Asianet Suvarna News Asianet Suvarna News

ಅಯ್ಯೋ ಭಟ್ರು ಲೂಸ್ ಆಗವ್ರಂತೆ; ಹೆಂಡತಿ, ಮಗಳೇ ಕನ್ಫರ್ಮ್ ಮಾಡಿದ್ದಾರೆ

 ಭಟ್ರು ಲೂಸ್ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಯೋಗರಾಜ್ ಭಟ್ ಅವರ ಒಂದು ವಿಡಿಯೋವನ್ನು ಮಗಳು ಶೇರ್ ಮಾಡಿದ್ದಾರೆ. ಭಟ್ಟರ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. 

Aug 14, 2022, 4:26 PM IST

ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗಾಳಿಪಟ-2 ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಗಾಳಿಪಟ-2 ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಗೆ ಅಭಿಮಾನಿಗಳು ಮತ್ತೊಮ್ಮೆ ಫಿದಾ ಆಗಿದ್ದಾರೆ. ಈ ನಡುವೆ  ಭಟ್ರು ಲೂಸ್ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಯೋಗರಾಜ್ ಭಟ್ ಅವರ ಒಂದು ವಿಡಿಯೋವನ್ನು ಮಗಳು ಶೇರ್ ಮಾಡಿದ್ದಾರೆ. ಭಟ್ಟರ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಸಿನಿಮಾ ರಿಲೀಸ್ ಆದಾಗ ಅಭಿಮಾನಿಯೊಬ್ಬರು ಭಟ್ರಿಗೆ ಲಿಪ್ ಕಿಸ್ ಕೊಟ್ಟ ಬಳಿಕ ಮನೆಯಿಂದ ಹೊರಹೊರಟರೆ ಕುಟುಂಬದವರು ಕಾಲೆಳೆಯುತ್ತಿದ್ದಾರೆ. ಮಗಳು ತಮಾಶೆ ಮಾಡಿದ ವಿಡಿಯೋವನ್ನು ಗಣೇಶ್ ಕೂಡ ಶೇರ್ ಮಾಡಿ ಭಟ್ರು ಲೂಸ್ ಆಗಿದ್ದಾರೆ ಎಂದು ಹೇಳಿದ್ದಾರೆ.   ನಾನು ಹೇಳ್ದೆ 'ನಮ್ ಭಟ್ರು ಲೂಸ್ ಆಗವ್ರೆ' ಅಂತ. ಯಾರೂ ನಂಬಲಿಲ್ಲ. ಇಲ್ಲಿ ನೋಡಿ. 'ಲೂಸ್ ಆಗವ್ರೆ' ಅಂತ ಭಟ್ರ ಹೆಂಡತಿ ಮತ್ತೆ ಮಗಳೇ ಕನ್ಫರ್ಮ್ ಮಾಡ್ತಿದಾರೆ ಎಂದು ಭಟ್ರ ಕಾಲೆಳೆದಿದ್ದಾರೆ.