Asianet Suvarna News Asianet Suvarna News

Kantara Collection: ಬಾಕ್ಸಾಫೀಸಲ್ಲಿ 'ಕಾಂತಾರ' ಪಾರುಪತ್ಯ: ಡಿಜಿಟಲ್ ಹಕ್ಕಿನಲ್ಲೂ ಕಮಾಲ್‌!

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರದ ಅಬ್ಬರ ಈಗಾಗಲೇ ಎಲ್ಲೆಡೆ ಕೇಳುತ್ತಿದೆ. ಸಿನಿಮಾ ರಿಲೀಸ್ ಆಗಿ ಐದೇ ದಿನದಲ್ಲಿ 50 ಕೋಟಿ ಕ್ಲಬ್ ಸೇರಿದೆ ಅಂತ ಹೇಳಲಾಗ್ತಿದೆ. ಈ ಬೆನ್ನಲ್ಲೇ ಕಾಂತಾರ ಸ್ಯಾಟಲೈಟ್ ಹಾಗೂ ಓಟಿಟಿ ವಲಯದಲ್ಲೂ ಜಾಕ್‌ಪಾಟ್ ಹೊಡೆದಿದೆ.

Oct 6, 2022, 1:16 PM IST

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರದ ಅಬ್ಬರ ಈಗಾಗಲೇ ಎಲ್ಲೆಡೆ ಕೇಳುತ್ತಿದೆ. ಸಿನಿಮಾ ರಿಲೀಸ್ ಆಗಿ ಐದೇ ದಿನದಲ್ಲಿ 50 ಕೋಟಿ ಕ್ಲಬ್ ಸೇರಿದೆ ಅಂತ ಹೇಳಲಾಗ್ತಿದೆ. ಈ ಬೆನ್ನಲ್ಲೇ ಕಾಂತಾರ ಸ್ಯಾಟಲೈಟ್ ಹಾಗೂ ಓಟಿಟಿ ವಲಯದಲ್ಲೂ ಜಾಕ್‌ಪಾಟ್ ಹೊಡೆದಿದೆ. ಹೊಂಬಾಳೆ ನಿರ್ಮಿಸಿದ ಕೆಜಿಎಫ್ 2 ಬಳಿಕ ಕಾಂತಾರ ಸದ್ದಿಗೆ ಪರಭಾಷೆಯ ಸಿನಿಮಾಗಳೂ ಕೂಡ ಗಪ್ ಚುಪ್ ಆಗಿದೆ. ದೊಡ್ಡ ದೊಡ್ಡ ಸಿನಿಮಾ ರಿಲೀಸ್ ಗಳ ಮಧ್ಯೆ ಕರ್ನಾಟಕದಲ್ಲಿ ಕಾಂತಾರನೇ ಪಾರುಪಥ್ಯ ವಹಿಸಿದೆ. ಹೀಗಾಗಿ ಇದೂವರೆಗೂ ಥಿಯೇಟರ್‌ನಲ್ಲಿ ಕೋಟಿ ಕೋಟಿ ಬಾಚುತ್ತಿದ್ದ ಸಿನಿಮಾ, ಸ್ಯಾಟಲೈಟ್ ರೈಟ್ಸ್ ಹಾಗೂ ಓಟಿಟಿ ರೈಟ್ಸ್ ನಿಂದಲೂ ಕೋಟಿ ಲೆಕ್ಕದಲ್ಲಿ ಬಾಚಿಕೊಂಡಿದೆ. ಸಾಮಾನ್ಯವಾಗಿ ಒಂದು ಸಿನಿಮಾ ಬಿಡುಗಡೆಗೂ ಮೊದಲೇ ಸ್ಯಾಟಲೈಟ್ ಹಾಗೂ ಓಟಿಟಿಗೆ ಸೇಲ್ ಆಗುತ್ತೆ. ಆದರೆ, ಕಾಂತಾರ ಸಿನಿಮಾದ ಮೇಲೆ ಬಹಳ ಭರವಸೆ ಇದ್ದಿದ್ದರಿಂದ ಸ್ಯಾಟಲೈಟ್‌ಗೆ ಹಾಗೂ ಟಿವಿಗೆ ಹಕ್ಕುಗಳನ್ನು ಮಾರಾಟ ಮಾಡಿರಲಿಲ್ಲ. ಸದ್ಯ ಕಾಂತಾರ ಸಿನಿಮಾದ ಸ್ಯಾಟಲೈಟ್ಸ್ ರೈಟ್ಸ್ ಕೂಡ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗಿದೆ. ಸ್ಟಾರ್ ಸುವರ್ಣಗೆ ಕಾಂತಾರ ಸೇಲ್ ಆಗಿದ್ದು, ಸುಮಾರು 6 ರಿಂದ 7 ಕೋಟಿ ರೂ.ಗೆ ಮಾರಾಟ ಆಗಿದೆ ಅಂತ ಕಿರುತೆರೆ ವಲಯದಲ್ಲಿ ಓಡಾಡುತ್ತಿದೆ. ಹಾಗೇ ಒಟಿಟಿಗೆ ಬಂದರೆ ಕಾಂತಾರ ಅಮೆಜಾನ್ ಪ್ರೈಂಗೆ ಸಿನಿಮಾ ಸೋಲ್ಡ್ ಆಗಿದೆ. ಅಮೆಜಾನ್ ಪ್ರೈಂ ಸುಮಾರು 7 ಕೋಟಿ ರೂ. ಈ ಸಿನಿಮಾವನ್ನು ಕೊಂಡುಕೊಂಡಿದೆ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment