Asianet Suvarna News Asianet Suvarna News

ಗಾಳಿಪಟ-2 ಸೂಪರ್ ಸಕ್ಸಸ್; ಭಟ್ರಿಗೆ ಮತ್ತಷ್ಟು ಪಪ್ಪಿ ಕೊಡಿ ಎಂದು ಗಣೇಶ್ ಮನವಿ

ಗಾಳಿಪಟ2 ಚಿತ್ರ ಸಕ್ಸಸ್ ಫುಲ್ ಸಿನಿಮಾ ಆದ್ರು ನಿರ್ಮಾಪಕರು ಸಿನಿಮಾ ಕಥೇ ಕೇಳದೇ ಬಂಡವಾಳ ಹಾಕಿದ್ರಂತೆ. ಚಿತ್ರದಲ್ಲಿ  ಗ್ಲಾಮರಸ್ ಟೀಚರ್ ಆಗಿ ಕಾಣಿಸಿಕೊಂಡಿರೋ ಶರ್ಮಿಳಾ ಸಿನಿಮಾದಲ್ಲಿ ಇದ್ರೆ ಸಕ್ಸಸ್ ಅಂತೆ. 

Aug 19, 2022, 12:06 PM IST

ಸ್ಯಾಂಡಲ್ ವುಡ್ ನಲ್ಲಿ ಗಾಳಿಪಟ 2 ಬ್ಲಾಕ್ ಬಾಸ್ಟರ್ ಆಗಿದೆ. ಗಣಿ ಹಾಗೂ ಭಟ್ರು ಮತ್ತೆ ಮ್ಯಾಜಿಕ್ ಮಾಡಿದ್ದು ಸಕ್ಸಸ್ ಸಂಭ್ರಮವನ್ನು ಸೂಪರ್ ಆಗಿ ಸೆಲಬ್ರೇಟ್ ಮಾಡಿದ್ರು. ಈ ಮೀಟ್ ನಲ್ಲಿಯೂ ಸಿನಿಮಾದಂತೆಯೇ ಅಳು, ನಗು, ಸಂಭ್ರಮ ಎಲ್ಲವೂ ಇತ್ತು. ಒಂದಿಷ್ಟು ಸೀಕ್ರೆಟ್ ರಿವಿಲ್ ಕೂಡ ಆಗಿದೆ. ಸಿನಿಮಾ ರಿಲೀಸ್ ದಿನವೇ ನಾ ಪಾಸ್ ಆದೇ ಎಂದಿದ್ದ ನಿರ್ಮಾಪಕರು ಫುಲ್ ಸೇಫ್ ಆಗಿ ಲಾಭ ಏಣಿಸ್ತಾ ಇದ್ದಾರೆ. ವಿಶೇಷ ಅಂದ್ರೆ ಗಾಳಿಪಟ2 ಚಿತ್ರ ಸಕ್ಸಸ್ ಫುಲ್ ಸಿನಿಮಾ ಆದ್ರು ನಿರ್ಮಾಪಕರು ಸಿನಿಮಾ ಕಥೇ ಕೇಳದೇ ಬಂಡವಾಳ ಹಾಕಿದ್ರಂತೆ. ಚಿತ್ರದಲ್ಲಿ  ಗ್ಲಾಮರಸ್ ಟೀಚರ್ ಆಗಿ ಕಾಣಿಸಿಕೊಂಡಿರೋ ಶರ್ಮಿಳಾ ಸಿನಿಮಾದಲ್ಲಿ ಇದ್ರೆ ಸಕ್ಸಸ್ ಅಂತೆ. ಕೇವಲ ಪವನ್ ಕುಮಾರ್ ಕೆರಿಯರ್ ಗೆ ಮಾತ್ರವಲ್ಲ ಗೋಲ್ಡನ್ ಸ್ಟಾರ್ ಕೆರಿಯರ್ ಗೂ ಶರ್ಮಿಳಾ ಸಕ್ಸಸ್ ಫುಲ್ ಹೀರೋಯಿನ್. ಭಟ್ರುಗಾಗಿ ಗಣೇಶ್ ಪಪ್ಪಿ ಮನವಿ ಮಾಡಿದ್ದಾರೆ.