ಗೋಲ್ಡನ್ ಸ್ಟಾರ್ ಮುಖದಲ್ಲಿ ಮುಗುಳುನಗೆ; ಮತ್ತೆ ಮೋಡಿ ಮಾಡಿದ ಗಣಿ-ಭಟ್ರ ಜೋಡಿ
14 ವರ್ಷಗಳ ನಂತರ ಮತ್ತೆ ಗಣೀ ಭಟ್ಟರ ಗಾಳೀಪಟ ಮತ್ತೆ ಬಂದಿದೆ. ಗಾಳೀಪಟ 2 ನೋಡಿದ ಜನ ವಾ ವಾ ಎನ್ನುತ್ತಿದ್ದಾರೆ. ಇಡೀ ಸಿನಿಮಾ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಳ್ತೀರಿ. ಅದರ ಜೊತೆಗೆ ನಗುವಿನಲ್ಲೆ ಕಣ್ಣಂಚಲಿ ನೀರು ತರಿಸುತ್ತೆ
14 ವರ್ಷಗಳ ನಂತರ ಮತ್ತೆ ಗಣೀ ಭಟ್ಟರ ಗಾಳೀಪಟ ಮತ್ತೆ ಬಂದಿದೆ. ಗಾಳೀಪಟ 2 ನೋಡಿದ ಜನ ವಾ ವಾ ಎನ್ನುತ್ತಿದ್ದಾರೆ. ಇಡೀ ಸಿನಿಮಾ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಳ್ತೀರಿ. ಅದರ ಜೊತೆಗೆ ನಗುವಿನಲ್ಲೆ ಕಣ್ಣಂಚಲಿ ನೀರು ತರಿಸುತ್ತೆ ಆ ಒಂದು ದೃಶ್ಯ. ಮಳೆಯಲ್ಲಿ ನೆನೆಸಿ ಗಾಳಿಪಟದಂತೆ ಹಾರಿಸಿ ಮುಗಳುನಗೆ ಬೀರಿದೆ ಗಾಳಿಪಟ 2. ಯೋಗರಾಜ್ ಭಟ್ರು ಏನೆ ಬರೆದ್ರು ಅದಕ್ಕೆ ಗೋಲ್ಡನ್ ಸ್ಟಾರ್ ಇದ್ದಿದ್ರೆ ಚೆನ್ನಾಗಿರ್ತಿತ್ತು ಎನ್ನುವವರೆ ಜಾಸ್ತಿ. ಉಡಾಫೆ, ಲವಲವಿಕೆ, ತುಂಟತನ, ಮಾತಿನ ಹೂರಣ, ತಾಜಾ ದೃಶ್ಯಗಳ ಚಿತ್ರಣ, ಹಾಡುಗಳ ಇಂಪನ, ರೊಮ್ಯಾಂಟಿಕ್ ದೃಶ್ಯಗಳ ಕಂಪನ. ಅದರಂತೆ ಭಟ್ರ ಶೈಲಿಗೆ ಪಕ್ಕಾ ಹೊಂದಿಕೊಂಡ ಗಣೇಶ್ ಇಡೀ ಸಿನಿಮಾನ ಲೀಡ್ ಮಾಡ್ತಾರೆ. ಮೂವರು ಹುಡುಗರ ಮಜವಾದ ಕತೆ ನಿಜವಾಗಿಯೂ ಮಸ್ತ್ ಮಸ್ತ್. ಗಾಳಿಪಟ ಕತೆಯಲ್ಲಿ ಬಹಳ ಸಂಕ್ಷಿಪ್ತತೆ ಇದೆ, ಒಂದೊಂದು ಪಾತ್ರವೂ ಕೂಡ ಬಹಳ ಅಚ್ಚುಕಟ್ಟಾಗಿ ನಟಿಸಿದ್ದಾರೆ. ಗಣೇಶ್ ಪವನ್ ಮೂವರು ನಾಯಕರ ಜೊತೆಗೆ ವೈಭವೀ ಶಾಂಡಿಲ್ಯ, ಸಂಯುಕ್ತ, ಶರ್ಮಿಳಾ ಮೂವರೂ ಮುದ್ದಾಗಿ ನಟಿಸಿದರೆ ರಂಗಾಯಣ ರಘು ಅನಂತ್ ಣಾಗ್ ಸುಧಾ ಬೆಳವಾಡಿ ಶ್ರೀನಾಥ್ ಪೋಷಕ ಪಾತ್ರಗಳಲ್ಲಿ ಜವಾಬ್ದಾರಿಯಿಂದ ನಟಿಸಿದ್ದಾರೆ.