Asianet Suvarna News Asianet Suvarna News

ಲವ್ಲಿ ಸ್ಟಾರ್ ಪ್ರೇಮ್ 'ಪ್ರೇಮಂ ಪೂಜ್ಯಂ'ಗೆ ಯು/ಎ ಸರ್ಟಿಫೀಕೆಟ್‌

ಶ್ರೀಹರಿ ಪಾತ್ರದಲ್ಲಿ ಪ್ರೇಮ್ ಕಾಣಿಸಿಕೊಳ್ಳುತ್ತಿರುವ 'ಪ್ರೇಮಂ ಪೂಜ್ಯಂ' ಚಿತ್ರವನ್ನು ಸೆನ್ಸಾರ್ ಮಂಡಳಿಯವರು ವೀಕ್ಷಿಸಿ ಚಿತ್ರದ ಬಗ್ಗೆ ಉತ್ತಮವಾದ ಪ್ರಶಂಸೆಯನ್ನು ವ್ಯಕ್ತಪಡಿಸಿ 'ಯು/ಎ ಪ್ರಮಾಣ ಪತ್ರ'ವನ್ನು ನೀಡಿದ್ದಾರೆ

'ನೆನಪಿರಲಿ' ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಅವರ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' (Premam Poojyam) ಚಿತ್ರದ ಟ್ರೈಲರ್ (Trailer) ಇತ್ತಿಚೆಗಷ್ಟೇ ಬಿಡುಗಡೆಯಾಗಿ ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಇದೀಗ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು/ಎ ಪ್ರಮಾಣ ಪತ್ರ' (U/A Certificate) ಸಿಕ್ಕಿದೆ. ಹೌದು! ಸೆನ್ಸಾರ್ ಮಂಡಳಿಯವರು ಚಿತ್ರವನ್ನು ವೀಕ್ಷಿಸಿ ಚಿತ್ರದ ಬಗ್ಗೆ ಉತ್ತಮವಾದ ಪ್ರಶಂಸೆಯನ್ನು ವ್ಯಕ್ತಪಡಿಸಿ 'ಯು/ಎ ಪ್ರಮಾಣ ಪತ್ರ'ವನ್ನು ನೀಡಿದ್ದಾರೆ. ಶ್ರೀಹರಿ ಪಾತ್ರದಲ್ಲಿ ಪ್ರೇಮ್ ಕಾಣಿಸಿಕೊಳ್ಳುತ್ತಿರುವ ಈ ಚಿತ್ರವನ್ನು ವೈದ್ಯ ಮತ್ತು ಪ್ರಾಧ್ಯಾಪಕ ರಾಘವೇಂದ್ರ ಬಿ.ಎಸ್ (Dr. Raghavendra BS) ನಿರ್ದೇಶಿಸುವುದರ ಜೊತೆಗೆ, ಕಥೆ ಮತ್ತು ಚಿತ್ರಕಥೆಯನ್ನು ಬರೆದಿರುವ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನೂ ಸಹ ಮಾಡಿದ್ದಾರೆ. ತಮ್ಮ ಚೊಚ್ಚಲ ಚಿತ್ರಕ್ಕಾಗಿ ಅನೇಕ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. 

ನೆನಪಿರಲಿ ಪ್ರೇಮ್‌ ಹೇಳಿದ ಕೆಲವು ಸಂಗತಿಗಳಿವು

 ಇನ್ನು 'ಲೈಫ್ ಜತೆ ಒಂದ್ ಸೆಲ್ಫಿ' (Life Jothe Ond Selfie) ಸಿನಿಮಾದ ನಂತರ ಪ್ರೇಮ್ ಅವರು ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಮುಖ್ಯವಾಗಿ ಪ್ರೇಮ್ ಅವರು ತಮ್ಮ 25ನೇ ಚಿತ್ರವು ವಿಶೇಷವಾಗಿರಬೇಕು ಎಂದು ಅಳೆದುತೂಗಿ ಈ ಚಿತ್ರದ ಪಾತ್ರವನ್ನು ಒಪ್ಪಿಕೊಂಡು ಅಭಿನಯಿಸಿದ್ದಾರೆ. 'ಪ್ರೇಮಂ ಪೂಜ್ಯಂ' ಚಿತ್ರದಲ್ಲಿ ಪ್ರೇಮ್ ಎದುರಿಗೆ ನಾಯಕಿಯಾಗಿ ಶೃಂಗೇರಿ ಹುಡುಗಿ ಬೃಂದಾ ಆಚಾರ್ಯ (Brunda Acharya) ನಟಿಸಿದ್ದು,  ಐಂದ್ರಿತಾ ರೇ (Aindrita Ray), ಸುಮನ್ (Suman), ಮಾಸ್ಟರ್ ಆನಂದ್ (Master Anand), ಸಾಧು ಕೋಕಿಲಾ (Sadhu Kokila), ಅನು ಪ್ರಭಾಕರ್ (Anu Prabhakar, ತಪಸ್ವಿನಿ (Tapaswini) ಸೇರಿದಂತೆ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ (T.S.Nagabharana) ಸಹ ತೆರೆ ಹಂಚಿಕೊಂಡಿದ್ದಾರೆ. ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment

Video Top Stories