Asianet Suvarna News Asianet Suvarna News

ಕೀನ್ಯಾ ಮಕ್ಕಳ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಭರ್ಜರಿ ಡ್ಯಾನ್ಸ್!

ಗಾಳಿಪಟ-2 ಹಿಡಿದು ಗೆಲುವಿನ ನಗೆ ಬೀರಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಈಗ ಕೀನ್ಯಾ ಸೇರಿಕೊಂಡಿದ್ದಾರೆ. ಅರೇ ಗಣಿ ಅಲ್ಲೇನ್ ಮಾಡ್ತಾರೆ ಅಂತೀರಾ. ಕೀನ್ಯಾ ಮಕ್ಕಳ ಜೊತೆ ಭರ್ಜರಿ ಡಾನ್ಸ್ ಮಾಡ್ತಾ ಸಮಯ ಕಳೆಯುತ್ತಿದ್ದಾರೆ.

Oct 1, 2022, 12:46 PM IST

ಗಾಳಿಪಟ-2 ಹಿಡಿದು ಗೆಲುವಿನ ನಗೆ ಬೀರಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಈಗ ಕೀನ್ಯಾ ಸೇರಿಕೊಂಡಿದ್ದಾರೆ. ಅರೇ ಗಣಿ ಅಲ್ಲೇನ್ ಮಾಡ್ತಾರೆ ಅಂತೀರಾ. ಕೀನ್ಯಾ ಮಕ್ಕಳ ಜೊತೆ ಭರ್ಜರಿ ಡಾನ್ಸ್ ಮಾಡ್ತಾ ಸಮಯ ಕಳೆಯುತ್ತಿದ್ದಾರೆ. ಗಣಿ ಕೀನ್ಯಾ ಮಕ್ಕಳ ಜೊತೆ ಡಾನ್ಸ್ ಮಾಡೋ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಷ್ಟಕ್ಕು ಗಣಿ ಕೀನ್ಯಾಕೆ ಹೋಗಿದ್ದೇಕೆ ಗೊತ್ತಾ? ಅದು ಬಾನ ದಾರಿಯಲ್ಲಿ ಸಿನಿಮಾದ ಶೂಟಿಂಗ್‌ಗಾಗಿ. ಬಾನ ದಾರಿಯಲ್ಲಿ ಚಿತ್ರಕ್ಕೆ ಪ್ರೀತಂ ಗುಬ್ಬಿ ಆಕ್ಷನ್ ಕಟ್ ಹೇಳುತ್ತಿದ್ದು. ಈ ಚಿತ್ರದ ಚಿತ್ರೀಕರಣಕ್ಕೆ ಇಡೀ ಚಿತ್ರತಂಡ ಕೀನ್ಯಾಗೆ ಹೋಗಿದ್ದಾರೆ. ಆಗ ಶೂಟಿಂಗ್ ಬಿಡುವಿನ ವೇಳೆ ಗಣೇಶ್ ಕೀನ್ಯಾ ಮಕ್ಕಳ ಜೊತೆ ಮಸ್ತ್ ಡಾನ್ಸ್ ಮಾಡಿದ್ದಾರೆ. ಗಣಿ ಹೇಳಿಕೊಡೋ ಪ್ರತಿಯೊಂದು ಸ್ಟೆಪ್ಸ್ಅನ್ನ ಅಲ್ಲಿನ ಮಕ್ಕಳು ಅಚ್ಚುಕಟ್ಟಾಗಿ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment