ಯದಲ್ಲಿ ಕೊರಾನಾ ಕೇಸ್ ತಗ್ಗಿದ ಹಿನ್ನೆಲೆ ಚಿತ್ರರಂಗದ ಮಂದಿಗೆ  ಸಿಹಿ ಸುದ್ದಿ.

*  ಒಂದೇ ದಿನ ಸಲಗ ಮತ್ತು ಕೋಟಿಗೊಬ್ಬ

* ಬಿಗ್ ಬಜೆಟ್ ಚಿತ್ರಗಳು ತೆರೆಗೆ ತರಲು ತಯಾರಿ..

*  ಶುಭ ಹಾರೈಸಿಕೊಂಡ ನಾಯಕ ನಟರು

ಬೆಂಗಳೂರು(ಸೆ. 24) ಅಕ್ಟೋಬರ್ 14 ರಂದು ಎರಡು ಬಿಗ್  ಬಜೆಟ್ ಸಿನಿಮಾಗಳು ರಿಲೀಸ್  ಆಗುತ್ತಿವೆ.  ಹಲವು ದಿನಗಳ ಸಿನಿಪ್ರಿಯರ ಮತ್ತು ಸ್ಯಾಂಡಲ್‌ವುಡ್(sandalwood) ನ ಬೇಡಿಕೆಗೆ ಸರ್ಕಾರ ಕೊನೆಗೂ ಅಸ್ತು ಎಂದಿದ್ದು   ಅಕ್ಟೋಬರ್ 1 ರಿಂದ ಚಿತ್ರಮಂದಿರಗಳಲ್ಲಿ ಶೇ. 100  ಹಾಜರಾತಿಗೆ ಅವಕಾಶ ನೀಡಲಾಗುತ್ತಿದೆ. ಅಕ್ಟೋಬರ್ 14 ರಂದು ವಿಜಯ್ (Duniya Vijay) ಸಲಗ ಮತ್ತು ಕಿಚ್ಚ ಸುದೀಪ್ (Kiccha Sudeep) ಕೋಟಿಗೊಬ್ಬ 3  ಸಿನಿಮಾ ರಿಲೀಸ್ ಆಗುತ್ತಿದ್ದು ಸಿನಿಪ್ರಿಯರಿಗೆ ಹಬ್ಬ ಇದೆ.

ಸಲಗನ ಮೇಲೆ ದುನಿಯಾ ವಿಜಯ್ ಗೆ ಇರುವ ನಂಬಿಕೆ

ದಸರಾ ರಜೆ ಕಾರಣಕ್ಕೆ ತೆರೆಗೆ ಚಿತ್ರಗಳು ಅಪ್ಪಳಿಸುತ್ತಿವೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2  ಚಿತ್ರ ಸಹ ಅಕ್ಟೋಬರ್ 29  ರಂದು ಭಜರಂಗಿ 2  ರಿಲೀಸ್ ಆಗಲಿದೆ. ಸಿನಿ ಪ್ರಿಯರಿಗೆ ಅಕ್ಟೋಬರ್ ತಿಂಗಳು ಹಬ್ಬದ ಊಟ ಎಂದೇ ಹೇಳಬಹುದು.