Asianet Suvarna News Asianet Suvarna News

ಚಿತ್ರಮಂದಿರದ ಮುಂದೆ 'ವಿಕ್ರಾಂತ್ ರೋಣ'ನ ಹಬ್ಬ ಮಾಡ್ತಿದ್ದಾರೆ ಸುದೀಪ್ ಫ್ಯಾನ್ಸ್!

ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳ ನಿರೀಕ್ಷೆಯನ್ನೂ ಸುದೀಪ್ ಹುಸಿಗೊಳಿಸಿಲ್ಲ. ಹೀಗಾಗಿ ಫ್ಯಾನ್ಸ್ ವಿಕ್ರಾಂತ್ ರೋಣನ ಹಬ್ಬ ಮಾಡುತ್ತಿದ್ದಾರೆ.

ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳ ನಿರೀಕ್ಷೆಯನ್ನೂ ಸುದೀಪ್ ಹುಸಿಗೊಳಿಸಿಲ್ಲ. ಹೀಗಾಗಿ ಫ್ಯಾನ್ಸ್ ವಿಕ್ರಾಂತ್ ರೋಣನ ಹಬ್ಬ ಮಾಡುತ್ತಿದ್ದಾರೆ. ಚಿತ್ರಮಂದಿರದ ಮುಂದೆ ಕಿಚ್ಚ ಕಿಚ್ಚ ಅನ್ನೋ ಜೈಕಾರ, ಶಿಳ್ಳೆ, ಚಪ್ಪಾಳೆ, ಪಟಾಕಿ, ಡೊಳ್ಳು ಕುಣಿತದ ಸದ್ದು, ಹೂ ಮಳೆ, ಕಿಚ್ಚನ ಫೋಟೋ ಇರೋ ಧ್ವಜಗಳನ್ನು ಇಟ್ಟು ಸಂಭ್ರಮಿಸುತ್ತಿದ್ದಾರೆ. 

 ಸುದೀಪ್ ಅಭಿಮಾನಿಗಳು ಗಣೇಶ ಹಾಗು ದೀಪಾವಳಿ ಹಬ್ಬವನ್ನ ಈಗಲೇ ಆಚರಿಸುತ್ತಿದ್ದಾರೆ. ಕರ್ನಾಟಕದಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರೋ ವಿಕ್ರಾಂತ್ ರೋಣನಿಗಾಗಿ ಬೆಂಗಳೂರಿನ ಊರ್ವಶಿ ಚಿತ್ರಮಂದಿರ ಹಾಗು ವೀರೇಶ್ ಥಿಯೇಟರ್ನಲ್ಲಿ ಅಭಿಮಾನಿಗಳಿಂದ ತುಂಬಿಕೊಂಡಿತ್ತು. ಎಲ್ಲಿ ನೋಡಿದ್ರು ಸುದೀಪ್ ಫೋಟೋ ಇರೋ ಭಾವುಟಗಳು ಹಾರುತ್ತಿದ್ವು, ಪಟಾಕಿ ಸಿಡಿಸಿ, ಹೂ ಹಾರ ಹಾಕಿ, ಜೈಕಾರ ಮೊಳಗಿತ್ತು.  ಅಷ್ಟೆ ಅಲ್ಲ ದಾವಣಗೆರೆ. ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ. ಕೊಪ್ಪಳ ಹುಬ್ಬಳ್ಳಿ ಸೇರಿದಂತೆ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲೂ ವಿಕ್ರಾಂತ್ ರೋಣ ಮಯವಾಗಿತ್ತು.


 

Video Top Stories