Asianet Suvarna News Asianet Suvarna News

ಟಗರುಗೆ ಮುತ್ತಿಟ್ಟ ಧ್ರುವ ಸರ್ಜಾ: ದುಬೈನಲ್ಲಿ ಹೆಡ್‌ಬುಷ್, ಕಬ್ಜ ಟೀಂ!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಮಾರ್ಟಿನ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಇದರ ಮಧ್ಯೆ ಧ್ರುವನ ಫೋಟೋ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಧ್ರುವ ಸರ್ಜಾ ಟಗರು ಹಣೆಗೆ ಮುತ್ತಿಟ್ಟಿದ್ದಾರೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಮಾರ್ಟಿನ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಇದರ ಮಧ್ಯೆ ಧ್ರುವನ ಫೋಟೋ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಧ್ರುವ ಸರ್ಜಾ ಟಗರು ಹಣೆಗೆ ಮುತ್ತಿಟ್ಟಿದ್ದಾರೆ. ಮತ್ತೊಂದ್ ಕಡೆ ಧ್ರುವ ಹಾಗು ಪ್ರೇಮ್ ಸಿನಿಮಾದ ಟೈಟಲ್ ಅನೌನ್ಸ್ ದಿನಾಂಕ ನಿಗದಿಯಾಗಿದ್ದು, ಆಯುಧ ಪೂಜೆ ದಿನ ಟೈಟಲ್ ಅನಾವರಣ ಆಗಲಿದೆ. 

ದುಬೈನಲ್ಲಿ ಹೆಡ್‌ಬುಷ್, ಕಬ್ಜ ಟೀಂ: ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ, ದುಬೈನಲ್ಲಿ ಡಾ.ರಾಜ್ ಕಪ್ ಕ್ರಿಕೆಟ್ ಟೂರ್ನಿಮೆಂಟ್ ನಡೆದಿದೆ. ಕನ್ನಡ ಸೆಲೆಬ್ರೆಟಿಗಳ ಈ ಕ್ರಿಕೆಟ್ ಹಬ್ಬ ದುಬೈನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದು, ಈ ಕ್ರಿಕೆಟ್ ಟೂರ್ನಿಯಲ್ಲಿ ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ತಂಡ ಹಾಗು ಡಾಲಿ ಧನಂಜಯ್‌ರ ಹೆಡ್‌ಬುಷ್ ಚಿತ್ರತಂಡ ಭಾಗಿ ಆಗಿದೆ. ಕ್ರಿಕೆಟ್ ಟೂರ್ನಿಯಲ್ಲಿ ಕಬ್ಜ ಹೀರೋ ಉಪೇಂದ್ರ ನಿರ್ದೇಶಕ ಆರ್ ಚಂದ್ರು, ಹಾಗು ಡಾಲಿ ಧನಂಜಯ್ ಕೆ.ಪಿ ಶ್ರೀಕಾಂತ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕಬ್ಜ ಸಿನಿಮಾ ಟೀಸರ್ ಹಿಟ್ ಆಗಿದ್ದಕ್ಕೆ ಚಿತ್ರತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment