Asianet Suvarna News Asianet Suvarna News

ನವರಸ ನಾಯಕ ಜಗ್ಗೇಶ್ ಕೊಟ್ಟ ಸಿಹಿ ಸಿಹಿಯಾದ 'ತೋತಾಪುರಿ' ತಿಂದ ಪ್ರೇಕ್ಷಕ

ಮಾವಿನ ಸೀಸನ್ ಈಗಷ್ಟೆ ಮುಗಿದೆ. ಅಪರೂಪಕ್ಕೆ ಒಂದ್ ತೋತಾಪುರಿ ಮಾವಿನ ಹಣ್ಣು ತಿನ್ನಬೇಕು ಅಂತ ಆಸೆ ಇದ್ರೆ ಈ ಕೂಡ್ಲೆ ಥಿಯೇಟರ್ಗೆ ಹೋಗಿ ಯಾಕ್ ಗೊತ್ತಾ..? ನವರಸ ನಾಯಕ ಜಗ್ಗೇಶ್ ನಾಯಕನಾಗಿ ನಟಿಸಿರೋ ತೋತಾಪುರಿ ಸಿನಿಮಾ ಬೆಳ್ಳಿತೆರೆ ಮೇಲೆ ಬಂದಿದೆ.

Oct 1, 2022, 12:00 PM IST

ಮಾವಿನ ಸೀಸನ್ ಈಗಷ್ಟೆ ಮುಗಿದೆ. ಅಪರೂಪಕ್ಕೆ ಒಂದ್ ತೋತಾಪುರಿ ಮಾವಿನ ಹಣ್ಣು ತಿನ್ನಬೇಕು ಅಂತ ಆಸೆ ಇದ್ರೆ ಈ ಕೂಡ್ಲೆ ಥಿಯೇಟರ್ಗೆ ಹೋಗಿ ಯಾಕ್ ಗೊತ್ತಾ..? ನವರಸ ನಾಯಕ ಜಗ್ಗೇಶ್ ನಾಯಕನಾಗಿ ನಟಿಸಿರೋ ತೋತಾಪುರಿ ಸಿನಿಮಾ ಬೆಳ್ಳಿತೆರೆ ಮೇಲೆ ಬಂದಿದೆ. ಜಗ್ಗೇಶ್ ಕೊಟ್ಟ ಈ ಸಿಹಿ ಸಿಹಿಯಾದ 'ತೋತಾಪುರಿ'ಯನ್ನ ಪ್ರೇಕ್ಷಕರು ತಿಂದು ತೇಗುತ್ತಿದ್ದಾರೆ. ನಿರ್ದೇಶಕ ವಿಜಯ್ ಪ್ರಸಾದ್ ಟ್ಯಾಲೆಂಟ್ ಏನು ಅಂತ ಹಿಂದಿನ ಸಿನಿಮಾಗಳಲ್ಲಿ ನೀವೆಲ್ಲಾ ನೋಡಿದ್ದೀರಾ. ಯಾವ್ದೇ ಸಿನಿಮಾ ಆದ್ರು ಹ್ಯೂಮರಸ್ ಕಾಮಿಡಿ ಮೂಲಕ ಸಮಾಜಕ್ಕೊಂದು ಸಂದೇಶ ಕೊಡ್ತಾರೆ. ಈಗ ಬಂದಿರೋ ತೋತಾಪುರಿ ಸಿನಿಮಾದಲ್ಲೂ ಅಂತದ್ದೇ ಇಂಟ್ರೆಸ್ಟಿಂಗ್ ಸ್ಟೋರಿ ಜಾತಿ ವ್ಯಸ್ಥೆಯ ಸೂಕ್ಷ್ಮ ವಿಚಾರವನ್ನ ತೋತಾಪುರಿ ಸಿನಿಮಾದಲ್ಲಿ ಹಾಸ್ಯದ ಮೂಲಕ ಮನ ಮುಟ್ಟುವಂತೆ ಹೇಳಿದ್ದಾರೆ. ಹೀಗಾಗಿ ಈ ಸಿನಿಮಾಗೆ ಸಿಕ್ಕ ಜನ ಬೆಂಬಲ ಕಂಡು ಅವರ ಮಧ್ಯೆಯೇ ನಿರ್ದೇಶಕ ವಿಜಯ್ ಪ್ರಸಾದ್ ಕುಣಿದು ಕುಪ್ಪಳಿಸಿದ್ರು. ನಟಿ ಅಧಿತಿ ಪ್ರಭುದೇವ ಕೂಡ ಸಿನಿಮಾ ಗೆದ್ದ ಖುಷಿಯಲ್ಲೇ ಇದ್ರು. ತೋತಾಪುರಿ ಚಿತ್ರಕ್ಕೆ ಸುರೇಶ್ ಬಂಡವಾಳ ಹೂಡಿದ್ದಾರೆ. ಜಗ್ಗೇಶ್, ಅದಿತಿ ಪ್ರಭುದೇವ ಕಾಂಬಿನೇಷನ್ ಸಿಕ್ಕಾಪಟ್ಟೆ ಎಂಟರ್ಟೈನ್ ಮಾಡಿದ್ದಾರೆ. ಇದರ ಜೊತೆ ಸುಮನ್ ರಂಗನಾಥ್, ವೀಣಾ ಸುಂದರ್, ಡಾಲಿ ಧನಂಜಯ್, ದತ್ತಣ್ಣ ಭರ್ಜರಿಯಾಗಿ ನಟಿಸಿದ್ದಾರೆ. ತೋತಾಪುರಿ ಪಾರ್ಟ್-1 ನೋಡಿ ಎಂಜಾಯ್ ಮಾಡುತ್ತಿರೋ ಪ್ರೇಕ್ಷಕರಿಗೆ ಮುಂದಿನ ವರ್ಷ ತೋತಾಪುರಿ ಪಾರ್ಟ್-2 ಕೂಡ ಸಿಗಲಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment