Asianet Suvarna News Asianet Suvarna News

ಹಾಲಿವುಡ್ ಸ್ಟಾರ್ ಡೈರೆಕ್ಟರ್ ಜೊತೆ ಕಾಣಿಸಿಕೊಂಡ ರಾಕಿಂಗ್‌ ಸ್ಟಾರ್ ಯಶ್!

ರಾಕಿ ಭಾಯ್ ಯಶ್ ಟಾರ್ಗೆಟ್ ಮತ್ತಷ್ಟು ದೊಡ್ಡದಾಯ್ತಾ? ಯಶ್ ಕೆಜಿಎಫ್‌ಗಿಂತಲೂ ದೊಡ್ಡ ಕನಸು ಕಂಡಿದ್ದಾರಾ? ಹೀಗೊಂದು ಡೌಟ್ ಈಗ ಹುಟ್ಟಿದೆ. ಅದಕ್ಕೆ ಕಾರಣ ಆಗಿದ್ದು, ಸೋಷಿಯಲ್ ಸಮುದ್ರದಲ್ಲಿ ಹರಿದಾಡಿದ್ದ ಯಶ್ ಫೈರಿಂಗ್ ವೀಡಿಯೋ. 

Oct 1, 2022, 12:19 PM IST

ರಾಕಿ ಭಾಯ್ ಯಶ್ ಟಾರ್ಗೆಟ್ ಮತ್ತಷ್ಟು ದೊಡ್ಡದಾಯ್ತಾ? ಯಶ್ ಕೆಜಿಎಫ್‌ಗಿಂತಲೂ ದೊಡ್ಡ ಕನಸು ಕಂಡಿದ್ದಾರಾ? ಹೀಗೊಂದು ಡೌಟ್ ಈಗ ಹುಟ್ಟಿದೆ. ಅದಕ್ಕೆ ಕಾರಣ ಆಗಿದ್ದು, ಸೋಷಿಯಲ್ ಸಮುದ್ರದಲ್ಲಿ ಹರಿದಾಡಿದ್ದ ಯಶ್ ಫೈರಿಂಗ್ ವೀಡಿಯೋ. ಈ ವೀಡಿಯೋದಲ್ಲಿ ಯಶ್ ಹಾಲಿವುಡ್ ಡೈರೆಕ್ಟರ್ ಜೆ.ಜೆ.ಪೆರ್ರಿ ಜೊತೆ ಕಾಣಿಸಿಕೊಂಡಿದ್ದಾರೆ. ಯಶ್ ಫೈಯರ್ ಮಾಡಿದ್ದನ್ನ ನೋಡಿ ಈ ಹಾಲಿವುಡ್ ಡೈರೆಕ್ಟರ್ ಫುಲ್ ಥ್ರಿಲ್ ಆಗಿದ್ರು. ಹಾಲಿವುಡ್ ಸಿನಿಮಾ ರಂಗದಲ್ಲಿ ಜೆಜೆ ಪೆರ್ರಿಯದ್ದು, ಬಹುದೊಡ್ಡ ಹೆಸರು. ಸಾವಿರಾರು ಕೋಟಿ ಬಜೆಟ್ ಸಿನಿಮಾಗಳಿಗೆ ಸ್ಟಂಟ್ ನಿರ್ದೇಶಕರಾಗಿ ಹಾಗೂ ಇತ್ತೀಚಿನ ದಿನಗಳಲ್ಲಿ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಆ್ಯಕ್ಷನ್ ದೃಶ್ಯಗಳಿಗೆ ಹೇಳಿ ಮಾಡಿಸಿದ ನಿರ್ದೇಶಕ ಜೆ ಜೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಜೆ.ಜೆ.ಪೆರ್ರಿಯನ್ನ ಭೇಟಿ ಮಾಡಿ ಬಂದಿದ್ದಾರೆ. ಈ ಭೇಟಿ ಅಮೆರಿಕಾದಲ್ಲಿ ನಡೆದಿದ್ದು, ಈ ಭೇಟಿ ಹಿಂದಿನ ಗುಟ್ಟು ಬಯಲಾಗಬೇಕಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment